UP Assembly Election 2022:ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ 2017ರ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಯ ಹೆಸರನ್ನು ಘೋಷಣೆ ಮಾಡಿದೆ. 19 ವರ್ಷದ ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಘೋಷಣೆ ಮಾಡಿದರು. ಈ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ 2017ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕುಲದೀಪ್ ಸಿಂಗ್ ಸೆಂಗಾರ್ ಗೆದ್ದು ಬಂದಿದ್ದ ಉನ್ನಾವೋದ ಬಂಗಾರ್ಮೌ ಕ್ಷೇತ್ರದಿಂದಲೇ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಪ್ರಕರಣದಲ್ಲಿ ತಮಗೆ ಶಿಕ್ಷೆಯಾಗವವರೆಗೂ ಕುಲದೀಪ್ ಸಿಂಗ್ ಸೆಂಗಾರ್ ಶಾಸಕರಾಗಿಯೇ ಇದ್ದರು. ಬಳಿಕ ನಡೆದ ಉಪಚುನಾವಣೆಯಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ.
ನೀವು ಕಿರುಕುಳ ಹಾಗೂ ಚಿತ್ರಹಿಂಸೆಗೆ ಒಳಗಾಗಿದ್ದಾರೆ ಕಾಂಗ್ರೆಸ್ ನಿಮ್ಮ ಪರ ನಿಲ್ಲುತ್ತದೆ ಎಂಬ ಸಂದೇಶವನ್ನು ನಮ್ಮ ಚುನಾವಣಾ ಅಭ್ಯರ್ಥಿಗಳ ಪಟ್ಟಿಯು ತೋರಿಸುತ್ತಿದೆ. ಈ ಹಿಂದೆ ಮಹಿಳಾ ಕೇಂದ್ರಿತ ಲಡಕಿ ಹೂ , ಲಡ್ ಸಕ್ತಿ ಹೂ( ನಾನು ಹುಡುಗಿ, ನಾನೂ ಹೋರಾಡಬಲ್ಲೆ) ಅಭಿಯಾನಕ್ಕೆ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಚಾಲನೆ ನೀಡಿದ್ದರು.
ಅಭ್ಯರ್ಥಿಗಳು ಜನರ ಸಮಸ್ಯೆಗಾಗಿ ಹೋರಾಡುವುದಕ್ಕಾಗಿ ನಾವು ಪಕ್ಷವನ್ನು ಬಲಪಡಿಸುತ್ತಿದ್ದೇವೆ. ನಾವು ಯಾವುದೆ ನಕಾರಾತ್ಮಕ ಪ್ರಚಾರಗಳನ್ನು ಮಾಡುವುದಿಲ್ಲ. ನಮ್ಮ ಪ್ರಚಾರವು ಎಂದಿಗೂ ದಲಿತರು ಹಾಗೂ ಹಿಂದುಳಿದ ವರ್ಗದವರ ಅಭಿವೃದ್ಧಿ ಹಾಗೂ ಪ್ರಗತಿಯ ಪರವಾಗಿ ಇರಲಿದೆ ಎಂದು ಹೇಳಿದ್ದಾರೆ.
ನಾನು ಉತ್ತರಪ್ರದೇಶದಲ್ಲಿ ಏನನ್ನು ಆರಂಭಿಸಿದ್ದೇನೋ ನಾನು ಅದನ್ನು ಮುಂದುವರಿಸುತ್ತೇನೆ. ಉತ್ತರ ಪ್ರದೇಶ ಚುನಾವಣೆಯ ಬಳಿಕವೂ ನಾನು ಉತ್ತರ ಪ್ರದೇಶದಲ್ಲಿಯೇ ಇರಲಿದ್ದೇನೆ. ಉತ್ತರ ಪ್ರದೇಶದಲ್ಲಿ ಮುಂಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುತ್ತೇನೆ ಎಂದು ಹೇಳಿದರು.
UP Assembly Election 2022:Congress Names 2017 UP Rape Victim’s Mother As Poll Candidate
ಇದನ್ನು ಓದಿ : PM Modi emergency meeting : ಭಾರತದಲ್ಲಿ ಕೋವಿಡ್ ಆರ್ಭಟ : ಪ್ರಧಾನಿ ಮೋದಿ ನೇತೃತ್ವದಲ್ಲಿ ಎಲ್ಲಾ ಸಿಎಂಗಳ ಜೊತೆ ತುರ್ತು ಸಭೆ
ಇದನ್ನೂ ಓದಿ : Mekedatu Government Order : ಮೇಕೆದಾಟು ಪಾದಯಾತ್ರೆಯನ್ನು ತಕ್ಷಣವೇ ನಿಲ್ಲಿಸಿ : ಸರಕಾರದ ಅಧಿಕೃತ ಆದೇಶ