ಸ್ಯಾಂಡಲ್ ವುಡ್ ಕ್ವೀನ್ ರಮ್ಯ (Ramya) ಸದ್ಯ ಕರ್ನಾಟಕದ ರಾಜಕಾರಣ ಹಾಗೂ ಸಿನಿಮಾ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ.ಆದರೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳೋದ್ರಲ್ಲಿ ಹಾಗೂ ಬಿಜೆಪಿಯನ್ನು (BJP) ಟೀಕಿಸೋದರಲ್ಲಿ ಮುಂದಿದ್ದಾರೆ.ರಾಜಕೀಯದಿಂದ ದೂರವಿದ್ದರೂ ಸೋಷಿಯಲ್ ಮೀಡಿಯಾ ದಲ್ಲಿ ರಾಜಕೀಯ ನಾಯಕರನ್ನು ಕುಟುಕುವುದನ್ನು ರಮ್ಯ ಎಂದಿಗೂ ಮರೆಯೋದಿಲ್ಲ. ಹಿಂದುತ್ವ ಮತ್ತು ಹಿಂದೂಯಿಸಂ ಬಗ್ಗೆ ಪೋಸ್ಟ್ ಮಾಡಿರೋ ರಮ್ಯ ಹಿಂದುತ್ವ ರಾಜಕೀಯ ರೂಪ ಪಡೆಯುತ್ತಿರುವುದಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಹಿಂದುತ್ವ ಮತ್ತು ಹಿಂದೂಯಿಸಂ ಎರಡು ಒಂದೇ ಅಲ್ಲ ಎಂದಿರುವ ರಮ್ಯ ಹಿಂದೂಯಿಸಂ ಎಂಬುದು ರಾಜಕೀಯವಲ್ಲ.ಆದರೆ ಹಿಂದುತ್ವ ಎಂಬುದು ರಾಜಕೀಯವಾಗಿದೆ ಎಂದು ಕಿಡಿಕಾರಿದ್ದಾರೆ. ಹಿಂದೂಯಿಸಂ ಎಂದರೇ ಅದು ಎಲ್ಲರನ್ನು ಒಳಗೊಳ್ಳುವಂತದ್ದು ಮತ್ತು ಪ್ರೀತಿಯನ್ನು ಹಂಚುವುದು ಎಂದರ್ಥ. ಇದಕ್ಕೆ ವಿರುದ್ಧವಾದ್ದದ್ದೇ ಹಿಂದುತ್ವ. ನಿಜವಾದ ಹಿಂದುಗಳಿಗೆ ಇದರ ಅರ್ಥ ತಿಳಿಯುತ್ತದೆ ಎಂದು ರಮ್ಯ ಕುಟುಕಿದ್ದಾರೆ.

ನಮ್ಮ ಪುರಾತನ ಧರ್ಮವಾಗಿರುವ ಹಿಂದು ಕೆಲವರು ರಾಜಕೀಯ ಪಕ್ಷಗಳ ರಾಜಕೀಯ ಸಾಧನವಾಗಿ ಬಳಕೆಯಾಗುತ್ತಿರುವುದನ್ನು ನೋಡಲು ನೋವಾಗುತ್ತದೆ. ನಾನು ಹಿಂದು ಅಷ್ಟೇ . ಯಾವ ರಾಜಕೀಯ ಪಕ್ಷವೂ ನನ್ನ ಹಿಂದೂಯಿಸಂ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ರಮ್ಯ ಸ್ಪಷ್ಟಪಡಿಸಿದ್ದಾರೆ. ರಮ್ಯ ಈ ಇನ್ ಸ್ಟಾಗ್ರಾಂ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಕೆಲವರು ರಮ್ಯ ಅಭಿಪ್ರಾಯಕ್ಕೆ ಸಹಮತ ತೋರಿಸಿದರೇ, ಇನ್ನೂ ಕೆಲವರು ಹಿಂದುತ್ವ ಬಗ್ಗೆ ನಾವು ನಿಮ್ಮಿಂದ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ರಮ್ಯ ಚುನಾವಣೆ ಸೇರಿದಂತೆ ಯಾವ ಸಂದರ್ಭದಲ್ಲೂ ರಾಜ್ಯಕ್ಕೆ ಆಗಮಿಸಿರಲಿಲ್ಲ. ಹಿರಿಯ ನಟ ಅಂಬರೀಶ್ ಅಂತಿಮದರ್ಶನಕ್ಕೂ ರಮ್ಯ ಬಾರದೇ ಇರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ರಾಜಕೀಯವಾಗಿ ರಮ್ಯಗೆ ಬೆಂಬಲ ನೀಡಿದ್ದ ಅಂಬರೀಶ್ ನಿಧನದ ವೇಳೆಯೂ ರಮ್ಯ ಗೈರಾಗಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕೆಲದಿನಗಳ ಹಿಂದೆ ಪುನೀತ್ ರಾಜ್ ಕುಮಾರ್ ನಿಧನದ ವೇಳೆ ರಮ್ಯ ಬೆಂಗಳೂರಿಗೆ ಆಗಮಿಸಿದ್ದು ಪುನೀತ್ ಅಂತಿಮ ದರ್ಶನ ಪಡೆದು ಕಣ್ಣಿರಿಟ್ಟಿದ್ದರು.
ಇದನ್ನೂ ಓದಿ : ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ವಂಚನೆ ಪ್ರಕರಣ ದಾಖಲು
ಇದನ್ನೂ ಓದಿ : ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೋನುಸೂದ್ ಸಹೋದರಿ ಮಾಳವಿಕಾ ಸೂದ್
( Actress Ramya who teaches Hindutva lesson to BJP leaders)