Congress Party’s Bharat Jodo Yatra : ರಾಹುಲ್ ಗಾಂಧಿ ನೇತ್ರತ್ವದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಸದ್ಯ ಕರ್ನಾಟಕದಲ್ಲಿ ಈ ಯಾತ್ರೆ ಸಾಗುತ್ತಿದ್ದು ಆದ್ರೆ ಕಾಂಗ್ರೆಸ್ ನ ಈ ಜೋಡೋ ಯಾತ್ರೆಗೆ ಕಮಲ ಕಲಿಗಳು ಕೌಂಟರ್ ನೀಡುವುದಕ್ಕೆ ಮುಂದಾಗಿದ್ದಾರೆ. ನಾಳೆಯಿಂದ ಬಿಜೆಪಿಯಿಂದ ಜನ ಸಂಕಲ್ಪ ಯಾತ್ರೆ ಆರಂಭವಾಗಲಿದೆ. ಹಿಂದುಳಿದ ರಾಯಚೂರು ಜಿಲ್ಲೆಯಿಂದಲೇ ಈ ಜನ ಸಂಪರ್ಕ ಯಾತ್ರೆ ಶುರುವಾಗಲಿದೆ.
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರವಾದ ಗಿಲ್ಲೇಸೂಗೂರು ಗ್ರಾಮದಿಂದ ಈ ಯಾತ್ರೆ ಶುರುವಾಗಲಿದ್ದು ನಾಳೆಯಿಂದ ಡಿಸೆಂಬರ್ 25ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಜನ ಸಂಕಲ್ಪ ಯಾತ್ರೆ ನಡೆಯಲಿದೆ. ಮಿಷನ್ 150 ಟಾರ್ಗೇಟ್ ಇಟ್ಕೊಂಡು ಬಿಜೆಪಿ ನಾಯಕರು ಯಾತ್ರೆ ಆರಂಭಿಸಲು ಮುಂದಾಗಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದ್ದು ಯಾತ್ರೆಯ ಉದ್ದಕ್ಕೂ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ.
ರಾಯಚೂರಿನಲ್ಲಿ ನಡೆಯಲಿರುವ ಈ ಜನ ಸಂಕಲ್ಪ ಯಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಸೇರೋ ನಿರೀಕ್ಷೆಯಿದ್ದು ಸಚಿವರಾದ ಬಿ ಶ್ರೀ ರಾಮುಲು, ಗೋವಿಂದ ಕಾರಜೋಳ ಸೇರಿದಂತೆ ಹತ್ತಾರು ಸಚಿವರು, ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಎಸ್ಸಿ, ಎಸ್ಟಿ ಸಮುದಾಯದಿಂದ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.
ಇನ್ನು ವಿಜಯನಗರ ಜಿಲ್ಲೆಯಲ್ಲಿಯೂ ಅಕ್ಟೋಬರ್ 12 ರಂದು ಬಿ.ಜೆ.ಪಿಯ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ. ಹೀಗಾಗಿ ಯಾತ್ರೆಯ ಯಶಸ್ವಿಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ನೇತ್ರತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಇದೇ ಸಂದರ್ಭ ಮಾತನಾಡಿದ ಆನಂದ್ ಸಿಂಗ್ ವಿಜಯನಗರ ಜಿಲ್ಲೆ ರಚನೆಗೆ ಕಾರಣಿಭೂತರಾದ ಬಿಎಸ್. ಯಡಿಯೂರಪ್ಪ ಬರುತ್ತಾರೆ ಎಂದರು. ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದೆ. ನಮ್ಮ ಸರ್ಕಾರದ ಕಾರ್ಯಕ್ರಮ, ಜನಪರ ಯೋಜನೆಗಳನ್ನು ಜನರ ಮುಂದಿಡೋ ಕೆಲಸ ಮಾಡಬೇಕಿದೆ. ಜನರನ್ನು ಒಗ್ಗೂಡಿಸೋ ಕೆಲಸ ಆಗಬೇಕಿದೆ. ವಿಜಯ ಸಂಕಲ್ಪ ಯಾತ್ರೆ, ವಿಜಯೋತ್ಸವವಾಗಿ ಪರಿವರ್ತನೆಯಾಗಬೇಕಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ವಿಜಯನಗರದ ಭೂಮಿಯ ಪ್ರಭಾವ ಹಾಗೆ, ಏನೂ ಮಾಡಿದ್ರೂ ಅದು ಸಕ್ಸಸ್ ಆಗುತ್ತದೆ ಎಂದ ಆನಂದ್ ಸಿಂಗ್ ಈ ಭೂಮಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಘಟನೆ ಇರೋ ಏಕೈಕ ಪಕ್ಷ ಅದು ಬಿಜೆಪಿ. ಕಾರ್ಯಕರ್ತರು ಇಲ್ಲದೇ ಇದ್ರೆ ನಾಯಕರು ಇಲ್ಲಾ. ಸಂಘಟನೆ ಮೂಲಕ ಹುಟ್ಟಿದ ಪಕ್ಷ ನೂರಾರು ವರ್ಷಗಳ ಕಾಲ ಇರ್ತದೆ. ಕಾಂಗ್ರೆಸ್ ಇಂದು ನೆಲಕಚ್ಚೋ ಸ್ಥಿತಿ ಇದೆ, ಪಕ್ಷ ಸಂಘಟನೆ ಇಲ್ಲದೇ ಇರೋ ಪಕ್ಷ ಕಾಂಗ್ರೆಸ್ ಪಕ್ಷ. ಅತೀ ಆತ್ಮ ವಿಶ್ವಾಸದ ಪಕ್ಷ ಅದು ಕಾಂಗ್ರೆಸ್ ಪಕ್ಷ ಎಂದು ಆನಂದ್ ಸಿಂಗ್ ಹೇಳಿದರು.
ವಿಜಯನಗರ ಜಿಲ್ಲೆಯಾದ ಬಳಿಕ ಒಂದು ವರ್ಷದ ನಂತರ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಬರ್ತಿದ್ದಾರೆ. ವಿಜಯನಗರದಲ್ಲಿ ಏನೇ ಕಾರ್ಯಕ್ರಮವಾದ್ರೂ, ಅದು ಎರಡು ಮೂರು ಜಿಲ್ಲೆ ತಿರುಗಿ ನೋಡುವಂತಿರಬೇಕು. ಅಹಂ ಬಿಟ್ಟು ಕೆಲಸ ಮಾಡೋಣ, ಯಶಸ್ವಿಗೊಳಿಸೋಣ ಎಂದು ಸಚಿವ ಆನಂದ್ ಸಿಂಗ್ ಕರೆ ನೀಡಿದರು.
ಇದನ್ನು ಓದಿ : Kodachadri to Kollura Ropeway : ಕೊಡಚಾದ್ರಿಯಿಂದ ಕೊಲ್ಲೂರ ರೋಪ್ ವೇ : ಕಾಮಗಾರಿಗೆ ಟೆಂಡರ್ ಕರೆದ ಸರ್ಕಾರ, ಪರಿಸರವಾದಿಗಳ ಆಕ್ಷೇಪ
BJP leaders mocked Congress Party’s Bharat Jodo Yatra