ಡ್ರೈವಿಂಗ್‌ ಲೈಸೆನ್ಸ್‌ಗೆ ಮೊಬೈಲ್‌ ಸಂಖ್ಯೆ ಲಿಂಕ್‌ ಕಡ್ಡಾಯ: ಸಾರಿಗೆ ಇಲಾಖೆ ಮಹತ್ವದ ಆದೇಶ

ಡಿಎಲ್‌ ಜೊತೆಗೆ ಮೊಬೈಲ್‌ ಸಂಖ್ಯೆ ಲಿಂಕ್‌ ಆದ್ರೆ ಸಂಚಾರ ನಿಯಮ ಉಲ್ಲಂಘನೆ (Traffic Violations) ಕುರಿತು ಇ-ಚಲನ್ ಮಾಹಿತಿ ನೇರವಾಗಿ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಪಡೆಯಬಹುದಾಗಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
driving licence mobile number link mandatory karnataka
driving licence mobile number link mandatory karnataka

ಬೆಂಗಳೂರು : ವಾಹನ ಸವಾರರಿಗೆ ಸಾರಿಗೆ ಮಹತ್ವದ ಆದೇಶ ಹೊರಡಿಸಿದ್ದು, ಕಡ್ಡಾಯವಾಗಿ ನಿಯಮ ಜಾರಿಗೆ ತರಲು ಸೂಚನೆ ನೀಡಿದೆ. ಇನ್ಮುಂದೆ ವಾಹನ ಸವಾರರು ಡ್ರೈವಿಂಗ್ ಲೈಸೆನ್ಸ್ (DL)ಗೆ ಕಡ್ಡಾಯವಾಗಿ ಮೊಬೈಲ್‌ ಸಂಖ್ಯೆಯನ್ನು ಲಿಂಕ್‌ ಮಾಡಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವ ಸಾರಿಗೆ ಇಲಾಖೆಯ ಹಲವು ಸೇವೆಗಳು ಆನ್‌ಲೈನ್‌ ಮೂಲಕವೇ ಲಭ್ಯವಿದೆ. ಡಿಜಿಟಲ್‌ ನವೀಕರಣ, ವಿಳಾಸ ಬದಲಾವಣೆ, ನವೀಕರಣ ಸೇರಿದಂತೆ ನಾಗರೀಕರು ಡಿಜಿಟಲ್‌ ಸೇವೆಗಳನ್ನು ಆಶ್ರಯಿಸಿದ್ದಾರೆ.

ಆದರೆ ಮೊಬೈಲ್‌ ಸಂಖ್ಯೆ ಲಿಂಕ್‌ ಆಗದೇ ಇದ್ದಾಗ ಸೌಲಭ್ಯಗಳನ್ನು ಪಡೆಯೋದಕ್ಕೆ ಸಾಧ್ಯವಾಗುವುದಿಲ್ಲ. ಇದೇ ಕಾರಣದಿಂದಲೇ ಡಿಜಿಟಲ್‌ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಸವಾರರು ಡಿಎಲ್‌ ಜೊತೆಗೆ ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡುವಂತೆ ಸೂಚಿಸಲಾಗಿದೆ.

ಡಿಎಲ್‌ ಜೊತೆ ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡಿದ್ರೆ ಲಾಭವೇನು ?

ಡಿಎಲ್‌ ಜೊತೆಗೆ ಮೊಬೈಲ್‌ ಸಂಖ್ಯೆ ಲಿಂಕ್‌ ಆದ್ರೆ ಸಂಚಾರ ನಿಯಮ ಉಲ್ಲಂಘನೆ (Traffic Violations) ಕುರಿತು ಇ-ಚಲನ್ ಮಾಹಿತಿ ನೇರವಾಗಿ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಪಡೆಯಬಹುದಾಗಿದೆ.

ಸಾರಿಗೆ ಇಲಾಖೆ ಜಾರಿಗೆ ತಂದಿರುವ 'ಸಾರಥಿ' (Sarathi) ಪೋರ್ಟಲ್ ಮೂಲಕ ಸಿಗುವ ಆನ್‌ಲೈನ್‌ನ ಎಲ್ಲಾ ಸೇವೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಪಡೆಯಲು ಸಹಕಾರಿಯಾಗಿದೆ.

ಡ್ರೈವಿಂಗ್‌ ಲೈಸೆನ್ಸ್‌ ದುರ್ಬಳಕೆ ಹಾಗೂ ನಕಲಿ ದಾಖಲೆಗಳ ಹಾವಳಿ ತಡೆಯಲು ಇದು ಬಹಳಷ್ಟು ಸಹಾಯ ಮಾಡುತ್ತದೆ. ಸರಕಾರದ ಪ್ರಮುಖ ಅಧಿಸೂಚನೆ ಹಾಗೂ ನವೀಕರಣ ದಿನಾಂಕಗಳು ಸಮಯಕ್ಕೆ ಸರಿಯಾಗಿ ಸವಾರರಿಗೆ ತಲುಪುತ್ತವೆ.

ಆನ್‌ಲೈನ್‌ ಮೂಲಕ ಡಿಎಲ್‌ ಜೊತೆ ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡುವುದು ಹೇಗೆ ?

  • ವಾಹನ ಸವಾರರು ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ತಮ್ಮ ಮೊಬೈಲ್ ನಂಬರ್ ಅನ್ನು ಡಿಎಲ್ ಜತೆಗೆ ಸುಲಭವಾಗಿ ಅಪ್‌ಡೇಟ್ ಮಾಡಿಕೊಳ್ಳಬಹುದು:

  • ಮೊದಲು ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ Sarathi Parivahan (sarathi.parivahan.gov.in) ಗೆ ಭೇಟಿ ನೀಡಿ.

  • ನಿಮ್ಮ ರಾಜ್ಯವಾಗಿ ಕರ್ನಾಟಕ (Karnataka) ವನ್ನು ಆಯ್ಕೆ ಮಾಡಿ.

  • ಮುಖಪುಟದಲ್ಲಿ ಕಾಣಿಸುವ 'Driving Licence Related Services' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

  • ಬಳಿಕ ಮೇನು ಪಟ್ಟಿಯಲ್ಲಿರುವ 'Apply Online' ಅಥವಾ 'Services on DL' ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ವಿವರಗಳನ್ನು ನಮೂದಿಸಿ.

  • ನಿಮಗೆ ಮೊಬೈಲ್‌ ಸಂಖ್ಯೆ ಅಪ್‌ಡೇಟ್‌ ಅಥವಾ ಬದಲಾವಣೆಗೆ ಆಯ್ಕೆ ಇರುತ್ತದೆ. ನಿಮ್ಮ ಆಧಾರ್‌ ಕಾರ್ಡ್‌ಗೆ ಜೋಡಿಸಿರುವ ಮೊಬೈಲ್‌ ಸಂಖ್ಯೆಯಲ್ಲಿ ನಮೂದಿಸಿ ಓಟಿಪಿ (OTP) ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಸಾರ್ವಜನಿಕರಿಗೆ ಇಲಾಖೆಯ ಎಚ್ಚರಿಕೆ ಏನು ?

ಕರ್ನಾಟಕ ಸಾರಿಗೆ ಇಲಾಖೆ ಹೊಸ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಸೂಚನೆ ನೀಡಿದೆ. ನಿಗದಿತ ಅವಧಿಯ ಒಳಗೆ ತಮ್ಮ ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡದಿದ್ರೆ, ಮುಂದಿನ ದಿನಗಳಲ್ಲಿ ಆನ್‌ಲೈನ್‌ ಸೇವೆಗಳನ್ನು ಯಾವುದೇ ವಿಳಂಬ ಇಲ್ಲದೇ ತಕ್ಷಣವೇ ತಮ್ಮ ಮೊಬೈಲ್‌ ನಂಬರ್‌ ಅನ್ನು ಡ್ರೈವಿಂಗ್‌ ಲೈಸೆನ್ಸ್‌ ಜೊತೆಗೆ ಲಿಂಕ್‌ ಮಾಡುವಂತೆ ಮನವಿ ಮಾಡಲಾಗಿದೆ.

Topics

ಸಂಬಂಧಿತ ಸುದ್ದಿಗಳು