Lawrence bishop : ಪಂಜಾಬ್ನ ಪ್ರಸಿದ್ಧ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನಿಸಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಶ್ನೋಯಿ ಯನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ಸಿಧು ಮೂಸೆವಾಲಾ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಆರೋಪ ಎದುರಿಸುತ್ತಿರುವ ಬಿಶ್ನೋಯಿಯನ್ನು ಬಾರೀ ಭದ್ರತೆಯಲ್ಲಿ ಮಾನ್ಸಾದಿಂದ ಮೊಹಾಲಿಗೆ ಕರೆದೊಯ್ಯಲಾಗಿದೆ.
ಗ್ಯಾಂಗ್ಸ್ಟರ್ ಆಗಿರುವ ಬಿಶ್ನೋಯಿಗೆ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಪಂಜಾಬ್ ಪೊಲೀಸರ ವಿಶೇಷ ತಂಡ ಹಾಗೂ ಗ್ಯಾಂಗ್ಸ್ಟರ್ ನಿಗ್ರಹ ಕಾರ್ಯಪಡೆಗಳು ವಿಚಾರಣೆಗೆ ಒಳಪಡಿಸಿವೆ. ಮಾನ್ಸಾದಿಂದ ಹೊರಟ ಬಿಶ್ನೋಯಿಯನ್ನು ಪಂಜಾಬ್ ಪೊಲೀಸರು ಗುಂಡು ನಿರೋಧಕ ವಾಹನದಲ್ಲಿ ಕರೆದೊಯ್ದಿದ್ದಾರೆ. ಅಲ್ಲದೇ ಬಿಶ್ನೋಯಿಗೆ 100 ಮಂದಿ ಪೊಲೀಸರಿಗೆ ಭದ್ರತೆ ನೀಡಲಾಗಿದೆ.
ಪಂಜಾಬ್ನ ಸಿಎಂ ಭಗವಂತ್ ಮಾನ್ ನೀಡಿರುವ ಸೂಚನೆಯಂತೆ ಪಂಜಾಬ್ನ ಅಡ್ವೋಕೇಟ್ ಜನರಲ್ ಅನ್ಮೋಲ್ ರತನ್ ಸಿಧಯಮ ಬಿಶ್ನೋಯಿಯನ್ನು ಪೊಲೀಸರ ವಶಕ್ಕೆ ನೀಡುವಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ಗೆ ಮನವಿ ಮಾಡಿದ್ದರು. ಈ ವೇಳೆಯಲ್ಲಿ ಬಿಶ್ನೋಯ್ ಭದ್ರತೆಯ ಸಂಪೂರ್ಣ ಜವಾಬ್ದಾರಿ ಪಂಜಾಬ್ ಸರ್ಕಾರ ನೋಡಿಕೊಳ್ಳಲಿದೆ ಎಂದು ಹೇಳಲಾಗಿತ್ತು . ಅದರಂತೆ ಭದ್ರತೆಯನ್ನು ನೀಡಲಾಗಿದೆ.
ದೆಹಲಿಯಿಂದ ಹೊರಟ ಬಿಶ್ನೋಯ್ ವಾಹನಕ್ಕೆ 12 ಡಜನ್ ವಾಹನಗಳಲ್ಲಿ 100ಕ್ಕೂ ಅಧಿಕ ಪಂಜಾಬ್ ಪೊಲೀಸರು ಭದ್ರತೆ ನೀಡಿದ್ದಾರೆ.ಬುಲೆಟ್ ಪ್ರೂಫ್ ವಾಹನದಲ್ಲಿ ಬಿಶ್ನೋಯ್ಯನ್ನು ಪಂಜಾಬ್ಗೆ ಕರೆತರಲಾಗಿದೆ.
ಇದನ್ನು ಓದಿ : Shopian Encounter Update : ಬ್ಯಾಂಕ್ ಮ್ಯಾನೇಜರ್ ಹತ್ಯೆ, ಉಗ್ರನನ್ನು ಹೊಡೆದುರುಳಿಸಿದ ಕಾಶ್ಮೀರ ಪೊಲೀಸರು
ಇದನ್ನೂ ಓದಿ : KL Rahul Fitness : ಕೆ.ಎಲ್ ರಾಹುಲ್ ಗಾಯದ ಕುರಿತು ಬಿಗ್ ಅಪ್‌ಡೇಟ್ : Exclusive
sidhu moose wala murder case gangster Lawrence bishop transported with bulletproof vehicle 100 cops