ಮಂಗಳವಾರ, ಏಪ್ರಿಲ್ 29, 2025
HomekarnatakaBJP : ಮಂತ್ರಿಯಾಗೋ ಕನಸು ಕಾಣುತ್ತಿದ್ದವರಿಗೆ ಬಿಗ್‌ ಶಾಕ್‌ ಕೊಟ್ಟ ಬಿಜೆಪಿ

BJP : ಮಂತ್ರಿಯಾಗೋ ಕನಸು ಕಾಣುತ್ತಿದ್ದವರಿಗೆ ಬಿಗ್‌ ಶಾಕ್‌ ಕೊಟ್ಟ ಬಿಜೆಪಿ

- Advertisement -

ಬೆಂಗಳೂರು : ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ಬಿಜೆಪಿ (BJP) ಶಾಸಕರು ಹಗಲು ರಾತ್ರಿ ಎನ್ನದೇ ಕಾಯ್ತಿರೋದು ಸಚಿವ ಸಂಪುಟ ವಿಸ್ತರಣೆಗೆ. ಸದಾ ಒಂದಿಲ್ಲೊಂದು ಕಾರಣಕ್ಕೆ ವಿಳಂಬವಾಗುತ್ತಿದ್ದ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗಲಿದೆ ಎಂಬ ಚರ್ಚೆ ಮತ್ತೆ ಮುನ್ನಲೆಗೆ ಬಂದಿತ್ತು. ಪಂಚ ರಾಜ್ಯ ಚುನಾವಣೆ ಗೆಲುವಿನ ಬಳಿಕ ಸಂಪುಟ ವಿಸ್ತರಣೆಯ ಸಿಹಿಸುದ್ದಿಗೆ ಕಾದಿದ್ದ ಬಿಜೆಪಿಯ ಸಚಿವ ಸ್ಥಾನಾಕಾಂಕ್ಷಿಗಳಿಗೆ ಮತ್ತೊಮ್ಮೆ ಶಾಕ್ ಎದುರಾಗಿದೆ.

ಹೊಸ ವರ್ಷವಾಯ್ತು, ಬಳಿಕ ಸಂಕ್ರಾಂತಿ ಆಯ್ತು ಕೊನೆಗೆ ಪಂಚ ರಾಜ್ಯ ಚುನಾವಣೆಯೂ ಆಯ್ತು. ಈಗ ಪಂಚ ರಾಜ್ಯ ಚುನಾವಣೆಯ ರಿಸಲ್ಟ್ ಕೂಡ ಹೊರಬಂದು ಬಿಜೆಪಿ ಜಯಭೇರಿ ಕೂಡ ಬಾರಿಸಿ ಆಯ್ತು. ಹೀಗಾಗಿ ಇನ್ನೇನು ರಾಜ್ಯ (BJP ) ಬಿಜೆಪಿ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗ್ತಿದೆ ಅಂತ ಖುಷಿಯಾಗಿದ್ದ ಶಾಸಕರುಗಳಿಗೆ ಕೇಂದ್ರ ಗಣಿ ಗಣಿ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ನಿರಾಸೆ ತಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜೋಷಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸದ್ಯಕ್ಕಿಲ್ಲ ಎಂದಿದ್ದಾರೆ. ಏಪ್ರಿಲ್ 8 ರವರೆಗೆ ಲೋಕಸಭಾ ಅಧಿವೇಶನವಿದೆ.‌ ಮಾರ್ಚ್ 30 ರವರೆಗೆ ರಾಜ್ಯ ವಿಧಾನಸಭಾ ಅಧಿವೇಶನ ಇದೆ. ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಹಾಗೂ ಪುನರಚನೆಯ ಬಗ್ಗೆ ಚರ್ಚೆ ನಡೆಲಾಗುವುದು.‌ಅಲ್ಲಿಯವರೆಗೂ ಯಾವುದೇ ರೀತಿಯಲ್ಲೂ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆಯ ಪ್ರಸ್ತಾಪವೇ ರಾಜ್ಯ ಹಾಗೂ ಕೇಂದ್ರದ ನಾಯಕರ ಮುಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ : MLA ಚುನಾವಣೆ ಸೋತವನನ್ನು MLC ಮಾಡಿದ್ದು ಕಾಂಗ್ರೆಸ್‌ : ಇಬ್ರಾಹಿಂಗೆ ಸಿದ್ದರಾ ತಿರುಗೇಟು

ಜೋಷಿ ಈ ಹೇಳಿಕೆ ಸಚಿವ ಸ್ಥಾನದ ನೀರಿಕ್ಷೆಯಲ್ಲಿದ್ದ ಶಾಸಕರುಗಳಿಗೆ ತೀವ್ರ ನಿರಾಸೆ ತಂದಿದೆ. 2023 ರ ಮೇ ವೇಳೆಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದರೊಳಗೆ ಹಲವು ಶಾಸಕರು ಸಚಿವರಾಗಿ ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಕೊಂಡೊಯ್ದು, ಮತದಾರರನ್ನು ಮುಂದಿನ ಚುನಾವಣೆಗೆ ಮನವೊಲಿಸಿಕೊಳ್ಳುವ ಲೆಕ್ಕಾಚಾರ ದಲ್ಲಿದ್ದರು.

ಆದರೆ ಈಗ ಮತ್ತೊಮ್ಮೆ ಅಧಿವೇಶನದ ಕಾರಣಕ್ಕೆ ಸಂಪುಟ ವಿಸ್ತರಣೆ ಮುಂದೂಡಲ್ಪಡ್ತಿರೋದು ಶಾಸಕರ ತೀವ್ರ ಅಸಮಧಾನಕ್ಕೆ‌ ಕಾರಣವಾಗ್ತಿದೆ. ಅಲ್ಲದೇ ಪಕ್ಷ ಕ್ಕಾಗಿ ದುಡಿದವರಿಗೆ ಸ್ಥಾನಮಾನ ನೀಡಲು ಪಕ್ಷ ಒಂದೊಂದೆ ಕಾರಣ ಹೇಳಿ ವಿಳಂಬ ಮಾಡ್ತಿದೆ ಎಂದು ಶಾಸಕರು ಆಪ್ತರ ಬಳಿ ನೋವು ಹೇಳಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿ (BJP ) ಸಚಿವ ಸಂಪುಟ ವಿಸ್ತರಣೆ ಗಣೇಶನ‌ಮದುವೆ ತರ ಮುಂದೇ ಮುಂದೇ ಹೋಗ್ತಿರೋದಂತು ಸತ್ಯ.

ಇದನ್ನೂ ಓದಿ : ಸಂಪುಟದ ಜೊತೆ ‌ಚುನಾವಣೆಯಿಂದಲೂ ಈಶ್ವರಪ್ಪ ಗೆ ಸಿಕ್ತಾ ಗೇಟ್ ಪಾಸ್

( BJP giving Big Shock to those who dream of minister )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular