ಮಂಗಳೂರು : ಒಂದು ಕಾಲದಲ್ಲಿ ಕರಾವಳಿ ಭಾಗದಲ್ಲಿ ವಿಧಾನಸಭೆ, ಲೋಕಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಯಲ್ಲಿ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್ ಕಳೆದ ಕೆಲ ವರ್ಷಗಳಿಂದಲೂ ಸರ್ವ ರೀತಿಯಲ್ಲಿಯೂ ಮುಗ್ಗರಿಸಿದೆ. ಆದರೆ ಕಳೆದೆರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸಿಗರು ಪಡೆದ ಸ್ಥಾನಮಾನಗಳನ್ನು ನೋಡಿದರೆ ಅರ್ಹತೆ, ಸಾಧನೆಗಿಂತ ಶಿಫಾರಸು ಬಹುದೊಡ್ಡ ಪಾತ್ರವಹಿಸುತ್ತದೆ ಎಂಬುದನ್ನು ಸ್ವತಃ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸುತ್ತಾರೆ.ಇದಕ್ಕೆ ಪುಷ್ಟಿ ನೀಡುವಂತೆ 5 ಹುದ್ದೆಗಳ ಆಯ್ಕೆ ಹಲವಾರು ಪ್ರಶ್ನೆಗಳನ್ನು ಎತ್ತಿದೆ.

2018ರ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಕರಾವಳಿಯ ದಕ್ಷಿಣ ಕನ್ನಡದಲ್ಲಿ ಹೀನಾಯವಾಗಿ ಸೋತಿತ್ತು. ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳಲ್ಲಿ 15 ಸಾವಿರಕ್ಕಿಂತಲೂ ಅಧಿಕ ಮತಗಳಿಂದ ರಾಜ್ಯದಲ್ಲಿ ಎಲ್ಲಿಯೂ ಸೋತಿಲ್ಲ. ಅದರ ಜಿಲ್ಲೆಯಲ್ಲಿ ಹೀನಾಯ ಸೋಲು ಅನುಭವಿಸಿತು.

ಆಗ ಚುನಾವಣೆಯ ನೇತೃತ್ವ ವಹಿಸಿದವರು ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್. ಹೀನಾಯ ಸೋಲಿಗೆ ಹರೀಶ್ ಕುಮಾರ್ ಅವರಿಗೆ ಎಂಎಲ್ಸಿ ರೂಪದಲ್ಲಿ ಭರ್ಜರಿ ಗಿಫ್ಟ್ ಬಂದಿತು !

ಮಾಜಿ ಮೇಯರ್ ಕವಿತಾ ಸನಿಲ್ ಎಐಸಿಸಿ ಸದಸ್ಯರಾಗಿದ್ದವರು. ಆದರೆ ಎಐಸಿಸಿ ಸದಸ್ಯರಿಗೆ ತಮ್ಮ ಕಾರ್ಪೊರೇಷನ್ ವಾರ್ಡಿನಲ್ಲಿ ಅಭ್ಯರ್ಥಿ ಗೆಲ್ಲಿಸ ಲಾಗಲಿಲ್ಲ. ಅವರ ವಾರ್ಡಿನ ಅವರ ಅಭ್ಯರ್ಥಿ ಎಂಸಿಸಿ ಚುನಾವಣೆಯಲ್ಲಿ ಅತಿ ಹೆಚ್ಚು ಅಂತರದಲ್ಲಿ ಸೋತರು!

ಯಾವುದೇ ಚುನಾವಣೆಗೆ ಸ್ಪರ್ಧಿಸದ ಮಿಥುನ್ ರೈ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿತು. 2 ಲಕ್ಷ 70,000 ಅಧಿಕ ಮತಗಳಿಂದ ಹೀನಾಯವಾಗಿ ಸೋತರು. ಇದಕ್ಕೆ ಮೋದಿ ಅಲೆ ಎಂದು ಹೇಳಲಾಯಿತು. ನಂತರ ಬಂದ ಎಂಸಿಸಿ ಚುನಾವಣೆ ತನ್ನ ಸ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಇದ್ದರೂ, ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿತು ಹಾಗೂ ಕನಿಷ್ಟಪಕ್ಷ ವಾರ್ಡಿನ ಕಾರ್ಪೋರೇಟರ್ ಅಭ್ಯರ್ಥಿಯನ್ನು ಗೆಲ್ಲಿಸಲು ಮಿಥುನ್ ರೈಗೆ ಸಾಧ್ಯವಾಗಿರಲಿಲ್ಲ.

ಕಳೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ಉಸ್ತುವಾರಿ ವಹಿಸಿದ್ದು ಆಗಿನ ರಾಷ್ಟ್ರೀಯ ಮಹಿಳಾ ಸಾಮಾಜಿಕ ಜಾಲತಾಣದ ಸಂಯೋಜಕಿ ಹಾಗೂ ಕೆಪಿಸಿಸಿ ವಕ್ತಾರೆ ಲಾವಣ್ಯ ಬಳ್ಳಾಳ್.

ಕಾಂಗ್ರೆಸ್ ತನ್ನ ಇತಿಹಾಸದಲ್ಲಿ ಎಂಸಿಸಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿತು. ಕೆಲವೇ ತಿಂಗಳಿನಲ್ಲಿ ಲಾವಣ್ಯ ಬಳ್ಳಾಳ್ ಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ರಾಷ್ಟ್ರೀಯ ಸಂಯೋಜಕಿ ಯಾಗಿ ನೇಮಿಸಲಾಯಿತು !

ರಾಜ್ಯ ಮಹಿಳಾ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಸಂಯೋಜಕಿ ಶರೀಲ್ ಲೋಯಾಲೋ ಈಗ ರಾಷ್ಟ್ರ ಮಹಿಳಾ ಕಾಂಗ್ರೆಸ್ಸಿನ ರಾಷ್ಟ್ರ ಸಂಯೋಜಕಿಯಾಗಿ ನೇಮಕವಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ಫೇಸ್ಬುಕ್ ಪೇಜ್ ಕೇವಲ 313 ಲೈಕ್ಸ್ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ನ ಫೇಸ್ಬುಕ್ ಪೇಜ್ 2 ವರ್ಷಗಳಲ್ಲಿ ಕೇವಲ 4000 ಲೈಕ್ ಹೊಂದಿ ಶೋಚನೀಯ ಸ್ಥಿತಿಯಲ್ಲಿ ಇದ್ದರು ಅವರಿಗೆ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ಸಿನ ಸಂಯೋಜಕಿ ಹುದ್ದೆ ದಯಪಾಲಿಸಲಾಗಿದೆ !

ಒಟ್ಟಾರೆ ದಕ್ಷಿಣಕನ್ನಡಜಿಲ್ಲೆ ಕಾಂಗ್ರೆಸ್ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಯಾವ ಅರ್ಹತೆ ,ಸಾಧನೆಯ ಮೇಲೆ ಈ ನೇಮಕಗಳು ವಾಗುತ್ತದೆ ಎಂದು ತಿಳಿಯದೆ ಗೊಂದಲದಲ್ಲಿದ್ದಾರೆ. ಸಿದ್ದರಾಮಯ್ಯ, ಕೆಸಿ ವೇಣುಗೋಪಾಲ್, ಬಿಕೆ ಹರಿಪ್ರಸಾದ್, ಡಿಕೆ ಶಿವಕುಮಾರ್ ರವರ ಶಿಫಾರಸು ಇದ್ದರೆ ಚುನಾವಣೆ ಗೆಲ್ಲದಿದ್ದರೂ, ಸಾಧನೆ ಮಾಡದಿದ್ದರೂ ಉನ್ನತ ಸ್ಥಾನಮಾನ ಪಡೆಯಬಹುದು ಎಂಬುದು ಕಾಂಗ್ರೆಸ್ನ ದುರಂತ ಎನ್ನುತ್ತಾರೆ ಜಿಲ್ಲೆಯ ಕಾರ್ಯಕರ್ತರು