ಚೆನ್ನೈ : ಹಾವು ತಿಂದ್ರೆ ಕೊರೊನಾ ಬರಲ್ಲವೆಂದು ಹಾವನ್ನು ತಿಂದ ವ್ಯಕ್ತಿಯೋರ್ವನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ ದಂಡ ವಿಧಿಸಿದ ಘಟನೆ ತಮಿಳುನಾಡಿನ ಮಧುರೈನ ಪೆರುಮಾಲ್ಪಟ್ಟಿ ಎಂಬಲ್ಲಿ ನಡೆದಿದೆ. ಬಂಧಿತ ವ್ಯಕ್ತಿಗೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಪೆರುಮಾಲ್ಪಟ್ಟಿಯಲ್ಲಿ ಕೃಷಿಕೂಲಿ ಮಾಡುತ್ತಿದ್ದ ವಾಡಿವೇಲು (50 ವರ್ಷ) ಎಂಬಾತ ಹಾವನ್ನು ತಿನ್ನುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಾಡಿವೇಲುವನ್ನು ಪತ್ತೆ ಹೆಚ್ಚಿದ್ದಾರೆ. ಈ ವೇಳೆಯಲ್ಲಿ ವ್ಯಕ್ತಿ ಆಘಾತಕಾರಿ ಮಾಹಿತಿಯೊಂದನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ವಾಡಿವೇಲು ಮದ್ಯಪಾನ ಮಾಡುತ್ತಿದ್ದ ವೇಳೆಯಲ್ಲಿ ಅಲ್ಲಿದ್ದ ಜನರು ಹಾವನ್ನು ತಿಂದ್ರೆ ಕೊರೊನಾ ವೈರಸ್ ಸೋಂಕು ಬರುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದಾಗಿ ವಾಡಿವೇಲು ಸತ್ತ ಹಾಲವನ್ನು ತಿನ್ನೋದಕ್ಕೆ ಶುರುಮಾಡಿದ್ದ. ಅಲ್ಲಿಯೇ ಇದ್ದವರು ವಾಡಿವೇಲು ಹಾವು ತಿನ್ನುವುದನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಅದೃಷ್ಟಕ್ಕೆ ವಾಡಿವೇಲು ಹೆಚ್ಚು ಅಪಾಯಕಾರಿಯಾಗಿರುವ ಹಾವನ್ನು ತಿಂದಿದ್ದಾನೆ. ಅಲ್ಲದೇ ವಿಷವಿರುವ ಭಾಗವನ್ನು ಆತ ಕಚ್ಚಿರಲಿಲ್ಲ. ಅದ್ರಲ್ಲೂ ವ್ಯಕ್ತಿ ತಿಂದ ಹಾವು ಪಾರ್ಶ್ವವಾಯುವನ್ನು ಉಂಟು ಮಾಡುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹಾವು ತಿಂದ ವ್ಯಕ್ತಿಗೆ 7000 ರೂಪಾಯಿ ದಂಡ ವಿಧಿಸಿದ್ದಾರೆ. ಅಲ್ಲದೇ ಹಾವು ತಿಂದ್ರೆ ಕೊರೊನಾ ಬರಲ್ಲಾ ಅನ್ನೋದು ಸುಳ್ಳು ಅನ್ನೋ ಕುರಿತು ಸ್ಪಷ್ಟನೆಯನ್ನೂ ನೀಡಿದ್ದಾರೆ.