ಆರ್ ಎಸ್ಎಸ್ ಕೆಂಗಣ್ಣಿಗೆ ಗುರಿಯಾದ್ರಾ ಸಚಿವ ಸುರೇಶ್ ಕುಮಾರ್ ? ಸಚಿವ ಸ್ಥಾನದಿಂದ ಪ್ರಾಥಮಿಕ, ಪ್ರೌಢ ಸಚಿವರಿಗೆ ಕೋಕ್ !

0

ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಿಜೆಪಿಯ ನಿಷ್ಠಾವಂತ ನಾಯಕ, ಆರ್ ಎಸ್ ಎಸ್ ತತ್ವಾದರ್ಶಗಳನ್ನೇ ಮೈಗೂಡಿಸಿಕೊಂಡು ಶಿಸ್ತಿನ ಸಿಪಾಯಿ ಅಂತಾನೇ ಕರೆಯಿಸಿಕೊಂಡಿದ್ರು. ಆದ್ರಿಂದು ಅದೇ ಆರ್ ಎಸ್ ಎಸ್ ಹಾಗೂ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಸುರೇಶ್ ಕುಮಾರ್. ಹೀಗಾಗಿ ಈ ಬಾರಿ ಸಚಿವ ಸ್ಥಾನದಿಂದ ಕೆಳಗಿಳಿಯೋದು ಬಹುತೇಕ ಖಚಿತ.

ಸಚಿವರಾಗಿ ಸುರೇಶ್ ಕುಮಾರ್ ಪ್ರಮಾಣವಚನ ಸ್ವೀಕಾರ (ಫೈಲ್ ಚಿತ್ರ)

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ಸ್ವೀಕರಿಸುತ್ತಲೇ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿದ್ದರು. ಶಿಕ್ಷಣ ಇಲಾಖೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ತರಲುವಲ್ಲಿಯೂ ಸಫಲರಾಗಿದ್ದಾರೆ. ಆದರೂ ಈ ಬಾರಿ ಸುರೇಶ್ ಕುಮಾರ್ ಸಚಿವಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಸಚಿವ ಸ್ಥಾನದಿಂದ ಕೆಳಗಿಳಿಯುತ್ತಿರೋದು ಸಚಿವರ ಕಾರ್ಯವೈಖರಿಯಿಂದಲ್ಲ, ಬದಲಾಗಿ ಟಿಪ್ಪು ವಿವಾದದಿಂದ.

ಹೌದು, ಟಿಪ್ಪು ವಿವಾದವನ್ನೇ ಮುಂದಿಟ್ಟುಕೊಂಡು ರಾಜ್ಯದಲ್ಲಿ 104 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಟಿಪ್ಪು ವಿವಾದವನ್ನೇ ಜೀವಂತವಾಗಿಡೋ ಪ್ಲಾನ್ ರೂಪಿಸಿತ್ತು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜ್ಯದಾದ್ಯಂತ ಟಿಪ್ಪು ಜಯಂತಿಯನ್ನು ನಿಷೇಧಿಸಿತ್ತು. ಅಲ್ಲದೇ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಟಿಪ್ಪು ಪಠ್ಯದಲ್ಲಿ ಶಾಲಾ ಪಠ್ಯ ಕ್ರಮದಿಂದ ತೆಗೆದುಹಾಕುವಂತೆ ಸಚಿವ ಸುರೇಶ್ ಕುಮಾರ್ ಗೆ ಮನವಿ ಮಾಡಿದ್ದರು. ಆದ್ರೆ ಪಠ್ಯಪುಸ್ತಕ ಸಮಿತಿ ಟಿಪ್ಪು ಪಾಠವನ್ನು ಪಠ್ಯದಿಂದ ಕೈಬಿಡಲು ಒಪ್ಪಿಗೆಯನ್ನು ಸೂಚಿಸಿಲ್ಲ. ನಂತರ ಟಿಪ್ಪು ಒಬ್ಬ ಮತಾಂದ ಅನ್ನೋ ರೀತಿಯಲ್ಲಾದ್ರೂ ಪಠ್ಯದಲ್ಲಿ ಸೇರ್ಪಡೆ ಮಾಡುವಂತೆ ಮನವಿ ಮಾಡಿದ್ರೂ, ಟಿಪ್ಪು ಇತಿಹಾಸ ತಿರುಚಲು ಸಾಧ್ಯವಿಲ್ಲ ಎಂದಿತ್ತು.

ಸಚಿವ ಸುರೇಶ್ ಕುಮಾರ್ ಟಿಪ್ಪು ವಿವಾದಕ್ಕೆ ಸಂಬಂಧಿಸಿದಂತೆ ಕೈಗೊಂಡ ನಿರ್ಣಯಗಳು ಇದೀಗ ಆರ್ ಎಸ್ ಎಸ್ ಕಣ್ಣು ಕೆಂಪಗಾಗುವಂತೆ ಮಾಡಿದೆ. ಸುರೇಶ್ ಕುಮಾರ್ ಟಿಪ್ಪು ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷ, ಆರ್ ಎಸ್ ಎಸ್ ಗಿಂತ ವೈಯಕ್ತಿಕ ವರ್ಚಸ್ಸಿಗೆ ಹೆಚ್ಚಿನ ಒತ್ತು ನೀಡಿದ್ದಾರೆನ್ನುವ ಆರೋಪವೂ ಇದೆ. ಹೀಗಾಗಿ ಸುರೇಶ್ ಕುಮಾರ್ ಅವರನ್ನು ಈ ಬಾರಿ ಸಚಿವ ಸಂಪುಟದಿಂದ ಕೈಬಿಡುವುದು ಖಚಿತವೆನ್ನುತ್ತಿವೆ ಪಕ್ಷದ ಮೂಲಗಳು.

Leave A Reply

Your email address will not be published.