ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಗೂ ಮುನ್ನವೇ ಒಡೆದು ಹೋಳಾಗಿದ್ದ ಕಾಂಗ್ರೆಸ್ ನಲ್ಲಿ ಮತ್ತೆ ಒಗ್ಗಟ್ಟಿನ ಮಂತ್ರ ಜಪ ಆರಂಭವಾಗಿದೆ. ರಾಹುಲ್ ಗಾಂಧಿ ಸಂಧಾನ ಸಭೆ ಬಳಿಕ ಎರಡು ಧ್ರುವಗಳಂತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಒಂದಾಗಿದ್ದಾರೆ. ಮಾತ್ರವಲ್ಲ ಸಿದ್ದರಾಮಯ್ಯ ಮನೆಯಲ್ಲಿ ಉಪಾಹಾರ ಕೂಟದಲ್ಲೂ (Breakfast Politics) ಡಿಕೆಶಿ ಭಾಗಿಯಾಗಿದ್ದಾರೆ.
ಹೌದು ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದ್ದು ಎಲ್ಲರಿಗೂ ಗೊತ್ತು. ಒಮ್ಮೆ ಸಿಎಂ ಆಗಬೇಕೆಂಬ ಕಾರಣಕ್ಕೆ ಡಿಕೆಶಿ ಸರ್ಕಸ್ ನಡೆಸಿದ್ದರೇ, ಮಾಜಿಸಿಎಂ ಸಿದ್ಧು ಪಕ್ಷ ಅಧಿಕಾರಕ್ಕೆ ಬಂದ್ರೇ ಮತ್ತೊಮ್ಮೆ ಸಿಎಂ ಸ್ಥಾನಕ್ಕೆ ಏರಲು ಸಜ್ಜಾಗಿದ್ದರು. ಈ ಇಬ್ಬರೂ ನಾಯಕರು ಒಂದೇ ವೇದಿಕೆಯಲ್ಲಿದ್ದರೂ ಎರಡು ಧ್ರುವಗಳಂತೆ ಕುಳಿತಿರುತ್ತಿದ್ದರು. ಅಲ್ಲಲ್ಲಿ ಡಿಕೆಶಿ ಬೆಂಬಲಿಗರು ನಮ್ಮಣ್ಣನೇ ಸಿಎಂ ಎನ್ನುತ್ತಿದ್ದರೇ, ಸಿದ್ಧರಾಮಯ್ಯನವರು ಹೋದಲ್ಲಿ ಬಂದಲ್ಲಿ ಸಿದ್ಧು ಮುಂದಿನ ಸಿಎಂ ಎಂಬ ಘೋಷಣೆ ಕೇಳುತ್ತಿತ್ತು. ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಿದ್ಧು ಬಂದ್ರೇ ನಮ್ಮ ಕ್ಷೇತ್ರ ಬಿಟ್ಟುಕೊಡುತ್ತೇವೆ, ನಮ್ಮ ಕ್ಷೇತ್ರ ಬಿಟ್ಟು ಕೊಡುತ್ತೇವೆ ಎಂದು ಹೇಳುತ್ತಲೇ ಇದ್ದರು.
ಈ ಎಲ್ಲ ಬೆಳವಣಿಗೆ ನೋಡಿದ ರಾಜಕೀಯ ನಾಯಕರು ಕಾಂಗ್ರೆಸ್ ಚುನಾವಣೆಯಲ್ಲಿ ಸೋಲೋಕೆ ಬೇರೆನೂ ಬೇಡ ಕೈ ನಾಯಕರ ಒಳಜಗಳವೇ ಸಾಕು ಎಂದು ಮಾತನಾಡಿ ಕೊಳ್ಳುತ್ತಿದ್ದರು.ಇದನ್ನೆಲ್ಲ ಗಮನಿಸಿದ ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಸಿದ್ಧು ಹಾಗೂ ಡಿಕೆಶಿಗೆ ಬುಲಾವ್ ನೀಡಿದ್ದು, ದೆಹಲಿಯಲ್ಲಿ ಸಿದ್ಧರಾಮಯ್ಯ ಹಾಗೂ ಡಿಕೆಶಿ ನಡುವೆ ಬಹುದೊಡ್ಡ ಸಂಧಾನ ಸಭೆಯನ್ನೇ ನಡೆಸಿದ್ದರು. ಮಾತ್ರವಲ್ಲ ಮತ್ತೆ ಮತ್ತೆ ಸಿಎಂ ಸ್ಥಾನಕ್ಕೆ ಯಾರು ಎಂಬ ಚರ್ಚೆ ಬೇಡ. ಮೊದಲು ಪಕ್ಷ ಅಧಿಕಾರಕ್ಕೆ ತನ್ನಿ ಉಳಿದದ್ದನ್ನು ಆಮೇಲೆ ನೋಡೋಣ ಎಂದು ಖಡಕ್ ಕಿವಿಮಾತು ಹೇಳಿದ್ದರಂತೆ

ಹೀಗಾಗಿ ಈ ಎಲ್ಲ ಬೆಳವಣಿಗೆ ಬಳಿಕ ಸಿದ್ಧು ಹಾಗೂ ಡಿಕೆಶಿ ಪರಸ್ಪರ ಅಸಮಧಾನ ಹಾಗೂ ಮುನಿಸು ಮರೆತಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶುಕ್ರವಾರ ಮಾಜಿಸಿಎಂ ಸಿದ್ಧರಾಮಯ್ಯ ಡಿಕೆಶಿ ತಮ್ಮ ನಿವಾಸಕ್ಕೆ ಉಪಹಾರಕ್ಕೆ ಆಹ್ವಾನಿಸಿದ್ದರು. ಸಿದ್ಧು ಕೂಡ ಉಪಾಹಾರ ಸೇವಿಸಿದ್ದು, ಬಳಿಕ ಇಬ್ಬರೂ ನಾಯಕರು ಸುಧೀರ್ಘ ಚರ್ಚೆ ನಡೆಸಿದ್ದಾರೆ.
ಭೇಟಿ ಬಳಿಕ ಮಾತನಾಡಿದ ಡಿಕೆಶಿ, ಸಿದ್ಧರಾಮಯ್ಯನವರು ತಮ್ಮ ನಿವಾಸಕ್ಕೆ ತಿಂಡಿ ಗೆ ಆಹ್ವಾನಿಸಿದ್ದರು. ಹೀಗಾಗಿ ನಾನು ಆಗಮಿಸಿದ್ದೇನೆ. ಇಬ್ಬರೂ ಬಿಜೆಪಿಯ ಕೆಟ್ಟ ಆಡಳಿತ ಸೇರಿದಂತೆ ಹಲವು ಸಮಸ್ಯೆಗಳಿಂದ ಜನರು ಸಂಕಷ್ಟಕ್ಕೊಳಗಾಗಿರುವ ಕುರಿತು ಚರ್ಚೆ ನಡೆಸಿದ್ದೇವೆ ಎಂದಿದ್ದಾರೆ. ಆದರೆ ಒಳಗೆ ಏನೇ ಚರ್ಚೆ ನಡೆದಿರಲಿ, ಸಿದ್ಧು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿರೋದು ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಸಮಾಧಾನ ತಂದಿದ್ದು ಹಿಂಗಾದ್ರೂ ಸಧ್ಯ ಒಂದಾದ್ರಲ್ಲಾ ಎಂದು ಸಮಾಧಾನ ಪಡ್ತಿದ್ದಾರೆ.
ಇದನ್ನೂ ಓದಿ : ಎಚ್ಚರ ! ಲಗೇಜ್ ನಿಯಮ ಮರೆತರೆ ಹೊರಬೇಕಾದೀತು ‘ದಂಡದ ಹೊರೆ’!!
ಇದನ್ನೂ ಓದಿ : ನದಿಯಲ್ಲಿ ಕೊಚ್ಚಿಕೊಂಡು ಹೋದ ಕಾರು :9 ಮಂದಿ ದುರ್ಮರಣ
Breakfast Politics : Siddaramaiah visited DK Sivakumar House