ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು (Karnataka Assembly Election) ಗೆದ್ದು, ಲೋಕಸಭೆ ಚುನಾವಣೆಯನ್ನು ಗೆದ್ದುಕೊಟ್ಟು ನಿಧಾನಕ್ಕೆ ಸಿಎಂ ಸ್ಥಾನಕ್ಕೆ ಏರಬೇಕೆಂಬ ಕನಸಿನಲ್ಲಿರೋ ಡಿಸಿಎಂ ಡಿಕೆಶಿಗೆ ಹೈಕೋರ್ಟ್ ಶಾಕ್ ನೀಡಿದೆ. ಡಿಕೆಶಿ ವಿರುದ್ಧ ಅರ್ಧಕ್ಕೆ ನಿಂತ ಸಿಬಿಐ ತನಿಖೆಯನ್ನು ಪೂರ್ತಿಗೊಳಿಸಲು ನ್ಯಾಯಾಲಯ ಅನುಮತಿ ನೀಡಿದೆ. ಆ ಮೂಲಕ ಮತ್ತೊಮ್ಮೆ ಡಿ.ಕೆ.ಶಿವಕುಮಾರ್ (DK Shivakumar) ಮತ್ತೊಮ್ಮೆ ತನಿಖೆ ಹಾಗೂ ಶಿಕ್ಷೆಯ ತೂಗುಕತ್ತಿಯ ಕೆಳಗೆ ನಿಲ್ಲುವಂತಾಗಿದೆ.
ಅಂದಾಜು 200 ಕೋಟಿ ಅಕ್ರಮ ಆದಾಯ ಗಳಿಕೆ ಆರೋಪ ಡಿ.ಕೆ.ಶಿವಕುಮಾರ್ ಮೇಲೆ ಕೇಳಿಬಂದಿತ್ತು. ಡಿಕೆಶಿ ಗಳಿಸಿರುವ ಅಪಾರ ಪ್ರಮಾಣದ ಆಸ್ತಿಗೆ ಸೂಕ್ತ ಆದಾಯದ ಮೂಲಗಳಿಲ್ಲ ಎಂದು ಆರೋಪಿಸಲಾಗಿತ್ತು. 2020 ಮಾರ್ಚ್ ನಲ್ಲಿ ಪ್ರಕರಣದ ಪ್ರಾಥಮಿಕ ತನಿಖೆ ಆರಂಭಿಸಲಾಗಿತ್ತು.

ಐಟಿ ಕಾಯ್ದೆ ಅಡಿ ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. 2013 ರಿಂದ 2018 ರವರೆಗೆ ಡಿಕೆಶಿ ಆದಾಯದಲ್ಲಿ 43% ದಷ್ಟು ಅದಾಯ ವೃದ್ಧಿಯಾಗಿದೆ ಎಂದು ಆರೋಪಿಸಲಾಗಿತ್ತು. ಆದರೆ ಈ ಪ್ರಕರಣದ ಎಫ್ ಆಯ್ ಆರ್ ನಲ್ಲೇ ಲೋಪವಿದೆ.ನನ್ನ ವಿರುದ್ಧದ ತನಿಖೆಗೆ ತಡೆ ನೀಡಬೇಕೆಂದು ಡಿಕೆಶಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆಗೆ ಮಧ್ಯಂತರ ತಡೆ ನೀಡಿತ್ತು.
ಹೈಕೋರ್ಟ್ ನ (High Court) ಆದೇಶದಿಂದ ಈಗ 2023 ರ ಫೆಬ್ರವರಿಯಿಂದ ಸ್ಥಗಿತಗೊಂಡಿದ್ದ ತನಿಖೆ ಮುಂದುವರೆಯಲಿದೆ. ಫೆಬ್ರವರಿ 10 ರಂದು ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದ್ದ ಹೈಕೋರ್ಟ್ ಆದೇಶಕ್ಕೆ ಈಗ ಮತ್ತೆ ತಡೆ ಬಿದ್ದಿದ್ದು ತನಿಖೆಗೆ ಗ್ರೀನ್ ಸಿಗ್ನಲ್ ಸಿಕ್ಕಿರೋದರಿಂದ ತನಿಖೆ ತೀವ್ರಗೊಳ್ಳಲಿದೆ.
ತನಿಖೆಯನ್ನು ತ್ವರಿತವಾಗಿ ಮುಗಿಸುವಂತೆ ಹೈಕೋರ್ಟ್ ಸೂಚಿಸಿರೋದರಿಂದ ಸದ್ಯದಲ್ಲೇ ಸಿಬಿಐ ಡಿಕೆಶಿ ಹಾಗೂ ಕುಟುಂಬಸ್ಥರಿಗೆ ತನಿಖೆಗೆ ಕರೆಯಲಿದೆ ಎನ್ನಲಾಗ್ತಿದೆ.
ನೊಟೀಸ್ ಕೊಟ್ಟು ವಿಚಾರಣೆಗೆ ಹಾಜರಾಗಲು ಸೂಚಿಸಲಿರೋ ಸಿಬಿಐ ಅಕ್ರಮ ಆಸ್ತಿ ಮೂಲದಬಗ್ಗೆ ಕೂಲಂಕುಶ ತನಿಖೆ ನಡೆಸಲಿದೆ.
ಸದ್ಯ ಹೈಕೋರ್ಟ್ ಗಡುವಿನಂತೆ ಮೂರು ತಿಂಗಳಲ್ಲಿ ತನಿಖೆ ಮುಗಿಸಬೇಕಾಗಿರೋದರಿಂದ ಡಿಕೆಶಿ ಕುಟುಂಬಕ್ಕೆ ಇನ್ನೂ ತನಿಖೆ ಬಿಸಿ ತಟ್ಟಲಿದೆ. ತನಿಖೆ ಮುಕ್ತಾಯಗೊಳಿಸಿ ಚಾರ್ಜ್ ಶೀಟ್ ಸಲ್ಲಿಕೆಯಾದಲ್ಲಿ, ಡಿಕೆಶಿ ವಿರುದ್ಧ ಮತ್ತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಡಿಕೆಶಿ ಪ್ರಕರಣದಲ್ಲಿ 74.93 ಕೋಟಿ ಅಕ್ರಮ ಆಸ್ತಿ ಅಂತ ಸಿಬಿಐ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಈಗಾಗಲೇ ಡಿಕೆಶಿ ತಾಯಿ ಸೇರಿದಂತೆ ಹಲವು ಕುಟುಂಬಸ್ಥರನ್ನು ಸಿಬಿಐ ವಿಚಾರಣೆ ಮಾಡಿದೆ. ಡಿಕೆಶಿ ವಿರುದ್ಧ ತನಿಖೆಗೆ ಆದೇಶ ಸಿಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಈ ಆದೇಶ ತೀವ್ರ ಚರ್ಚೆಗೆ ಗುರಿಯಾಗಿದೆ. ಈಗಾಗಲೇ ಡಿಕೆಶಿ ಹಲವಾರು ಭಾರಿ ವಿನಾಕಾರಣ ನನ್ನ ಆಸ್ತಿಯನ್ನು ಗಮನದಲ್ಲಿಟ್ಟುಕೊಂಡು ನನಗೆ ನನ್ನ ಕುಟುಂಬಕ್ಕೆ ಹಿಂಸೆ ನೀಡುತ್ತಿದ್ದಾರೆ.
ನನ್ನ ಕುಟುಂಬದ ಉದ್ಯಮ ಹಾಗೂ ಕೃಷಿಯಿಂದ ನನ್ನ ಆದಾಯ ಬಂದಿದೆ. ಎಲ್ಲ ಆದಾಯಕ್ಕೂ ಮೂಲವಿದೆ ಎಂದು ವಾದಿಸುತ್ತಲೇ ಬಂದಿದ್ದಾರೆ. ಆದರೂ ಆರಂಭವಾಗಿರುವ ಸಿಬಿಐ ತನಿಖೆಯಿಂದ ಡಿಕೆಶಿ ಮತ್ತೆ ಜೈಲು ಸೇರುತ್ತಾರಾ ಎಂಬ ಚರ್ಚೆ ಆರಂಭವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ತನಿಖೆಗೆ ಮಧ್ಯಂತರ ತಡೆ ಸಿಕ್ಕಿತ್ತು. ಆದರೆ ಈಗ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಮತ್ತೆ ತನಿಖೆಗೆ ಮರುಚಾಲನೆ ಸಿಕ್ಕಿರೋದು ಎಲ್ಲೋ ಒಂದು ಕಡೆ ಕಾಂಗ್ರೆಸ್ ಗೆ ಮುಜುಗರ ತಂದಿದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಿಂದ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಹೈಕಮಾಂಡ್ ಮುಂದಿಟ್ಟು ಸಿಎಂ ಸ್ಥಾನಕೇಳಬೇಕೆಂದಿದ್ದ ಡಿಕೆಶಿಗೂ ಈ ತೀರ್ಪು ನಿರಾಸೆ ತಂದಿದ್ದು, ಡಿಕೆಶಿ ಸಿಎಂ ಸ್ಥಾನದ ಕನಸು ಕನಸಾಗಿಯೇ ಉಳಿಯುತ್ತಾ ಅನ್ನೋ ಆತಂಕ ತಂದಿರೋದಂತು ಸುಳ್ಳಲ್ಲ.