ಬೆಂಗಳೂರು : ಯಡಿಯೂರಪ್ಪ ಓರ್ವ ಪ್ರಸಿದ್ದ ನಾಯಕ. ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಮುಖ್ಯಮಂತ್ರಿಯಾಗಿ, ವಿಪಕ್ಷ ನಾಯಕರಾಗಿ, ಉಪಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರು ಸೇವೆ ಸಲ್ಲಿಸಿದ್ದಾರೆ ಎನ್ನುವ ಮೂಲಕ ಸಿ.ಟಿ.ರವಿ ಯಡಿಯೂರಪ್ಪ ಅವರ ಕಾಲೆಳೆದಿದ್ದಾರೆ.

ಗೋವಾದಲ್ಲಿ ಮಾತನಾಡಿದ್ದ ಸಿ.ಟಿ.ರವಿ ಬಿಜೆಪಿ ಪಕ್ಷ ಸಾಮಾನ್ಯ ಕಾರ್ಯಕರ್ತನನ್ನೂ ಕೂಡ ಉನ್ನತ ಹುದ್ದೆಗೆ ಏರಿಸುವ ತಾಕತ್ತು ಇದೆ. ಯಡಿಯೂರಪ್ಪ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಸಿದ್ದಾರೆ. ಇಂತಹ ಅವಕಾಶವನ್ನು ಕಾಂಗ್ರೆಸ್, ಕಮ್ಯೂನಿಸ್ಟ್ ಹಾಗೂ ಜನತಾ ಪರಿಹಾರ ಕೂಡ ತನ್ನ ನಾಯಕರಿಗೆ ಕೊಟ್ಟಿಲ್ಲ. ಯಡಿಯೂರಪ್ಪ ಇಂತಹ ಸ್ಥಾನಕ್ಕೇರಲು ಪ್ರತೀ ಕಾರ್ಯಕರ್ತರ ಶ್ರಮ ಅಡಗಿದೆ ಎಂದಿದ್ದಾರೆ.
ಇದನ್ನೂ ಓದಿ : ಯಡಿಯೂರಪ್ಪ ರಾಜೀನಾಮೆ ಕೊಡ್ತಾರಾ..? ಸಿಎಂ ಹುದ್ದೆಯಲ್ಲಿಯೇ ಉಳಿತಾರಾ..? ಇಂದೇ ಬರುತ್ತಾ ಹೈಕಮಾಂಡ್ ಸಂದೇಶ…!!

ಸಿಎಂ ಯಡಿಯೂರಪ್ಪ ಕುರಿತು ಸಿ.ಟಿ.ರವಿ ಗೂಡಾರ್ಥದಲ್ಲಿ ಹೇಳಿಕೆಯನ್ನು ಕೊಟ್ಟಿದ್ದರು. ಎಲ್ಲೋ ಒಂದು ಕಡೆ ಯಡಿಯೂರಪ್ಪ ಎಲ್ಲವನ್ನೂ ಪಕ್ಷದಿಂದ ಪಡೆದು ಕೊಂಡಿದ್ದಾರೆ ಎನ್ನುವ ಅರ್ಥದಲ್ಲಿ ಮಾರ್ಮಿಕವಾಗಿ ಹೇಳಿಕೆ ನೀಡಿದ್ದಾರೆ. ಸಿ.ಟಿ.ರವಿ ಹೇಳಿಕೆಯ ಬೆನ್ನಲ್ಲೇ ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ. ಹೌದು, ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ. ಸಿ.ಟಿ.ರವಿ ಅವರು ಹೇಳಿದಂತೆ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಅದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಜೆಪಿ ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : ಬೂಕನಕೆರೆ TO ವಿಧಾನಸೌಧ : ನಿಂಬೆಹಣ್ಣು ವ್ಯಾಪಾರಿ ಮಗ, ರೈಸ್ ಮಿಲ್ ರೈಟರ್ ಯಡಿಯೂರಪ್ಪ ಸಿಎಂ ಆಗಿದ್ದು ಹೇಗೆ ಗೊತ್ತಾ ?

ಪಕ್ಷದಲ್ಲಿ ಯಾರಿಗೂ ಸಿಗದೇ ಇರುವ ಅವಕಾಶವನ್ನು ನನಗೆ ಕೊಟ್ಟಿದೆ. ನನಗೂ ತೃಪ್ತಿಯಿದೆ, ನಾನು ಸಮಾಧಾನದಿಂದಲೇ ಇದ್ದೇನೆ. ನಾನು ಸೇರಿದಂತೆ ಯಾರಿಗೂ ಕೂಡ ಹೈಕಮಾಂಡ್ ಹೇಳಿದ ಮಾತನ್ನು ನೂರಕ್ಕೆ ನೂರು ಮೀರುವುದರಿಲ್ಲ ಎಂದಿದ್ದಾರೆ.