ಮಡಿಕೇರಿ: Dr Mantar Gowda : ಚುನಾವಣೆಯ ಸಂದರ್ಭವು ಸೇರಿ ಕಳೆದ ಒಂದು ವರ್ಷಗಳಿಂದ ಕೊಡಗಿನ ಕಾಫಿಯನ್ನು ಬ್ರಾಂಡ್ ಮಾಡಬೇಕು ಎಂಬ ಆಗ್ರಹವನ್ನು ಹಾಗೂ ಪ್ರತಿಪಾದನೆಯನ್ನು ಹಾಲಿ ಕೊಡಗಿನ ಶಾಸಕರಾದ ಡಾ. ಮಂತರ್ ಗೌಡ ಮಾಡುತ್ತಾ ಬಂದಿದ್ದರು. ಈ ಬಗ್ಗೆ ಟ್ವೀಟ್ ಹಾಗೂ ಬೇರೆ ಬೇರೆ ಸಂದರ್ಭದಲ್ಲಿ ಅವರು ಪ್ರತಿಪಾದಿಸಿದ ಕಾಫಿ ಬ್ರಾಂಡ್ ಪರಿಕಲ್ಪನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಬಜೆಟಿನಲ್ಲಿ ಅನುಷ್ಠಾನಿಸಲು ಪ್ರಥಮ ಹೆಜ್ಜೆಯನ್ನು ಇಟ್ಟಿದೆ.
ಡಾ. ಮಂತರ್ ಗೌಡ ಮನವಿ ಹಾಗೂ ಪ್ರತಿಪಾದನೆಯನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ ಸರ್ಕಾರ ಈ ಬಾರಿ ಕೊಡಗಿನ ಕಾಫಿಯನ್ನು ಸೇರಿದಂತೆ ಕರ್ನಾಟಕದ ಕಾಫಿಯನ್ನು ಬಹುದೊಡ್ಡ ಬ್ರಾಂಡ್ (brand) ಮಾಡಲು ಸಿದ್ದರಾಮಯ್ಯನವರ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆ ಮೂಲಕ ಡಾ. ಮಂತರ್ ಗೌಡ ಅವರ ಕಾಫಿಯನ್ನು ಬ್ರಾಂಡ್ ಮಾಡುವ ಬಹುದೊಡ್ಡ ಕನಸಿಗೆ ಮೊದಲ ಹೆಜ್ಜೆ ಇಟ್ಟಂತಾಗಿದೆ.
ಇದನ್ನೂ ಓದಿ : Karnataka Budget 2023 : ಮದ್ಯಪ್ರಿಯರಿಗೆ ಶಾಕ್, ದುಬಾರಿಯಾಗಲಿದೆ ಬಿಯರ್
ಇದನ್ನೂ ಓದಿ : CM Siddaramaiah : ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ದಾಖಲೆ : ರಾಜ್ಯದಲ್ಲಿ ಯಾರು ಎಷ್ಟು ಬಾರಿ ಬಜೆಟ್ ಮಂಡಿಸಿದ್ದಾರೆ ಗೊತ್ತಾ ?
Dr Mantar Gowda: Branding of coffee (coffee brand): Madikeri MLA Dr. The government gave in to Mantar Gowda’s demand