ನವದೆಹಲಿ: Steering Committee: ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಎಐಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ಕಾಂಗ್ರೆಸ್‍ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಅಧಿಕಾರ ಸ್ವೀಕಾರ ಮಾಡಿಕೊಂಡ ಬೆನ್ನಲ್ಲೇ ಖರ್ಗೆ ಅವರು ನೂತನ ಸಂಚಾಲನಾ ಸಮಿತಿ ರಚನೆ ಮಾಡಿದ್ದಾರೆ. ಈ ಸಮಿತಿಯಲ್ಲಿ ಮೂವರು ಕನ್ನಡಿಗರಿಗೂ ಸ್ಥಾನ ಸಿಕ್ಕಿದೆ.
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ(CWC) ವಿಸರ್ಜನೆ ಆಗಿದೆ. ಈ ಹಿಂದೆ ಇದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಸ್ಟೇರಿಂಗ್ ಕಮಿಟಿ ಎಂದು ಮರುನಾಮಕರಣ ಮಾಡಲಾಗಿದ್ದು, ಸಿಡಬ್ಲ್ಯೂಸಿ (CWC) ರೀತಿಯಲ್ಲೇ ನೂತನ ಸ್ಟೇರಿಂಗ್ ಕಮಿಟಿ ಕಾರ್ಯನಿರ್ವಹಿಸಲಿದೆ. ಹೊಸ ಸ್ಟೇರಿಂಗ್ ಕಮಿಟಿ 47 ಸದಸ್ಯರನ್ನು ಒಳಗೊಂಡಿದೆ. ಈ ಸಮಿತಿಯಲ್ಲಿ ಎಐಸಿಸಿ ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿ ಹಲವರಿಗೆ ಸ್ಥಾನ ನೀಡಲಾಗಿದೆ. ಇನ್ನು ಈ ನೂತನ ಸಂಚಾಲನ ಸಮಿತಿಯಲ್ಲಿ ಕರ್ನಾಟಕದ ಮೂವರಿಗೆ ಅವಕಾಶ ಸಿಕ್ಕಿದೆ. ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರಾದ ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ ಹಾಗೂ ದಿನೇಶ್ ಗುಂಡೂರಾವ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಇನ್ನು ಮುಂದೆ ಈ ಸಂಚಾಲನ ಸಮಿತಿಯೇ ಪಕ್ಷದ ಆಗುಹೋಗುಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ, ಹೀಗಾಗಿ ಸೂತನವಾಗಿ ರಚನೆಗೊಂಡ ಸ್ಟೇರಿಂಗ್ ಕಮಿಟಿ ಪ್ರಮುಖವೆನಿಸಲಿದೆ.
ಸಂಚಾಲನಾ ಸಮಿತಿ ಸದಸ್ಯರ ಪಟ್ಟಿ ಇಂತಿದೆ.
1, ಸೋನಿಯಾ ಗಾಂಧಿ 2. ಡಾ. ಮನಮೋಹನ್ ಸಿಂಗ್ 3. ರಾಹುಲ್ ಗಾಂಧಿ 4. ಎ.ಕೆ.ಆಂಟನಿ 5. ಡಾ. ಅಭಿಷೇಕ್ ಮನು ಸಿಂಘ್ವಿ 6. ಅಜಯ್ ಮಕೇನ್ 7. ಅಂಬಿಕಾ ಸೋನಿ 8. ಆನಂದ್ ಶರ್ಮಾ 9. ಅವಿನಾಶ್ ಪಾಂಡೆ 10. ಗೈಖಂಗಮ್ 11. ಹರೀಶ್ ರಾವತ್ 12. ಜೈರಾಮ್ ರಮೇಶ್ 13. ಜಿತೇಂದ್ರ ಸಿಂಗ್ 14. ಸೆಲ್ಜಾ 15. ಕೆ.ಸಿ.ವೇಣುಗೋಪಾಲ್ 16.ಲಲ್ತನ್ ವಾಲಾ 17. ಮುಕುಲ್ ವಸ್ನಿಕ್ 18. ಊಮನ್ ಚಾಂಡಿ 19. ಪ್ರಿಯಾಂಕಾ ವಾದ್ರಾ 20. ಪಿ.ಚಿದಂಬರಂ 21. ರಣದೀಪ್ ಸುರ್ಜೇವಾಲಾ 22. ರಘುಬೀರ್ ಮೀನಾ 23.ತಾರಿಕ್ ಅನ್ವರ್ 24. ಡಾ.ಎ.ಚೆಲ್ಲಕುಮಾರ್ 25. ಡಾ. ಅಜಯ್ ಕುಮಾರ್ 26. ಅಧೀರ್ ರಂಜನ್ ಚೌಧರಿ 27. ಭಕ್ತ ಚರಣ್ ದಾಸ್ 28. ದೇವೇಂದ್ರ ಯಾದವ್ 29. ದಿಗ್ವಿಜಯ್ ಸಿಂಗ್ 30. ದಿನೇಶ್ ಗುಂಡೂರಾವ್ 31. ಹರೀಶ್ ಚೌಧರಿ 22. ಹೆಚ್.ಕೆ.ಪಾಟೀಲ್ 23.ಜಯಪ್ರಕಾಶ್ ಅಗರ್ ವಾಲ್ 34. ಕೆ.ಹೆಚ್.ಮುನಿಯಪ್ಪ 35. ಬಿ.ಮಣಿಕಮ್ ಟ್ಯಾಗೋರ್ 36. ಮನೀಶ್ ಚತ್ರಾತ್ 37. ಮೀರಾ ಕುಮಾರ್ 38. ಪಿ.ಎಲ್.ಪುನೀಯಾ 39. ಪವನ್ ಕುಮಾರ್ ಬನ್ಸಾಲ್ 40. ಪ್ರಮೋದ್ ತಿವಾರಿ 41. ರಜನಿ ಪಾಟೀಲ್ 42. ಡಾ.ರಘು ಶರ್ಮಾ 43. ರಾಜೀವ್ ಶುಕ್ಲಾ 44. ಸಲ್ಮಾನ್ ಖುರ್ಷಿದ್ 45. ಶಕ್ತಿಸಿಂಗ್ ಗೊಹಿಲ್ 46. ಟಿ.ಸುಬ್ಬಿರಾಮಿ ರೆಡ್ಡಿ 47. ತಾರಿಕ್ ಅಹ್ಮದ್ ಕರ್ರಾ
ಇದನ್ನೂ ಓದಿ: Bande mutt Swamiji: ಬಂಡೆಮಠ ಸ್ವಾಮೀಜಿ ಸಾವಿನ ಹಿಂದೆ ಹನಿಟ್ರ್ಯಾಪ್ ಜಾಲ ಶಂಕೆ: ಅಸಲಿಗೆ ವಿಡಿಯೋದಲ್ಲೇನಿದೆ
ಇದನ್ನೂ ಓದಿ: Rajinikanth Reviews ‘Kantara’:‘ಕಾಂತಾರ’ ಭಾರತೀಯ ಸಿನಿರಂಗದ ಮಾಸ್ಟರ್ ಪೀಸ್ ಸಿನಿಮಾ : ತಲೈವಾ ರಜನಿಕಾಂತ್
Kharge replaces Congress Working Committee with Steering Committee