ಚಂಡೀಗಢ : Punjab CM Bhagwant Mann : ಪಂಜಾಬ್ ಸಿಎಂ ಭಗವಂತ್ ಮಾನ್ ಅಧಿಕಾರವಹಿಸಿಕೊಂಡಾಗಿನಿಂದ ವಿಐಪಿ ಸಂಸ್ಕೃತಿಗೆ ರಾಜ್ಯದಲ್ಲಿ ಬ್ರೇಕ್ ಹಾಕುವ ಮೂಲಕ ಸುದ್ದಿಯಾಗಿದ್ದಾರೆ. ಇದೀಗ ಪಂಜಾಬ್ನ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಾಳೆ ಪಂಜಾಬ್ನ ಮುಖ್ಯಮಂತ್ರಿ ಭಗವಂತ್ ಮಾನ್ ಡಾ. ಗುರುಪ್ರೀತ್ ಕೌರ್ ಜೊತೆಯಲ್ಲಿ ಎರಡನೇ ವಿವಾಹವಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚಂಡೀಘಡ್ನಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಭಾಗಿಯಾಗುವ ನಿರೀಕ್ಷೆಯಿದೆ.
ಈ ಮೊದಲೇ ತಿಳಿಸಿದಂತೆ ಭಗವಂತ್ ಮಾನ್ಗೆ ಇದು ಎರಡನೇ ಮದುವೆ. ಆರು ವರ್ಷಗಳ ಹಿಂದೆ ಭಗವಂತ್ ಮಾನ್ ತಮ್ಮ ಮಾಜಿ ಪತ್ನಿ ಇಂದರ್ಜೀತ್ ಕೌರ್ಗೆ ವಿಚ್ಛೇದನ ನೀಡುವ ಮೂಲಕ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದರು. ಪತಿಯಿಂದ ವಿಚ್ಛೇದನ ಪಡೆದ ಇಂದರ್ಜೀತ್ ಕೌರ್ ತಮ್ಮ ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ .
2015ರಲ್ಲಿ ಇಂದರ್ಜೀತ್ ಕೌರ್ಗೆ ವಿಚ್ಛೇದನ ನೀಡುವ ಸಂದರ್ಭದಲ್ಲಿ ಭಗವಂತ್ ಮಾನ್ ಲೋಕಸಭಾ ಸಂಸದರಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ತಮ್ಮ ವಿಚ್ಛೇದನದ ವಿಚಾರವಾಗಿ ಮಾತನಾಡಿದ್ದ ಇಂದರ್ಜೀತ್ ಕೌರ್, ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಚುನಾಯಿತನಾಗಿರುವ ನಾನು ಸಾರ್ವಜನಿಕರ ಪ್ರತಿನಿಧಿಯಾಗಿರುವುದರಿಂದ ನನಗೆ ಅಮೆರಿಕಕ್ಕೆ ಹೋಗಿ ನೆಲೆಸಲು ಸಾಧ್ಯವಾಗುವುದಿಲ್ಲ. ಇಂದರ್ಜಿತ್ ಕೌರ್ಗೆ ಅಮೆರಿಕವನ್ನು ಬಿಟ್ಟು ಭಾರತಕ್ಕೆ ಬಂದು ನೆಲೆಸಲು ಒಪ್ಪಿಗೆಯಿಲ್ಲ. ಹೀಗಾಗಿ ನಾವು ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಹೇಳಿದ್ದರು.
ವಿಚ್ಛೇದನದ ಬಳಿಕವೂ ಭಗವಂತ್ ಮಾನ್ ತಮ್ಮ ಮಾಜಿ ಪತ್ನಿಯ ತಾಯಿ ಹಾಗೂ ತನ್ನಿಬ್ಬರು ಮಕ್ಕಳ ಜೊತೆಯಲ್ಲಿ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದಾರೆ. ಪಂಜಾಬ್ನ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಇಬ್ಬರು ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದನ್ನು ಓದಿ : Racist Abuse : ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರಿಗೆ ಇಂಗ್ಲೀಷರಿಂದ ಜನಾಂಗೀಯ ನಿಂದನೆ !
ಇದನ್ನೂ ಓದಿ : Chandrasekhar Guruji : ಚಂದ್ರಶೇಖರ್ ಗುರೂಜಿ ಯಾರು : ಇವರ ಹಿನ್ನೆಲೆ ಏನು, ಇಲ್ಲಿದೆ ಮಾಹಿತಿ
Punjab CM Bhagwant Mann set to tie the knot for second time in private ceremony tomorrow