ದಾವಣಗೆರೆ : ರಾಜ್ಯ ರಾಜಕೀಯದಲ್ಲಿ ಸದಾ ಸಕ್ರೀಯರಾಗಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೊರೊನಾ ಸೋಂಕಿನ ಭೀತಿಯ ನಡುವಲ್ಲೂ ತಮ್ಮ ಕಾರ್ಯವನ್ನು ಮರೆತಿಲ್ಲ. ಇಷ್ಟು ದಿನ ಮತ ಕ್ಷೇತ್ರದ ಜನರಿಗೆ ಕೊರೊನಾ ಜಾಗೃತಿ ಮೂಡಿಸುತ್ತಾ, ಅಭಿವೃದ್ದಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರೇಣುಕಾಚಾರ್ಯ ಅವರೀಗ ಕೊರೊನಾ ಸೋಂಕಿತರಿಗೆ ಹಾಗೂ ಕೊರೊನಾ ವಾರಿಯರ್ಸ್ ಗಳಿಗೆ ಹೋಳಿಗೆ ಊಟ ಬಡಿಸೋ ಮೂಲಕ ಸುದ್ದಿಯಾಗಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ.ರೇಣುಕಾಚಾರ್ಯ ಅವರು ಕೊರೊನಾ ಸೋಂಕು ಕಾಣಿಸಿಕೊಂಡ ನಂತರದಿಂದ ಹೆಚ್ಚಾಗಿ ಸ್ವಕ್ಷೇತ್ರದಲ್ಲಿಯೇ ಉಳಿದುಕೊಂಡು ಜನರ ಸೇವೆ ಮಾಡುತ್ತಿದ್ದಾರೆ.

ಇದೀಗ ತಮ್ಮ ಕುಟುಂಬ ಸದಸ್ಯರು ಹಾಗೂ ಆಪ್ತರೊಂದಿಗೆ ದಾವಣಗೆರೆಯ ಮಾದನಬಾವಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ಕೊಟ್ಟು ಕೊರೊನಾ ಸೋಂಕಿತ ಆರೋಗ್ಯ ವಿಚಾರಿದ್ದಾರೆ. ಅಲ್ಲದೇ ಸೋಂಕಿತರಿಗೆ ತಮ್ಮ ಕೈಯಾಟ ಹೋಳಿಗೆಯೂಟ ಬಡಿಸಿದ್ದಾರೆ. ನಂತರ ಕೋವಿಡ್ ಕೇರ್ ಸೆಂಟರ್ ನ ಸ್ಥಿತಿಗತಿಗಳನ್ನು ಅವಲೋಕಿಸಿದ್ದಾರೆ.

ಕೇವಲ ಕೊರೊನಾ ಸೋಂಕಿತರಿಗೆ ಮಾತ್ರವಲ್ಲ ಹೊನ್ನಾಳಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆಯಲ್ಲಿ ಕೊರೊನಾ ಪಾಸಿಟಿವ್ ಸೋಂಕಿತರಿಗೆ ಹಾಗೂ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಆಸ್ಪತ್ರೆಯ ಸಿಬ್ಬಂಧಿಗಳಿಗೆ ಹೋಳಿಗೆ ಊಟವನ್ನು ಬಡಿಸಿರುವುದು ಮಾತ್ರವಲ್ಲ ಅವರ ಜೊತೆಯಲ್ಲಿ ಕುಳಿತು ಊಟ ಮಾಡುವುದರ ಜೊತೆಗೆ ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಮಾಡಿದ್ದಾರೆ.

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಶಾಸಕ ಎಂ.ಪಿ.ರೇಣುಕಾಚಾರ್ಯರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.








