ದೆಹಲಿ :Hindu gods :ಚುನಾವಣೆಗಳು ಸಮೀಪಿಸುತ್ತಿರುವುದರಿಂದ ರಾಜಕೀಯ ನಾಯಕರು ಯಾವುದೇ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯಿಂದ ನೀಡುವುದು ಒಳಿತು. ಆದರೆ ಆಮ್ ಆದ್ಮಿ ಪಕ್ಷದ ಸಚಿವ ರಾಜೇಂದ್ರ ಪಾಲ್ ಗೌತಮ್ ಇತ್ತೀಚೆಗೆ ಸಾಮೂಹಿಕ ಮತಾಂತರ ಕೂಟದಲ್ಲಿ ಭಾಗಿಯಾಗಿದ್ದರು. ಈ ಕೂಟದಲ್ಲಿ ಅವರು ಜನರು ಹಿಂದೂ ದೇವರು ಹಾಗೂ ದೇವತೆಗಳನ್ನು ಪೂಜಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಅಕ್ಟೋಬರ್ ಐದರಂದು ಭೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ದೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರ ರಾಜಧಾನಿ ದೆಹಲಿಯ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ದರು.
ವೈರಲ್ ಆಗಿರುವ ವಿಡಿಯೋದಲ್ಲಿ ಆಪ್ನ ಸಚಿವ ರಾಜೇಂದ್ರ ಪಾಲ್ ಗೌತಮ್ ಸೇರಿದಂತೆ ಇತರರು ಪ್ರಮಾಣ ವಚನ ಸ್ವೀಕರಿಸುವುದನ್ನು ಕಾಣಬಹುದಾಗಿದೆ. ನನಗೆ ಬ್ರಹ್ಮ , ವಿಷ್ಣು ಹಾಗೂ ಮಹೇಶ್ವರನಲ್ಲಿ ನಂಬಿಕೆ ಇಲ್ಲ. ನಾನು ಹಿಂದೂ ದೇವರನ್ನು ಪೂಜಿಸುವುದಿಲ್ಲ. ನನಗೆ ರಾಮನಲ್ಲಿ ನಂಬಿಕೆ ಇಲ್ಲ. ಹಾಗೂ ರಾಮನ ಅವತಾರ ಎಂದು ಹೇಳಲಾಗುವ ಕೃಷ್ಣನನ್ನೂ ನಾನು ಆರಾಧಿಸುವುದಿಲ್ಲ ಎಂದಿದ್ದಾರೆ.
ಈ ಸಂಬಂಧ ರಾಜೇಂದ್ರಪಾಲ್ ಟ್ವೀಟ್ ಮಾಡಿದ್ದು, ಬುದ್ಧನ ಕಡೆಗಿನ ಮಿಷನ್ನ್ನು ಜೈ ಭೀಮ್ ಎಂದು ಕರೆಯೋಣ. ಇಂದು ವಿಜಯ ದಶಮಿಯಂದು ಮಿಷನ್ ಜೈ ಭೀಮ್ ಅಡಿಯಲ್ಲಿ 10 ಸಾವಿರಕ್ಕೂ ಹೆಚ್ಚು ಬುದ್ಧಿ ಜೀವಿಗಳು ಜಾತಿ ಮತ್ತು ಅಸ್ಪೃಶ್ಯ ಮುಕ್ತ ಭಾರತವನ್ನು ನಿರ್ಮಿಸೋಣ ಎಂದು ಬರೆದುಕೊಂಡಿದ್ದಾರೆ.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಬಿಜೆಪಿ ನಾಯಕರು ಆಪ್ನ ಸಚಿವ ರಾಜೇಂದ್ರ ಪಾಲ್ ಗೌತಮ್ ವಿರುದ್ಧ ಹರಿಹಾಯ್ದಿದ್ದಾರೆ. ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿರುವ ಬಿಜೆಪಿಯ ಅಮಿತ್ ಮಾಳವಿಯ, ಅರವಿಂದ್ ಕೇಜ್ರಿವಾಲ್ ಹಾಗೂ ಸಚಿವ ರಾಜೇಂದ್ರ ಪಾಲ್ ಬ್ರೇಕಿಂಗ್ ಇಂಡಿಯಾ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಹಿಂದೂ ದ್ವೇಷದ ಪ್ರಚಾರದ ಪ್ರಧಾನ ಪ್ರಾಯೋಜಕರು ಎಂದು ಗುಡುಗಿದ್ದಾರೆ.
ಇಂದು ಹಿಂದೂ ಹಾಗೂ ಬೌದ್ಧ ಧರ್ಮಕ್ಕೆ ಮಾಡಿದ ಅವಮಾನ. ಆಪ್ ಸಚಿವರು ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ಕೂಡಲೇ ಇಂತಹ ಸಚಿವರನ್ನು ಸಂಪುಟದಿಂದ ಕಿತ್ತೆಸೆಯಬೇಕು. ನಾವು ಅವರ ವಿರುದ್ಧ ದೂರು ಸಲ್ಲಿಸುತ್ತಿದ್ದೇವೆ. ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಗುಡುಗಿದ್ದಾರೆ.
ಬಿಜೆಪಿಯ ಈ ಆರೋಪಗಳಿಗೆ ತಿರುಗೇಟು ನೀಡಿದ ಸಚಿವ ರಾಜೇಂದ್ರ ಪಾಲ್ ಗೌತಮ್, ಬಿಜೆಪಿ ದೇಶ ವಿರೋಧಿ. ನನಗೆ ಬೌದ್ಧ ಧರ್ಮದಲ್ಲಿ ನಂಬಿಕೆ ಇದೆ. ಇದರಲ್ಲಿ ಯಾರಿಗಾದರೂ ತೊಂದರೆ ಉಂಟೇ..? ಅವರು ದೂರು ನೀಡಲಿ. ಸಂವಿಧಾನವು ನಮಗೆ ಸ್ವಾತಂತ್ರ್ಯ ನೀಡಿದೆ. ಯಾವುದೇ ಧರ್ಮವನ್ನು ಅನುಸರಿಸುವ ಸ್ವಾತಂತ್ರ್ಯ ನನಗೆ ಇದೆ. ಬಿಜೆಪಿಯು ಆಪ್ಗೆ ಹೆದರುತ್ತದೆ. ಅವರ ನಮ್ಮ ವಿರುದ್ಧ ಕೇವಲ ನಕಲಿ ಪ್ರಕರಣವನ್ನು ದಾಖಲಿಸಲು ಮಾತ್ರ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ : Sandeep Lamichhane : ಹದಿಹರೆಯದ ಬಾಲಕಿ ಮೇಲೆ ಅತ್ಯಾಚಾರ ಕೇಸ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಐಪಿಎಲ್ ಆಟಗಾರ ಅರೆಸ್ಟ್
ಇದನ್ನೂ ಓದಿ : Weather Report : ಕರ್ನಾಟಕದಲ್ಲಿ 3 ಬಾರೀ ಮಳೆ : ಇಂದು ಯೆಲ್ಲೋ ಅಲರ್ಟ್
‘Won’t worship Hindu gods’: AAP minister attends mass conversion event in Delhi, BJP hits back