- Advertisement -
ಬ್ರಹ್ಮಾವರ : ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ (ಕೆಎಫ್ ಡಿಸಿ) ನಿರ್ದೇಶಕರನ್ನಾಗಿ ಯುವ ಮೀನುಗಾರರ ಮುಖಂಡ ಸಂದೀಪ್ ಕುಂದರ್ ಕೋಡಿ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸಂದೀಪ್ ಕುಂದರ್ ಕೋಡಿ ಮೀನುಗಾರರ ಯುವ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ನಿರ್ದೇಶಕರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದು, ತಮ್ಮ ಅಧಿಕಾರವಧಿಯಲ್ಲಿ ಮೀನುಗಾರಿಕೆ ಅಭಿವೃದ್ದಿ ನಿಗಮದ ಮೂಲಕ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಯೋಜನೆಯನ್ನು ಹೊಂದಿದ್ದಾರೆ.