ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ನ್ಯೂಸ್ : ಶಬರಿಮಲೆ ಅರವಣ ಪ್ರಸಾದ ವಿವಾದ ಕೊನೆಗೂ ಅಂತ್ಯ
ಇತ್ತೀಚಿನ ಕನ್ಯಾಮಾಸದ ಪೂಜಾ ಸಂದರ್ಭದಲ್ಲಿ ಸುಮಾರು 30 ಸಾವಿರ ಭಕ್ತರ ಆಗಮನವನ್ನು ನಿರೀಕ್ಷಿಸಲಾಗಿತ್ತು, ಆದರೆ ಅನಿರೀಕ್ಷಿತವಾಗಿ 50 ಸಾವಿರಕ್ಕೂ ಅಧಿಕ ಭಕ್ತರು ಶಬರಿಮಲೆಗೆ ಧಾವಿಸಿದ್ದರು.
ವಿಶ್ವಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಅತ್ಯಂತ ಪವಿತ್ರ ಹಾಗೂ ಪ್ರಮುಖ ಪ್ರಸಾದವಾದ 'ಅರವಣ ಪಾಯಸ'ದ ಅಭಾವದಿಂದ ಸೃಷ್ಟಿಯಾಗಿದ್ದ ದೊಡ್ಡ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಖುದ್ದಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದು, ತಿರುವಿದಾಂಕೂರು ದೇವಸ್ವಂ ಮಂಡಳಿ ಹಾಗೂ ಸರ್ಕಾರದ ನಡುವೆ ಉಂಟಾಗಿದ್ದ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳನ್ನು ಯಶಸ್ವಿಯಾಗಿ ಬಗೆಹರಿಸಿದ್ದಾರೆ.
ಇತ್ತೀಚಿನ ಕನ್ಯಾಮಾಸದ ಪೂಜಾ ಸಂದರ್ಭದಲ್ಲಿ ಸುಮಾರು 30 ಸಾವಿರ ಭಕ್ತರ ಆಗಮನವನ್ನು ನಿರೀಕ್ಷಿಸಲಾಗಿತ್ತು, ಆದರೆ ಅನಿರೀಕ್ಷಿತವಾಗಿ 50 ಸಾವಿರಕ್ಕೂ ಅಧಿಕ ಭಕ್ತರು ಶಬರಿಮಲೆಗೆ ಧಾವಿಸಿದ್ದರು. ಇದೇ ಅವಧಿಯಲ್ಲಿ ಮುಂಬರುವ ಮಂಡಲ ಉತ್ಸವದ ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಅರವಣ ತಯಾರಿಕಾ ಘಟಕದ ನವೀಕರಣ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಪ್ಲಾಂಟ್ ಮುಚ್ಚಿದ್ದರಿಂದ ಉತ್ಪಾದನೆಯ ಗುರಿ ಅರ್ಧಕ್ಕರ್ಧ ಕುಸಿದು, ಹಠಾತ್ ಪ್ರಸಾದದ ಕೊರತೆ ಎದುರಾಯಿತು. ಪರಿಸ್ಥಿತಿ ಕೈಮೀರಿದಾಗ ಮಂಡಳಿಯು ಭಕ್ತರಿಗೆ ತಲಾ ಒಂದು ಟಿನ್ ಪ್ರಸಾದ ಮಾತ್ರ ನೀಡುವ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದು, ಅಯ್ಯಪ್ಪ ಸ್ವಾಮಿ ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೇಜವಾಬ್ದಾರಿತನದ ವಿರುದ್ಧ ದೇವಸ್ವಂ ಸಚಿವರು ಕೂಡ ಮಂಡಳಿಯನ್ನು ತರಾಟೆಗೆ ತಗೆದುಕೊಂಡಿದ್ದರು.
ಈ ಬಿಕ್ಕಟ್ಟು ತಾರಕಕ್ಕೇರುತ್ತಿದ್ದಂತೆ ಟಿಡಿಬಿ ಅಧ್ಯಕ್ಷರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಮುಂಬರುವ ಮಂಡಲ-ಮಕರಜ್ಯೋತಿ ಯಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೇರಳಂ ಸರ್ಕಾರವು ಈಗಾಗಲೇ ₹551.50 ಕೋಟಿಗಳ ಬೃಹತ್ ಅನುದಾನವನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಮುಂದಿನ ತಿಂಗಳ ಪೂಜಾ ಅವಧಿಯಲ್ಲಿ ಪಂಪಾ ಬೇಸ್ ಕ್ಯಾಂಪ್ನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲೇ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಲಿದ್ದು, ಪ್ರಸಾದದ ಕೊರತೆ ಸಂಪೂರ್ಣವಾಗಿ ನೀಗುವ ಭರವಸೆ ಸಿಕ್ಕಿದೆ.
Topics
ಸಂಬಂಧಿತ ಸುದ್ದಿಗಳು
india
ಯೂಟ್ಯೂಬರ್ ಮಧುಮಿತಾ ನಾಪತ್ತೆ : ಕಳವಾಗಿದ್ದ 1 ಕೋಟಿ ಮೌಲ್ಯದ ಚಿನ್ನಾಭರಣ ವಶ, ಕಳತನಕ್ಕೆ ಬಿಗ್ಟ್ವಿಸ್ಟ್
india
Koel Mallick : ಟಿಎಂಸಿ (TMC) ತೊರೆದ 2 ತಿಂಗಳಲ್ಲೇ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೋಯಲ್ ಮಲ್ಲಿಕ್ : ಯಾರು ಈಕೆ ?
india
ಗ್ರಾಹಕರಿಗೆ ಬಿಗ್ ಶಾಕ್ : ಸಾಲದ ಬಡ್ಡಿ ದರ ಶೇ.0.25ರಷ್ಟು ಏರಿಕೆ ಸಾಧ್ಯತೆ!
india

