Kashi Vishwanath Temple :ಹಿಂದೂ ಧರ್ಮದಲ್ಲಿ ಯಾವುದೇ ಕುಟುಂಬದಲ್ಲಿ ವ್ಯಕ್ತಿಯು ಸತ್ತರೆ ಅಥವಾ ಜನಿಸಿದರೆ ಕೆಲವು ದಿನಗಳ ಕಾಲ ದೇವರ ಪೂಜೆ ಹಾಗೂ ಪುನಸ್ಕಾರಗಳನ್ನು ಆಚರಿಸಲು ನಿಷಿದ್ಧ ಹೇರಲಾಗುತ್ತದೆ. ಇದನ್ನೇ ನಾವು ಸೂತಕ ಎಂದು ಕರೆಯುತ್ತೇವೆ. ಯಾವುದೇ ಜಾತಿ ಬೇಧವೆನ್ನದೇ ಈ ಆಚರಣೆಯನ್ನು ಪ್ರತಿಯೊಬ್ಬ ಹಿಂದೂವು ಆಚರಿಸುತ್ತಾರೆ. ಆದರೆ ಈ ಆಚರಣೆಯನ್ನು ಸುಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ದೇಗುಲದ ಅರ್ಚಕರು ಮುರಿದಿದ್ದಾರೆ ಎಂಬ ಆರೋಪ ಎದುರಾಗಿದೆ.
ಡಿಸೆಂಬರ್ 13ರಂದು ಸೂತಕ ಹೊಂದಿದ್ದ ಅರ್ಚಕರೊಬ್ಬರು ದೇಗುಲದ ಗರ್ಭಗುಡಿಯಲ್ಲಿ ಕುಳಿತು ಪ್ರಧಾನಿ ಮೋದಿಯಿಂದ ಪೂಜೆ ಮಾಡಿಸಿದ್ದಾರೆ. ಈ ಸಂಬಂಧ ಆ ಅರ್ಚಕರ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಅರ್ಚಕ ಶ್ರೀಕಾಂತ್ ಮಿಶ್ರಾ ಎಂಬವರ ವಿರುದ್ಧ ಇಂತಹದ್ದೊಂದು ಗಂಭೀರ ಆರೋಪ ಎದುರಾಗಿದೆ. ಡಿಸೆಂಬರ್ 13ರಂದು ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟನೆ ಮಾಡಲಾಗಿತ್ತು. ಆ ದಿನದಂದು ಪ್ರಧಾನಿ ಮೋದಿ ವಿಶ್ವನಾಥ ದೇಗುಲದ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಿದ್ದರು. ಈ ಸಮಯದಲ್ಲಿ ಉಪಸ್ಥಿತರಿದ್ದ ಅರ್ಚಕ ಶ್ರೀಕಾಂತ್ ಮಿಶ್ರಾಗೆ ಡಿಸೆಂಬರ್ 5ರಂದು ಸೋದರಳಿಯನ ಅಗಲಿಕೆ ಸಂಭವಿಸಿತ್ತು. ರಸ್ತೆ ಅಪಘಾತವೊಂದರಲ್ಲಿ ಪ್ರಕಾಶ್ ಮಿಶ್ರಾ ನಿಧನರಾಗಿದ್ದರು.
ಆದರೆ ಈ ಸುದ್ದಿ ಯಾರಿಗೂ ತಿಳಿದಿರಿಲಿಲ್ಲ. ಯಾವುತ್ತು ಪ್ರಕಾಶ್ ಮಿಶ್ರಾ ಅವರ 13ನೇ ದಿನ ಪುಣ್ಯಸ್ಮರಣೆಯ ಆಮಂತ್ರಣ ಪತ್ರಿಕೆಯನ್ನು ಹಂಚಲಾಯ್ತೋ ಅಂದು ಈ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬರುತ್ತಿದ್ದಂತೆಯೇ ಘಟನೆಯ ಸಂಪೂರ್ಣ ವಿವರಣೆ ಸಮೇತ ದೂರನ್ನು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ನ ಮಾಜಿ ಸದಸ್ಯ ಪ್ರದೀಪ್ ಕುಮಾರ್ ಬಜಾಜ್ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಂಬಂಧಪಟ್ಟವರಿಗೆ ಕಳುಹಿಸಿಕೊಟ್ಟಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿರುವ ಪ್ರದೀಪ್ ಕುಮಾರ್ ಬಜಾಜ್, ಸೂತಕದ ಅವಧಿಯಲ್ಲಿಯೇ ಅರ್ಚಕ ಶ್ರೀಕಾಂತ್ ಮಿಶ್ರಾ ಕಾಶಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿದ್ದಾರೆ. ಡಿಸೆಂಬರ್ 5ರಂದು ಅವರ ಸೋದರಳಿಯ ಮಧ್ಯಪ್ರದೇಶದಲ್ಲಿ ನಿಧನರಾಗಿದ್ದಾರೆ. ಅವರಿಗೆ ಡಿಸೆಂಬರ್ 6ರಂದು ಅಂತ್ಯಕ್ರಿಯೆ ಮಾಡಲಾಗಿತ್ತು. ಹೀಗಾಗಿ ಸೂತಕವಿದ್ದರೂ ಸಹ ಅರ್ಚಕ ಶ್ರೀಕಾಂತ್ ಶರ್ಮಾ ಹಿಂದೂ ಸಂಪ್ರದಾಯವನ್ನು ಮುರಿದಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿ : Rare Pink Fish : ಸಮುದ್ರದಾಳದಲ್ಲಿ ಪತ್ತೆಯಾಯ್ತು ನಡೆದಾಡುವ ಅಪರೂಪದ ಮೀನು
ಇದನ್ನೂ ಓದಿ : Omicron Cases India Surge: ಭಾರತದಲ್ಲಿ ಓಮಿಕ್ರಾನ್ ಸ್ಪೋಟ : 578 ಪ್ರಕರಣ
Kashi Vishwanath Temple : varanasikashi Vishwanath mandir corridor poojan by pm modi was done in sutakkal action against pandit