ಬೆಂಗಳೂರು : ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ತಮಿಳುನಾಡು ಸಚಿವರ ಪುತ್ರಿಯೊಬ್ಬಳು (Tamil Nadu Minister Sekar Babu Daughter ) ರಕ್ಷಣೆ ಕೋರಿ ಬೆಂಗಳೂರು ನಗರ ಪೊಲೀಸರ ಮೊರೆ ಹೋದ ಘಟನೆ ನಡೆದಿದೆ. ಆ ಮೂಲಕ ತಮಿಳುನಾಡಿನಲ್ಲಿ ದಾಖಲಾಗಿದ್ದ ಕಿಡ್ನಾಪ್ ಪ್ರಕರಣಕ್ಕೆ ಕರ್ನಾಟಕದಲ್ಲಿ ಟ್ವಿಸ್ಟ್ ಸಿಕ್ಕಿದೆ.
ತಮಿಳುನಾಡು ಸರಕಾರದ ಮುಜರಾಯಿ ಖಾತೆ ಸಚಿವ ಶೇಖರ್ ಬಾಬು (Sekar Babu) ಎಂಬುವವರ ಪುತ್ರಿ ನಿವಾಸದಿಂದ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು (Tamil Nadu Minister) ಪುತ್ರಿಯನ್ನಿ ಅಪಹರಿಸಲಾಗಿದೆ ಎಂದು ಆರೋಪಿಸಿ ಚೈನೈನಲ್ಲಿ ದೂರು ನೀಡಿದ್ದರು. ಆದರೆ ಈ ಪ್ರಕರಣ ಕರ್ನಾಟಕದಲ್ಲಿ ಸುಖಾಂತ್ಯಕಂಡಿದ್ದು, ಇದು ಕಿಡ್ನಾಪ್ ಅಲ್ಲ. ಪ್ರೇಮ ಪ್ರಕರಣ ಎಂಬ ಸಂಗತಿ ಬಯಲಾಗಿದೆ.
ತಮಿಳುನಾಡು ಸರ್ಕಾರದ ಮುಜರಾಯಿ ಸಚಿವ ಶೇಖರ್ ಬಾಬು ಪುತ್ರಿ ಜಯಕಲ್ಯಾಣಿ ಸತೀಶ್ ಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದು, ಈ ವಿಚಾರ ತಮಿಳುನಾಡು ರಾಜ್ಯದಾದ್ಯಂತ ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಮಾತ್ರವಲ್ಲ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಯಕಲ್ಯಾಣಿ ಹಾಗೂ ಸತೀಶ್ ಬೆಂಗಳೂರಿಗೆ ಎಸ್ಕೇಪ್ ಅಗಿದ್ದರು. ಈ ಮಧ್ಯೆ ಸತೀಶ್ ಕುಮಾರ್ ಹಾಗೂ ಜಯಕಲ್ಯಾಣಿ ರಾಯಚೂರಿನ ಹಡಗಲಿ ತಾಲೂಕಿಕ ಹಾಲಸ್ವಾಮಿ ಮಠದಲ್ಲಿ ಮದುವೆ ಆಗಿದ್ದಾರಂತೆ. ಆದರೆ ವಿವಾಹವಾದ ಬಳಿಕವೂ ಅವರಿಗೆ ಜೀವ ಬೆದರಿಕೆ ಎದುರಾಗಿದ್ದರಿಂದ ಈ ಜೋಡಿ ಈಗ ಬೆಂಗಳೂರಿಗೆ ಬಂದು ಪೊಲೀಸ್ ಆಯುಕ್ತರ ಕಚೇರಿ ಮೊರೆ ಹೋಗಿದ್ದಾರೆ.
ಜಯಕಲ್ಯಾಣಿ (Jaya Kalyani) ಹಾಗೂ ಸತೀಶ್ ಕುಮಾರ್ ಗೆ ಬೆಂಗಳೂರಿನ ಹಲವು ಕನ್ನಡಪರ ಸಂಘಟನೆಗಳು ಸಾಥ್ ನೀಡಿದ್ದು, ರಕ್ಷಣೆ ನೀಡುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರ ಪುತ್ರಿ ಜಯಕಲ್ಯಾಣಿ, ನಾವಿಬ್ಬರೂ ಮೇಜರ್ ಆಗಿದ್ದೇವೆ.ನಾನು ಸತೀಶ್ ಹಲವು ವರ್ಷದಿಂದ ಪ್ರೀತಿಸುತ್ತಿದ್ದೇವೆ. ಸತೀಶ್ ಗೆ ಚೈನೈನಲ್ಲಿ ಉದ್ಯಮವಿದೆ. ಆದರೆ ನನ್ನ ತಂದೆಗೆ ನಮ್ಮ ಪ್ರೀತಿ ಇಷ್ಟವಿಲ್ಲ. ಹೀಗಾಗಿ ನಾನು ಸ್ವ ಇಚ್ಛೆಯಿಂದ ಮನೆ ಬಿಟ್ಟು ಬಂದಿದ್ದೇನೆ.ಆದರೆ ನನ್ನ ತಂದೆಯಿಂದ ನನಗೆ ಜೀವ ಬೆದರಿಕೆ ಇದೆ.
ಅದಕ್ಕಾಗಿ ನಾವು ಕರ್ನಾಟಕಕ್ಕೆ ಬಂದಿದ್ದೇವೆ. ಮತ್ತು ಇಲ್ಲಿನ ಪೊಲೀಸರ ನೆರವು ಕೋರುತ್ತಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ಕಿಡ್ನಾಪ್ ಪ್ರಕರಣವನ್ನು ತಮಿಳುನಾಡು ಪೊಲೀಸರು ಕೈಬಿಡಬೇಕು.ನಾನು ನನ್ನಿಷ್ಟದಂತೆ ಮದುವೆಯಾಗಿ ಸುಖವಾಗಿದ್ದೇನೆ ಎಂದು ತಮಿಳುನಾಡು ಪೊಲೀಸರಿಗೆ ಜಯಕಲ್ಯಾಣಿ ಮನವಿ ಮಾಡಿದ್ದಾರೆ. ಸಚಿವರ ಪುತ್ರಿಯ ಈ ಪ್ರೇಮ ಪ್ರಕರಣ ಸದ್ಯ ಕರ್ನಾಟಕದಲ್ಲೂ ಸದ್ದು ಮಾಡ್ತಿದೆ.
ಇದನ್ನೂ ಓದಿ : Karnataka Election : ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ : ಎಚ್.ಡಿ. ಕುಮಾರಸ್ವಾಮಿ ಭವಿಷ್ಯ
ಇದನ್ನೂ ಓದಿ : Exit Polls 2022 LIVE Updates : ಚುನಾವಣೋತ್ತರ ಸಮೀಕ್ಷೆ: ಯುಪಿಯಲ್ಲಿ ಅರಳಿದ ಕಮಲ
(Tamil Nadu Minister Sekar Babu Daughter Jaya Kalyani Married her Boyfriend, Police Protection in Bengaluru)