Wayanad landslide death toll rises to 143: ಕೇರಳ : ದೇಶವನ್ನೇ ಬೆಚ್ಚಿಬೀಳಿಸಿರುವ ಕೇರಳದ ವಯನಾಡಿನ ಮುಂಡ್ಕೈ ಭೂಕುಸಿತದಲ್ಲಿ 143 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ. 116 ಮತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ದೇವರನಾಡಿನಲ್ಲಿ ರಣಮಳೆ ಮುಂದುವರಿದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಪ್ರಕಾರ, ದುರಂತ ಸ್ಥಳದಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ, ನಾಗರಿಕ ರಕ್ಷಣೆ, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ತುರ್ತು ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಅಲ್ಲದೇ ಕಣ್ಣೂರಿನ ಡಿಎಸ್‌ಸಿ ಸೆಂಟರ್‌ನ 200 ಭಾರತೀಯ ಸೇನಾ ಸಿಬ್ಬಂದಿ, ಕೋಝಿಕ್ಕೋಡ್‌ನಿಂದ 122 ಟಿಎ ಬೆಟಾಲಿಯನ್ ಕೂಡ ಸ್ಥಳದಲ್ಲಿದ್ದಾರೆ. ವಾಯುಪಡೆಯ ಹೆಲಿಕಾಫ್ಟರ್, ಎಂಐ -17 ಮತ್ತು ಎಎಲ್‌ಹೆಚ್ ಅನ್ನು ಸಹ ರಕ್ಷಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
೧೧೬ ಮೃತದೇಹಗಳ ಮರಣೋತ್ತರ ಕಾರ್ಯ ಪೂರ್ಣ : ಸಚಿವೆ ವೀಣಾ ಜಾರ್ಜ್
ವಯನಾಡಿನ ವಿವಿಧ ಆಸ್ಪತ್ರೆಗಳಲ್ಲಿ 120 ಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಮತ್ತು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ನೀಡಿರುವ ಮಾಹಿತಿಯ ಪ್ರಕಾರ ಇದುವರೆಗೆ ಒಟ್ಟು 116 ಮೃತದೇಹಗಳ ಮರಣೋತ್ತರ ಕಾರ್ಯವನ್ನು ಪೂರ್ಣಗೊಂಡಿದೆ. ದುರಂತದಲ್ಲಿ ಮೃತಪಟ್ಟವರ ಪೈಕಿ ಒಟ್ಟು 48 ಜನರ ಗುರುತು ಪತ್ತೆ ಹಚ್ಚಲಾಗಿದೆ. ಮೆಪ್ಪಾಡಿ ಆರೋಗ್ಯ ಕೇಂದ್ರದಲ್ಲಿ 63 ಮೃತ ದೇಹಗಳ ಪೈಕಿ 42 ಜನರನ್ನು ಗುರುತಿಸಲಾಗಿದೆ. ವಿಮ್ಸ್ ಆಸ್ಪತ್ರೆಯಲ್ಲಿ 4, ಬತ್ತೇರಿ ತಾಲೂಕು ಆಸ್ಪತ್ರೆಯಲ್ಲಿ 1 ಹಾಗೂ ನಿಲಂಬೂರು ಜಿಲ್ಲಾ ಆಸ್ಪತ್ರೆಯಲ್ಲಿ 51 ಶವಗಳಿದ್ದು, ಉಳಿದಂತೆ 19 ಮಂದಿಯ ದೇಹದ ಭಾಗಗಳು ಪತ್ತೆಯಾಗಿದೆ. ಉಳಿದಂತೆ ವಿವಿಧ ಆಸ್ಪತ್ರೆಗಳಲ್ಲಿ 131 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದುವರಿದ ಭಾರೀ ಮಳೆ : ಶಾಲೆಗಳಿಗೆ ರಜೆ ಘೋಷಣೆ
ರಣ ಮಳೆಯಿಂದಾಗಿ ಕೇರಳದಲ್ಲಿ ಸಂಭವಿಸಿದ ದುರಂತ ಹಾಗೂ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಜುಲೈ 31 ಬುಧವಾರದಂದು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ವಯನಾಡ್, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಇಡುಕ್ಕಿ, ಎರ್ನಾಕುಲಂ, ಆಲಪ್ಪುಳ ಸೇರಿ 11 ಜಿಲ್ಲೆಗಳಿಗೆ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ : ಕೋಟ ಉದ್ಯಮಿ ಮನೆಗೆ ಬಂದ ಆಗಂತುಕರು ! ಪೊಲೀಸರಿಂದ ತನಿಖೆ ಆರಂಭ

ಅಗಸ್ಟ್ 1ರ ವರೆಗೆ ಭಾರೀ ಮಳೆ : ಆರೆಂಜ್ ಅಲರ್ಟ್ ಘೋಷಣೆ
ಭಾರತೀಯ ಹವಾಮಾನ ಇಲಾಖೆ (IMD) ವಯನಾಡ್ ಮತ್ತು ನೆರೆಯ ಜಿಲ್ಲೆಗಳಲ್ಲಿ ಆರಂಜ್ ಅಲರ್ಟ್ ಘೋಷಿಸಲಾಗಿದೆ. ಜುಲೈ 31 ಮತ್ತು ಆಗಸ್ಟ್ 1 ರಂದು ಭಾರೀ ಮಳೆಯಿಂದ ಅತೀ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯು ಆಗಸ್ಟ್ 2 ರಂದು ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಬಲವಾದ ಮೇಲ್ಮೈ ಗಾಳಿಯೊಂದಿಗೆ ಜುಲೈ 30 ಮತ್ತು 31 ರಂದು ಕೇರಳದ ಮೇಲೆ 30-40 ರಿಂದ 50 ಕಿಮೀ ವೇಗವನ್ನು ತಲುಪುವ ವೇಗವು ಸಾಂದರ್ಭಿಕವಾಗಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಉಡುಪಿ : ಬಾರೀ ಮಳೆ, ರೆಡ್ ಅಲರ್ಟ್ : 4ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ
ವಯನಾಡು ದುರಂತ : ಒಡಿಶಾದ ಇಬ್ಬರು ನಾಪತ್ತೆ
ಕೇರಳದ ವಯನಾಡಿನಲ್ಲಿ ಸಂಭವಿಸಿರುವ ದುರಂತದಲ್ಲಿ ಕೇರಳಿಗರು ಮಾತ್ರವಲ್ಲದೇ ಒಡಿಶಾದ ಇಬ್ಬರು ವ್ಯಕ್ತಿಗಳು ನಾಪತ್ತೆ ಆಗಿದ್ದಾರೆ ಎಂದು ಒಡಿಶಾ ಸರಕಾರ ತಿಳಿಸಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಮಾಹಿತಿಯ ಪ್ರಕಾರ ಒಡಿಶಾದ ಇಬ್ಬರು ನಾಗರೀಕರನ್ನು ರಕ್ಷಣೆ ಮಾಡಲಾಗಿದೆ. ಇಬ್ಬರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : Shiradi Ghat Landslide : ಶಿರಾಡಿ ಘಾಟ್ ಭೂಕುಸಿತದಲ್ಲಿ ಸಿಲುಕಿದ ಟ್ಯಾಂಕರ್ : ಬೆಂಗಳೂರು – ಮಂಗಳೂರು ಸಂಪರ್ಕ ಕಡಿತ
ಮುಂಡಕ್ಕೈ ದುರಂತದ ವಿಡಿಯೋ ವೈರಲ್
ವಯನಾಡಿನ ಮುಂಡಕ್ಕೈನಲ್ಲಿ ನಡೆದ ಭೂಕುಸಿತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ದುರಂತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ದುರಂತದಲ್ಲಿ ಮೃತಪಟ್ಟವರು ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರು. ಇವರೆಲ್ಲರೂ ಕೂಡ ಚಹಾ ತೋಟ ಮತ್ತು ರಸ್ತೆ ಪಕ್ಕದಲ್ಲಿ ನಿರ್ಮಿಸಲಾಗಿರುವ ಸಣ್ಣ ಮನೆಗಳಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ದುರಂತದಲ್ಲಿ ಮೃತಪಟ್ಟವರ ಮೃತದೇಹಗಳು ದೂರದ ವರೆಗೂ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಮೃತಪಟ್ಟಿರುವವರ ಸಂಖ್ಯೆ ಎಷ್ಟು ಅನ್ನೋದು ನಿಖರವಾಗಿ ತಿಳಿದು ಬಂದಿಲ್ಲ. ವಯನಾಡ್ ಒಂದರಲ್ಲೇ 3,069 ಜನರು 45 ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕೇರಳ ಸರಕಾರ ದುರಂತ ಸ್ಥಳದಲ್ಲಿ ವಾಸಿಸುತ್ತಿದ್ದವರ ಮಾಹಿತಿ ಕಲೆ ಹಾಕುವ ಕಾರ್ಯವನ್ನು ಮಾಡುತ್ತಿದೆ.
ಇನ್ನೊಂದೆಡೆಯಲ್ಲಿ ಕೇರಳದಲ್ಲಿ ನಡೆದಿರುವ ಮಹಾ ದುರಂತಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋಡಿ, ಲೋಕಸಭೆಯ ವಿರೋಧ ಪಕ್ಷದ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ವಯನಾಡ್ ದುರಂತಕ್ಕೆ ದೇಶವೇ ಕಂಬನಿ ಮಿಡಿಯುತ್ತಿದೆ.
Wayanad landslide death toll rises to 143: Continued rain in Kerala declares holiday for schools, colleges