ಭಾನುವಾರ, ಏಪ್ರಿಲ್ 27, 2025
Homekarnatakaಅನ್ನಭಾಗ್ಯ ಯೋಜನೆಯಲ್ಲಿ ಭಾರೀ ಬದಲಾವಣೆ : ಈ ಕುಟುಂಬಗಳಿಗಿಲ್ಲ ಹೆಚ್ಚುವರಿ ಅಕ್ಕಿಯ ಹಣ

ಅನ್ನಭಾಗ್ಯ ಯೋಜನೆಯಲ್ಲಿ ಭಾರೀ ಬದಲಾವಣೆ : ಈ ಕುಟುಂಬಗಳಿಗಿಲ್ಲ ಹೆಚ್ಚುವರಿ ಅಕ್ಕಿಯ ಹಣ

- Advertisement -

ಬೆಂಗಳೂರು : ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ (Anna Bhagya Yojana) ಫಲಾನುಭವಿಗಳಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ ಕೊಟ್ಟಿದೆ. ಈ ಹಿಂದೆ ಅನ್ನಭಾಗ್ಯ ಯೋಜನೆಯಡಿ ಹತ್ತು ಕೆ.ಜಿ ಅಕ್ಕಿ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ರಾಜ್ಯದ ಸಾಕಷ್ಟು ಅಕ್ಕಿ ಇಲ್ಲದ ಕಾರಣ ಐದು ಕೆ.ಜಿ ಅಕ್ಕಿ, ಮತ್ತುಳಿದಂತೆ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವುದಾಗಿ ಹೇಳಲಾಗಿತ್ತು. ಅದರಂತೆ ಜುಲೈ, ಅಗಸ್ಟ್‌ ತಿಂಗಳಲ್ಲಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿತ್ತು. ಆದರೆ ಅನ್ನಭಾಗ್ಯ (Anna Bhagya Yojana) ಯೋಜನೆಯಡಿ ಬಾರೀ ಬದಲಾವಣೆ ಮಾಡಲಾಗಿದ್ದು, ಅರ್ಹರಿಗೆ ಮಾತ್ರ ಅಕ್ಕಿ ಹಾಗೂ ಹಣವನ್ನು ಹಣ ಜಮೆ ಮಾಡಲಾಗುತ್ತಿದೆ.

ಈಗಾಗಲೇ ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ (Anna Bhagya Yojana)ಯಡಿ ಸುಮಾರು 29 ಲಕ್ಷ ಫಲಾನುಭವಿಗಳಲ್ಲಿ ಹೆಚ್ಚಿನ ಕುಟುಂಬಗಳು ಇದರಿಂದ ವಂಚಿತರಾಗಿದ್ದಾರೆ. ಸರಕಾರದ ತಾಂತ್ರಿಕ ದೋಷದ ನೆಪ ಹೇಳಿ, ಯೋಜನೆಯಡಿ ಅರ್‌ ಫಲಾನುಭವಿಗಳಿಗೂ ಪ್ರಯೋಜನವನ್ನು ನೀಡದೇ ವಂಚನೆಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಫಲಾನುಭವಿಗಳ ಕುಟುಂಬದ ಸದಸ್ಯರ ಗರಿಷ್ಠ ಮಿತಿ ದಾಟಿ, ಸತತ ಮೂರು ತಿಂಗಳಿನಿಂದ ಪಡಿತರ ಪಡೆಯದ ಕುಟುಂಬಗಳಿಗೆ ಡಿಬಿಟಿ ಸವಲತ್ತು ಸ್ಥಗಿತಗೊಳಿಸಲಾಗಿದೆ.

Big change in Annabhagya Yojana: These families do not have money for extra rice
Image Credit To Original Source

ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರಾ ಬಿ ವೈ ವಿಜಯೇಂದ್ರ : ಪುತ್ರನ ಅಧಿಕಾರಕ್ಕಾಗಿ ಬಿಎಸ್ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್

ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್‌ ಅವರು ಈ ಕುರಿತು ಮಾತನಾಡಿ, ತಾಂತ್ರಿಕ ದೋಷದಿಂದಾಗಿ 29 ಲಕ್ಷ ಪಡಿತರ ಕಾರ್ಡ್‌ ಕುಟುಂಬಳಿಗೆ ಡಿಬಿಟಿ ಸ್ಥಗಿತಗೊಳಿಸಿದ್ದೇವೆ. ಈ ಸವಲತ್ತಿನಿಂದ ವಂಚಿತವಾಗಿರುವ ಫಲಾನುಭವಿ ಕುಟುಂಬಗಳು ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದರೇ ಸರಿಪಡಿಸಿ, ಸವಲತ್ತು ಕಲ್ಪಿಸುತ್ತೇವೆ” ಎಂದು ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಹೊಸ ನಿಯಮ ಜಾರಿ :

ಕಳೆದ ಮೂರು ತಿಂಗಳಿಂದ ರೇಷನ್‌ ಪಡೆಯದ ಸುಮಾರು 5.40 ಲಕ್ಷ ಕುಟುಂಬಗಳಿಗೆ ಹಾಗೂ ಎಎವೈ ಯೋಜನೆಯ ಗರಿಷ್ಠ ಕುಟುಂಬ ಸದಸ್ಯರ ಮಿತಿ ದಾಟಿದಂತ 3.50 ಲಕ್ಷ ಕುಟುಂಬಗಳಿಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಲು ಸಾಧ್ಯವಿಲ್ಲ. ಆದರೆ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಹಣ ನೀಡದೇ ಪಡಿತರ ಮಾತ್ರ ವಿತರಿಸಿದ್ದಾರೆ. ಇದನ್ನೂ ಓದಿ : ಮನೆಯಲ್ಲಿ ಗಣಪತಿ ಕೂರಿಸುವವರೇ ಎಚ್ಚರ ! ಗಣೇಶ ಚತುರ್ಥಿಗೆ ಹೊಸ ರೂಲ್ಸ್‌ ಜಾರಿ

ಈ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಹೆಚ್ಚುವರಿ ಅಕ್ಕಿ ಹಾಗೂ ಹಣದ ನಿರೀಕ್ಷೆಯಲ್ಲಿ ಇದ್ದ ಫಲಾನುಭವಿಗಳಿಗೆ ದೊಡ್ಡ ಮಟ್ಟದ ಶಾಕಿಂಗ್‌ ನೀಡಿದೆ. ಮೂರು ತಿಂಗಳಿಂದ ರೇಷನ್‌ ಸಿಗದೇ, ಗರಿಷ್ಠ ಸದಸ್ಯರನ್ನು ಹೊಂದಿದ್ದ ಕುಟುಂಬಗಳಿಗೆ ಹೆಚ್ಚುವರಿ ಅಕ್ಕಿ ಹಾಗೂ ಹಣ ಎರಡು ಬ್ರೇಕ್‌ ಹಾಕಿದೆ.

Big change in Annabhagya Yojana: These families do not have money for extra rice
Image Credit To Original Source

ಅನ್ನಭಾಗ್ಯ ಜೊತೆ ಜೊತೆಗೆ ಗೃಹಲಕ್ಷ್ಮೀ ಯೋಜನೆಯಲ್ಲಿಯೂ ಹಲವು ಬದಲಾವಣೆಯನ್ನು ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಲ್ಲ ಆದಾಯ ತೆರಿಗೆ ಹಾಗೂ ಜಿಎಸ್‌ಟಿ ತೆರಿಗೆ ಪಾವತಿ ಮಾಡುವವರಿಗೆ ಗೃಹಲಕ್ಷ್ಮೀ ಯೋಜನೆಯ ಭಾಗ್ಯ ಸಿಗುವುದಿಲ್ಲ. ಇನ್ನು ಮನೆಯ ಯಜಮಾನರು ಪಡಿತರ ಚೀಟಿಯಲ್ಲಿ ಮುಖ್ಯಸ್ಥನಾಗಿದ್ದರೆ ಅಂತಹ ಕುಟುಂಬಗಳಿಗೆ ಈ ಭಾಗ್ಯವಿಲ್ಲ. ಆದರೆ ಈ ಕುರಿತು ರೇಷನ್‌ ಕಾರ್ಡ್‌ಗಳಲ್ಲಿ ತಿದ್ದುಪಡಿ ಮಾಡುವ ಸಲುವಾಗಿ ಸರಕಾರ ಈಗಾಗಲೇ ಹತ್ತು ದಿನಗಳ ಕಾಲಾವಕಾಶವನ್ನು ನೀಡಿದೆ. ಆದರೆ ಸರ್ವರ್‌ ಸಮಸ್ಯೆಯಿಂದ ಜನರು ಪರದಾಡುತ್ತಿದ್ದಾರೆ.

ಸೆಪ್ಟೆಂಬರ್‌ ಆರಂಭದಿಂದಲೇ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಹತ್ತು ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ ಇದೀಗ ಸರ್ವರ್‌ ಸಮಸ್ಯೆಯಿಂದ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯ ನಿರೀಕ್ಷೆಯಲ್ಲಿದ್ದವರು ಇದೀಗ ಆತಂಕಕ್ಕೆ ಸಿಲುಕಿದ್ದಾರೆ. ನಿತ್ಯವೂ ಸರ್ವರ್‌ ಸಮಸ್ಯೆಯಿಂದಾಗಿ ಜನರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Big change in Annabhagya Yojana: These families do not have money for extra rice

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular