ಕಾಬೂಲ್ : ಅಫ್ಘಾನಿಸ್ತಾನದ ಪಂಜ್ಶಿರ್ ಪ್ರಾಂತ್ಯದ ವಿರುದ್ಧ ತಾಲಿಬಾನ್ ಸಂಪೂರ್ಣ ಗೆಲುವು ಸಾಧಿಸಿದೆ ಎಂದು ತಾಲಿಬಾನ್ ನಾಯಕರು ಹೇಳಿಕೊಂಡಿದ್ದಾರೆ. ಆದರೆ ಇದೀಗ ಒಂದು ದಿನದ ನಂತರ, ಅಪರಿಚಿತ ಮಿಲಿಟರಿ ವಿಮಾನಗಳು ಕಣಿವೆಯಲ್ಲಿ ಉಗ್ರಗಾಮಿ ಗುಂಪಿನ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಸ್ಥಳೀಯ ಸುದ್ದಿ ವರದಿಗಳು ತಿಳಿಸಿವೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಪ್ರತಿರೋಧ ಪಡೆಗಳ ಕೊನೆಯ ಭದ್ರಕೋಟೆಯಾಗಿದ್ದ ಪಂಜ್ಶಿರ್ ಪ್ರಾಂತ್ಯವನ್ನು ‘ಸಂಪೂರ್ಣವಾಗಿ ಜಯಿಸಲಾಗಿದೆ’ ಎಂದು ತಾಲಿಬಾನ್ ಸೋಮವಾರ ಹೇಳಿಕೊಂಡಿದೆ. ಪಂಜ್ಶಿರ್ ಗವರ್ನರ್ ಕಚೇರಿಯಲ್ಲಿ ಬಂದೂಕು ಹಿಡಿದ ತಾಲಿಬಾನ್ ಹೋರಾಟಗಾರರು ಧ್ವಜ ಹಾರಿಸುತ್ತಿರುವ ವಿಡಿಯೋಗಳು ಟ್ವಿಟರ್ ನಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ತಾಲಿಬಾನ್ ಕೈವಶವಾಯ್ತು ಪಂಜ್‍ಶೀರ್ : ಎದುರಾಯ್ತು ಜನರ ವಿರೋಧ
ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ರಂಗದ (ಎನ್ ಆರ್ ಎಫ್) ನಾಯಕ ಅಹ್ಮದ್ ಮಸೂದ್, ಪಂಜ್ಶಿರ್ ಅನ್ನು ಗೆದ್ದ ತಾಲಿಬಾನ್ ಹೇಳಿಕೆಯನ್ನು ತಳ್ಳಿಹಾಕಿದರು. ತಾಲಿಬಾನ್ ವಿರುದ್ಧ ಹೋರಾಡುತ್ತಿರುವ ಪ್ರತಿರೋಧ ಪಡೆಗಳು ‘ಅಜೇಯ’ ಮತ್ತು ತನ್ನ ‘ಕೊನೆಯ ರಕ್ತದ ಹನಿ’ ವರೆಗೆ ಹೋರಾಡುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ತಾಲಿಬಾನ್ ಉಗ್ರರಿಂದ ಪೈಶಾಚಿಕ ಕೃತ್ಯ : ಕುಟುಂಬದವರ ಎದುರಲ್ಲೇ ಗರ್ಭಿಣಿ ಪೊಲೀಸ್ ಹತ್ಯೆ
(Plot to attack Taliban positions: Ahmed Masood, leader of NRF who devised a counter-strategy)