ಮಂಗಳವಾರ, ಏಪ್ರಿಲ್ 29, 2025
HomeNationalಅವಳಿ ಆನೆಮರಿಗಳಿಗೆ ಜನ್ಮ ನೀಡಿದ ಶ್ರೀಲಂಕಾದ ಸುರಂಗಿ

ಅವಳಿ ಆನೆಮರಿಗಳಿಗೆ ಜನ್ಮ ನೀಡಿದ ಶ್ರೀಲಂಕಾದ ಸುರಂಗಿ

- Advertisement -

ಅವಳಿ ಮಕ್ಕಳು ಹುಟ್ಟಲಿ ಎಂದು ಹೆಚ್ಚಿನ ಜನರಿಗೆ ಆಸೆ ಇರುತ್ತದೆ. ಆದರೆ ಅದೃಷ್ಟ ಇದ್ದವರಿಗೆ ಅಪರೂಪಕ್ಕೆ ಅವಳಿ ಮಕ್ಕಳ ಜನನವಾಗುತ್ತದೆ. ಆದರೆ ಶ್ರೀಲಂಕಾದಲ್ಲಿ ಆನೆಯೊಂದು ಅವಳಿ ಮರಿಗಳಿಗೆ ಜನ್ಮನೀಡಿ ವಿಶೇತಗೆ ಸಾಕ್ಷಿ ಆಗಿದೆ.

ಆನೆಯೊಂದು ಎರಡು ಅವಳಿ ಗಂಡು ಮರಿಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಶ್ರೀಲಂಕಾದಲ್ಲಿ ಬೆಳಕಿಗೆ ಬಂದಿದೆ. ಶ್ರೀಲಂಕಾದ ಅತ್ಯಂತ ಪ್ರಮುಖವಾದ ಅನಾಥ ಅಥವಾ ಮಾಲೀಕರಿಲ್ಲದ ಆನೆ ಬಿಡಾರ ‘ಪಿನ್ನಾವಲ’ದಲ್ಲಿ ಸುರಂಗಿ ಎಂಬ ಹೆಣ್ಣಾನೆಯು ಅವಳಿ ಮರಿಗಳಿಗೆ ಜನ್ಮ ನೀಡಿದೆ.

ಇದನ್ನೂ ಓದಿ: ಈ ಮಹಾತಾಯಿಗೆ 22 ಮಕ್ಕಳು ! ಹೇಗಿದೆ ಗೊತ್ತಾ ಇವರ ಐಷಾರಾಮಿ ಬದುಕು ?

1975 ರಿಂದಲೂ ನಡೆಯುತ್ತಿರುವ ಈ ಆನೆ ಬಿಡಾರದಲ್ಲಿ ಮೊದಲ ಬಾರಿಗೆ ಇಂಥ ಅಪರೂಪದ ಮರಿಗಳ ಜನನವಾಗಿದೆ. ಎರಡೂ ಮರಿಗಳು ಗಾತ್ರದಲ್ಲಿ ಸ್ವಲ್ಪ ಸಣ್ಣಗಿದ್ದರೂ, ಬಹಳ ಆರೋಗ್ಯವಾಗಿವೆ. ಸುರಕ್ಷಿತ ಬಿಡಾರವೊಂದರಲ್ಲಿ ಅವಳಿ ಮರಿಗಳು ಜನಿಸಿರುವುದು ಶ್ರೀಲಂಕಾದ 80 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿ ಎನ್ನಲಾಗಿದೆ.

ತಾಯಿ ಆನೆ ಕೂಡ ಆರೋಗ್ಯವಾಗಿದೆ ಎಂದು ಬಿಡಾರದ ಮುಖ್ಯಸ್ಥೆ ರೇಣುಕಾ ಬಂಡಾರನಾಯ್ಕೆ ತಿಳಿಸಿದ್ದಾರೆ. 2009ರಲ್ಲಿ ಒಂದು ಗಂಡು ಆನೆಗೆ ಜನ್ಮ ನೀಡಿದ ಬಳಿಕ ಎರಡನೇ ಬಾರಿ ಸುರಂಗಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿರುವುದು ವಿಶೇಷ. ಒಟ್ಟು 81 ಆನೆಗಳು ಈ ಬಿಡಾರದಲ್ಲಿವೆ.

ಇದನ್ನೂ ಓದಿ: Aliens Child : ಏಲಿಯನ್ ರೀತಿ ಮಗುವಿನ ಜನನ !

( Sri Lankan Surangi elephant gave birth to twin elephants )

RELATED ARTICLES

Most Popular