ಸೋಮವಾರ, ಏಪ್ರಿಲ್ 28, 2025
HomeNational‘ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಿ ’ : ಪ್ರಿಯಾಂಕ ಗಾಂಧಿ ವಾದ್ರಾ ಕಿಡಿ

‘ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಿ ’ : ಪ್ರಿಯಾಂಕ ಗಾಂಧಿ ವಾದ್ರಾ ಕಿಡಿ

- Advertisement -

ಉಡುಪಿ ಜಿಲ್ಲೆಯಿಂದ ಆರಂಭವಾದ ಹಿಜಬ್​ ಹಾಗೂ ಕೇಸರಿ ಶಾಲು ನಡುವಿನ ಸಮರವು ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಹೈಕೋರ್ಟ್​ನಲ್ಲಿ ಈ ವಿಚಾರವು ಚರ್ಚೆಯಲ್ಲಿ ಇರುವ ನಡುವೆಯೇ ದೇಶದ ವಿವಿಧ ನಾಯಕರು ಈ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ (Priyanka Gandhi) ತನಗೆ ಬೇಕಾದ್ದನ್ನು ಧರಿಸುವುದು ಪ್ರತಿಯೊಬ್ಬ ಮಹಿಳೆಯ ಹಕ್ಕು ಎಂದು ಗುಡುಗಿದ್ದಾರೆ.


ರಾಜ್ಯದಲ್ಲಿ ಭುಗಿಲೆದ್ದಿರುವ ಸಮವಸ್ತ್ರ ವಿವಾದದ ವಿಚಾರವಾಗಿ ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯವನ್ನು ಹೊರಹಾಕಿದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅದು ಬಿಕಿನಿಯೇ ಆಗಿರಲಿ, ಸೆರಗಾಗಿರಲಿ, ಜೀನ್ಸ್​ ಅಥವಾ ಹಿಜಾಬ್​ ಆಗಿರಲಿ, ಏನು ಧರಿಸಬೇಕು ಎನ್ನುವುದು ಪ್ರತಿಯೊಬ್ಬ ಮಹಿಳೆಯ ಹಕ್ಕಾಗಿದೆ. ಈ ಹಕ್ಕನ್ನು ಭಾರತೀಯ ಸಂವಿಧಾನವೇ ನೀಡಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.


ಹಿಜಬ್​ ವಿವಾದವವು ರಾಜ್ಯದಲ್ಲಿ ಸಾಕಷ್ಟು ಪ್ರತಿಭಟನೆ, ಕಲ್ಲು ತೂರಾಟ ಹಾಗೂ ಹಿಂಸಾಚಾರಗಳಿಗೆ ಕಾರಣವಾಗಿದೆ. ನಿನ್ನೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯ ಹೆಸರಿನಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡಿತ್ತು ಕಂಡು ಬಂತು. ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರವು ಇಂದಿನಿಂದ ಮೂರು ದಿನಗಳ ಕಾಲ ಪ್ರೌಢ ಶಾಲೆಗಳು ಹಾಗೂ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಪ್ರಸ್ತುತ ಹಿಜಬ್​ ವಿವಾದವು ಹೈಕೋರ್ಟ್​ ಮೆಟ್ಟಿಲೇರಿದ್ದು ಇಂದು ಮಧ್ಯಾಹ್ನ 2:30ರಿಂದ ವಿಚಾರಣೆ ಆರಂಭಗೊಳ್ಳಲಿದೆ.

ಇದನ್ನು ಓದಿ : ಶಾಂತಿ ಕಾಪಾಡುವಂತೆ ಮನವಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ : Hijab Row Karnataka High Court: ಹಿಜಾಬ್-ಕೇಸರಿ ಶಾಲು: ಹೈಕೋರ್ಟ್‌ನಲ್ಲಿ ವಾದ ಪ್ರತಿವಾದ ಹೇಗಿತ್ತು? ಮಂಡನೆಯಾದ ಅಂಶಗಳೇನು?

‘Stop harassing women’: Priyanka Gandhi on the hijab row

RELATED ARTICLES

Most Popular