ಬೆಂಗಳೂರು : ಜಾರಕಿಹೊಳಿ 9 lakhan jarkiholi ) ಬ್ರದರ್ಸ್ ಪರಿಷತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದು, ರಮೇಶ್ ಜಾರಕಿಹೊಳಿ ತಮಗೆ ಸಚಿವ ಸ್ಥಾನ ನೀಡದ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ವಿರುದ್ಧದ ಶಿಸ್ತು ಕ್ರಮವನ್ನು ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ( Ramesh Jarkiholi master plan) ಮಾಡಿದ್ದಾರೆ.
ಹೌದು, ಸದ್ಯ ಬಿಜೆಪಿ ಶಿಸ್ತುಕಮಿಟಿ ಸದ್ಯ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿಯತ್ತ ಕೆಂಗಣ್ಣು ಬೀರಲು ಸಿದ್ಧವಾಗಿದೆ. ಆದರೆ ಪರಿಷತ್ ಚುನಾವಣೆಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡಿ ಸಹೋದರನನ್ನು ಗೆಲ್ಲಿಸಿಕೊಂಡು ಬಿಜೆಪಿಯನ್ನೇ ಹಳ್ಳಕ್ಕೆ ಕೆಡವಿದ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಶಿಸ್ತು ಕ್ರಮವನ್ನು ತಪ್ಪಿಸಿಕೊಳ್ಳಲು ಪ್ಲ್ಯಾನ್ ಜೊತೆ ಸಿದ್ಧವಾಗಿದ್ದಾರೆ.
ಸದ್ಯ ಬಿಜೆಪಿ 11 ಸ್ಥಾನವನ್ನು ಗೆದ್ದಿದೆ. ವಿಧಾನ ಪರಿಷತ್ ನಲ್ಲಿ ಬಹುಮತವನ್ನು ಪಡೆಯಲು ಬಿಜೆಪಿಗೆ ಒಟ್ಟು 35 ಸ್ಥಾನಗಳ ಅಗತ್ಯವಿದೆ. ಆದರೆ ಸದ್ಯ ಗೆದ್ದಿರುವ ಸ್ಥಾನಗಳ ನೆರವಿನಿಂದ ಬಿಜೆಪಿ ಒಟ್ಟು ಸಂಖ್ಯೆ 37ಕ್ಕೇ ಏರಿದೆ. ಆದರೆ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಎದುರಾಗುತ್ತದೆ. ಇದನ್ನೇ ಬಂಡವಾಳಮಾಡಿಕೊಳ್ಳಲು ಸಿದ್ಧವಾಗಿರುವ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಪಕ್ಷದ ಹೈಕಮಾಂಡ್ ಮನವೊಲಿಸಿ ಪಕ್ಷೇತರವಾಗಿ ಗೆದ್ದಿರುವ ಲಖನ್ ಜಾರಕಿಹೊಳಿಯನ್ನು ಬಿಜೆಪಿಗೆ ಸೇರಿಸುವ ಸಿದ್ಧತೆಯಲ್ಲಿದ್ದಾರೆ.
ಸದ್ಯ ಬಿಜೆಪಿಗೆ ಒಂದು ಸ್ಥಾನವೂ ಮುಖ್ಯವಾಗಿರೋದರಿಂದ ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಹೀಗಾದಲ್ಲಿ ರಮೇಶ್ ಹಾಗೂ ಬಾಲಚಂದ್ರ ಶಿಸ್ತು ಕ್ರಮದಿಂದ ಬಚಾವಾಗಲಿದ್ದು ಇದರ ಜೊತೆಗೆ ಲಖನ್ ಗೂ ರಾಷ್ಟ್ರಿಯ ಪಕ್ಷವೊಂದರ ಆಶ್ರಯ ಸಿಕ್ಕಂತಾಗಲಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಈಗ ತಮ್ಮ ಮೇಲೆ ಮುನಿಸಿಕೊಂಡಿರುವ ಸಿಎಂ ಬೊಮ್ಮಾಯಿ ಸೇರಿದಂತೆ ಎಲ್ಲರನ್ನೂ ಮನವೊಲಿಸುವ ಪ್ರಯತ್ನ ಆರಂಭಿಸಿದ್ದಾರಂತೆ.
ಬಿಜೆಪಿಗೂ ಕೂಡ ಜಾರಕಿಹೊಳಿ ಬ್ರದರ್ಸ್ ಅನಿವಾರ್ಯ. ಪರಿಷತ್ ನಲ್ಲಿ ಬಹುಮತ ಪಡೆಯಲು ಬಿಜೆಪಿಗೆ ಈಗ ಪಕ್ಷೇತರರ ಅಗತ್ಯವಿದೆ. ಇಲ್ಲವೇ ಬಿಜೆಲು ಜೆಡಿಎಸ್ ಜೊತೆ ಕೈಜೋಡಿಸಬೇಕು. ಹೀಗಾಗಿ ಅನಾಯಾಸವಾಗಿ ಪಕ್ಷದ ಹೊಸ್ತಿಲಲ್ಲಿ ನಿಂತಿರುವ ಲಖನ್ ಜಾರಕಿಹೊಳಿಯನ್ನು ಕಳೆದುಕೊಳ್ಳಲು ಬಿಜೆಪಿಯೂ ಸಿದ್ಧವಿಲ್ಲ. ಇದನ್ನೆಲ್ಲ ಯೋಚನೆ ಮಾಡಿಯೇ ರಮೇಶ್ ಜಾರಕಿಹೊಳಿ ಬಂಡಾಯ ಎದ್ದು ಪಕ್ಷೇತರನಾಗಿ ನಿಂತ ಸಹೋದರನನ್ನು ಬೆಂಬಲಿಸಿದ್ದಾರೆ ಎಂಬ ಮಾತು ಈಗ ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಒಟ್ಟಿನಲ್ಲಿ ಬೆಳಗಾವಿಯಲ್ಲಿ ತಮ್ಮದೇ ಆಟ ನಡೆಸಿರುವ ಜಾರಕಿಹೊಳಿ ಬ್ರದರ್ಸ್ ಬಿಜೆಪಿಯನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ತಿರೋದಂತು ಸತ್ಯ.
ಇದನ್ನೂ ಓದಿ : mangli Sister Indravati : ಪುಷ್ಪ ಸಿನಿಮಾಕ್ಕೆ ಬಂದ್ರು ಮಂಗ್ಲಿ ಸಹೋದರಿ: ಸಮಂತಾ ಡ್ಯಾನ್ಸ್ ಗೆ ಇಂದ್ರಾವತಿ ಚೌಹ್ಹಾಣ ಧ್ವನಿ
( bjp need lakhan jarkiholi ramesh jarkiholi will master plan )