ಭಾನುವಾರ, ಏಪ್ರಿಲ್ 27, 2025
HomeNationalPresidential Election 2022 : ರಾಷ್ಟ್ರಪತಿ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ ಬಳಕೆ ಮಾಡುವುದಿಲ್ಲ ಏಕೆ...

Presidential Election 2022 : ರಾಷ್ಟ್ರಪತಿ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ ಬಳಕೆ ಮಾಡುವುದಿಲ್ಲ ಏಕೆ ಗೊತ್ತಾ?

- Advertisement -

ಭಾರತದ 15 ನೇ ರಾಷ್ಟ್ರಪತಿಯನ್ನು (President) ಆಯ್ಕೆ ಮಾಡುವ ಗುರಿ ಹೊಂದಿರುವ ‘ರಾಷ್ಟ್ರಪತಿ ಚುನಾವಣೆ 2022’ (Presidential Election 2022) ರ ಮತದಾನವು ಸೋಮವಾರ (Monday, July 18 2022) ಸಂಸತ್ತು ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ನಡೆಯಿತು. ಈ ವರ್ಷ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದ ಅಭ್ಯರ್ಥಿಯಾದ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷದ ಯಶವಂತ್ ಸಿನ್ಹಾ ಅವರ ನಡುವೆ ಸ್ಪರ್ಧೆಯಿದೆ.

ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಡೆದ ಮತದಾನದಲ್ಲಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (EVM) ಬದಲಿಗೆ ಮತಪೆಟ್ಟಿಗೆಗಳನ್ನು ಬಳಸಲಾಗಿದೆ. ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (EVMs)ಗಳನ್ನು 2004 ರಿಂದ ನಾಲ್ಕು ಲೋಕಸಭೆ ಚುನಾವಣೆ ಮತ್ತು 127 ವಿಧಾನಸಭಾ ಚುನಾವಣೆಗಳಲ್ಲಿ ಬಳಸಲಾಗಿದೆ. ಆದರೆ, ರಾಷ್ಟ್ರಪತಿ ಚುನಾವಣೆಗೆ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ ಳನ್ನು ಬಳಸುವುದಿಲ್ಲ. ಹಾಗಾದರೆ, ಮತಪೆಟ್ಟಿಗೆಗಳನ್ನೇ ಬಳಸಲು ಕಾರಣವಾದರೂ ಏನು?

ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ಗಳು ತಂತ್ರಜ್ಞಾನ(Technology) ಅನ್ನು ಆಧರಿಸಿವೆ. ಅವುಗಳು ನೇರ ಚುನಾವಣೆಗಳಲ್ಲಿ ಮತಗಳ ಒಟ್ಟುಗೂಡಿಸುವಿಕೆಯಾಗಿ (aggregator of votes) ಕಾರ್ಯನಿರ್ವಹಿಸುತ್ತವೆ. ಮತದಾರನು ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಗುಂಡಿಯನ್ನು ಒತ್ತುತ್ತಾನೆ. ಚುನಾವಣೆಯಲ್ಲಿ ಗರಿಷ್ಠ ಮತಗಳನ್ನು ಪಡೆದ ಅಭ್ಯರ್ಥಿಗಳು ಚುನಾಯಿತರಾಗುತ್ತಾರೆ.

ಆದರೆ, ಅಧ್ಯಕ್ಷೀಯ ಚುನಾವಣೆಯ (Presidential Election) ಸಂದರ್ಭದಲ್ಲಿ ಅದು ಸಾಧ್ಯವಾಗುವುದಿಲ್ಲ. ಏಕೆಂದರೆ, ಅಧ್ಯಕ್ಷೀಯ ಚುನಾವಣೆಯು ಒಂದೇ ವರ್ಗಾವಣೆ ಮತ ಪದ್ಧತಿಯ ಮೂಲಕ ನಡೆಯುತ್ತದೆ. ಈ ವ್ಯವಸ್ಥೆಯ ಅಡಿಯಲ್ಲಿ, ಪ್ರತಿಯೊಬ್ಬ ಮತದಾರರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಗುರುತಿಸುತ್ತಾರೆ. ಉದಾಹರಣೆಗೆ, ಬ್ಯಾಲೆಟ್ ಪೇಪರ್‌ನ ಕಾಲಂ 2 ರಲ್ಲಿ ಒದಗಿಸಲಾದ ಜಾಗದಲ್ಲಿ ಅಭ್ಯರ್ಥಿಗಳ ಹೆಸರಿನ ಮುಂದೆ 1,2,3, 4, 5, ಮತ್ತು ಮುಂತಾದ ಅಂಕೆಗಳನ್ನು ಬರೆಯುವ ಮೂಲಕ ಸಂಸದ ಅಥವಾ ಶಾಸಕರು ಅಭ್ಯರ್ಥಿಗಳಿಗೆ ತಮ್ಮ ಆದ್ಯತೆಗಳನ್ನು ಗುರುತಿಸುತ್ತಾರೆ.

ಈ ಮತದಾನದ ವ್ಯವಸ್ಥೆಯನ್ನು ನೋಂದಾಯಿಸಲು ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ ಗಳನ್ನು ವಿನ್ಯಾಸಗೊಳಿಸಲಾಗಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದ ಅಧಿಕಾರಿಗಳು ಹೇಳಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಬೇರೆ ರೀತಿಯ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ನ ಅಗತ್ಯವಿದೆ ಎಂದು ಅವರು ಹೇಳುತ್ತಾರೆ.

ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (EVM) ನ ಬಳಕೆ ಪ್ರಾರಂಭವಾಗಿದ್ದು ಯಾವಾಗ?

ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (EVM) ನ ಮೊದಲ ಬಾರಿಗೆ 1979 ರಲ್ಲಿ ಅಭಿವೃದ್ಧಿಪಡಿಸಲಾಯಿತು. ಅವುಗಳನ್ನು ಮೊದಲು 1982 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಯಿತು. ಆದರೆ ಅದರ ಬಳಕೆಯನ್ನು ಸೂಚಿಸುವ ನಿರ್ದಿಷ್ಟ ಕಾನೂನ ಇರದ ಕಾರಣ ಸುಪ್ರೀಂ ಕೋರ್ಟ್ ಆ ಚುನಾವಣೆಯನ್ನು ಅಲ್ಲಗಳೆಯಿತು.

ಅದಾದ ನಂತರ 1989 ರಲ್ಲಿ, ಸಂಸತ್ತು ಚುನಾವಣೆಗಳಲ್ಲಿ EVMಗಳ ಬಳಕೆಗಾಗಿ ನಿಬಂಧನೆಯನ್ನು ರಚಿಸುವ ಸಲುವಾಗಿ ಪ್ರಜಾಪ್ರತಿನಿಧಿ ಕಾಯಿದೆ, 1951 ಅನ್ನು ತಿದ್ದುಪಡಿ ಮಾಡಿತು. EVM ಗಳನ್ನು ಪರಿಚಯಿಸುವ ಬಗ್ಗೆ 1998 ರಲ್ಲಿ ಮಾತ್ರ ಸಾಮಾನ್ಯ ಒಮ್ಮತವನ್ನು ತಲುಪಲು ಸಾಧ್ಯವಾಯಿತು. ನಂತರ ನಡೆದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಾದ್ಯಂತ ಹರಡಿರುವ 25 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಇದನ್ನು ಬಳಸಲಾಯಿತು.

ಮೇ 2001 ರಲ್ಲಿ ತಮಿಳುನಾಡು, ಕೇರಳ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ EVMಗಳನ್ನು ಬಳಸಲಾಯಿತು. ಅಂದಿನಿಂದ ಪ್ರತಿ ರಾಜ್ಯದ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗವು EVMಗಳನ್ನು ಬಳಸುತ್ತಿದೆ.

ಇದನ್ನೂ ಓದಿ : rishi sunak tops : ಬ್ರಿಟನ್​ ಪ್ರಧಾನಿ ರೇಸ್​ನ ಅಂತಿಮ ಸುತ್ತಿನಲ್ಲೂ ಅಗ್ರಸ್ಥಾನದಲ್ಲಿ ರಿಷಿ ಸುನಕ್​​​

ಇದನ್ನೂ ಓದಿ : Ola Electric Sportscar : ಭಾರತದಲ್ಲೂ ಪ್ರಾರಂಭವಾಗಲಿರುವ ಓಲಾ ಎಲೆಕ್ಟ್ರಿಕಲ್‌ ಸ್ಪೋರ್ಟ್ಸ್‌ ಕಾರ್‌!

(Presidential Election 2022 why the electronic voting machine is not used)

RELATED ARTICLES

Most Popular