ಸೋಮವಾರ, ಏಪ್ರಿಲ್ 28, 2025
HomeNationalYogi Adityanath : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕಚೇರಿಯ ಟ್ವಿಟರ್ ಖಾತೆ ಹ್ಯಾಕ್

Yogi Adityanath : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕಚೇರಿಯ ಟ್ವಿಟರ್ ಖಾತೆ ಹ್ಯಾಕ್

- Advertisement -

ಲಖನೌ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath ) ಅವರ ಕಚೇರಿಯ (ಸಿಎಂಒ) ಟ್ವಿಟರ್ (twitter Hack ) ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ನೂರಾರು ಬಳಕೆದಾರರನ್ನು ಟ್ಯಾಗ್ ಮಾಡುವ ಮೂಲಕ ಹ್ಯಾಕರ್ ಹಲವಾರು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ಟ್ವೀಟರ್ ನಲ್ಲಿ ನಿಮ್ಮ BAYC/MAYC ಅನಿಮೇಟೆಡ್ ಅನ್ನು ಹೇಗೆ ತಿರುಗಿಸುವುದು” ಎಂಬ ಟ್ಯುಟೋರಿಯಲ್ ಅನ್ನು ಆಧರಿಸಿ ಪೋಸ್ಟ್ ಅನ್ನು ಪ್ರಕಟಿಸಲು ಅಪರಿಚಿತ ಹ್ಯಾಕರ್‌ಗಳು UP CMO ಟ್ವಿಟರ್ ಹ್ಯಾಂಡಲ್ ಅನ್ನು ಬಳಸಿದಾಗ ಉಲ್ಲಂಘನೆಯು ಬೆಳಕಿಗೆ ಬಂದಿದೆ. ಜೊತೆಗೆ ಹ್ಯಾಕರ್‌ಗಳು ಖಾತೆಯ ಪ್ರೊಫೈಲ್ ಚಿತ್ರವನ್ನು ಕೂಡ ಬದಲಾಯಿಸಿದ್ದಾರೆ.

ಮಧ್ಯರಾತ್ರಿ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಅಲ್ಲದೇ ಕೆಲವೇ ಗಂಟೆಗಳಲ್ಲಿ ಮತ್ತೆ ಖಾತೆಯನ್ನು ಮರು ಸ್ಥಾಪಿಸಲಾಗಿದೆ. ಇದೀಗ ಹ್ಯಾಕ್ ಆಗಿರುವ ಕುರಿತು ಮುಖ್ಯಮಂತ್ರಿಗಳ ಕಚೇರಿಯ ಟ್ವೀಟರ್‌ ಖಾತೆಯ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಯುಪಿ ಪೊಲೀಸರು ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡುವ ಮೂಲಕ ಹ್ಯಾಕ್ ಮಾಡಿದ ಖಾತೆಯ ಸ್ಕ್ರೀನ್‌ಶಾಟ್‌ಗಳನ್ನು ಜನರು ಹಂಚಿಕೊಂಡಿ ದ್ದಾರೆ. ಅಧಿಕಾರಿಗಳು ಕ್ರಮ ಕೈಗೊಂಡು ಖಾತೆಯನ್ನು ಮರುಸ್ಥಾಪಿಸಿದರು. ಹ್ಯಾಕರ್‌ಗಳು ಪೋಸ್ಟ್ ಮಾಡಿದ ಎಲ್ಲಾ ಟ್ವೀಟ್‌ಗಳನ್ನು ಅಳಿಸಲಾಗಿದೆ.

Uttar Pradesh CM Yogi Aditgyanath Office Twitter Account Hacked

ಸರ್ಕಾರಿ ಇಲಾಖೆ ಅಥವಾ ಪ್ರಭಾವಿ ವ್ಯಕ್ತಿಗಳ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಆಗಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟ್ಟರ್ ಖಾತೆಯನ್ನೂ ಅಲ್ಪಾವಧಿಗೆ ಹ್ಯಾಕ್ ಮಾಡಲಾಗಿತ್ತು. ಗಮನಾರ್ಹವಾಗಿ, ಹ್ಯಾಕರ್‌ಗಳು ಪ್ರಧಾನ ಮಂತ್ರಿಯವರ ಟ್ವಿಟರ್ ಹ್ಯಾಂಡಲ್‌ನಿಂದ ಭಾರತವು “ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧ ಟೆಂಡರ್ ಆಗಿ ಅಳವಡಿಸಿಕೊಂಡಿದೆ” ಎಂದು ಹೇಳಿಕೊಂಡು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಬಿಜೆಪಿ ಹೈಕಮಾಂಡ್‌ ಮಾಸ್ಟರ್‌ ಫ್ಲ್ಯಾನ್‌ : ಮತ್ತೆ ಮುಂದೂಡಿಕೆಯಾಯ್ತು ಸಂಪುಟ ವಿಸ್ತರಣೆ

ಇದನ್ನೂ ಓದಿ : COVID-19 Booster Dose ನೋಂದಣಿ ಹೇಗೆ, ಲಸಿಕೆಯ ಬೆಲೆ ಎಷ್ಟು : ಬೂಸ್ಟರ್ ಡೋಸ್ ಪಡೆಯಲು ನೀವು ಅರ್ಹರೆ

Uttar Pradesh CM Yogi Aditgyanath Office Twitter Account Hacked

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular