ಶಿವಮೊಗ್ಗ : ನಾನು ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಂಡಿಲ್ಲ. ನನ್ನ ವಿರುದ್ದ ಷಡ್ಯಂತ್ರ ನಡೆದರೂ ತಲೆ ಕೆಡಿಸಿಕೊಳ್ಳಲ್ಲ. ಅಧಿಕಾರ ಹೋದ್ರೆ ಗೂಟ ಹೋಯ್ತು ಅಂತ ಅಂದುಕೊಳ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಮೇಲೆ ನಂಬಿಕೆಯಿದೆ. ಆಡಿಯೋ ಬಗ್ಗೆ ಅಧ್ಯಕ್ಷರೇ ತನಿಖೆಯನ್ನು ನಡೆಸಲಿ. ಯಾರು ಆಡಿಯೋ ಸೃಷ್ಟಿ ಮಾಡಿದ್ದಾರೋ ಗೊತ್ತಿಲ್ಲ. ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರಬರಲಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಯಾರಿಗೂ ಹೇಳ್ಬೇಡಿ ಹೊಸ ಟೀಂ ಮಾಡ್ತೇವೆ : 3 ಜನರಲ್ಲಿ ಒಬ್ಬರು ಸಿಎಂ : ಕಟೀಲ್ ಆಡಿಯೋ ವೈರಲ್

ಇದನ್ನೂ ಓದಿ : ಮಗ ಕೇಂದ್ರದ ಕ್ಯಾಬಿನೆಟ್ ದರ್ಜೆ ಸಚಿವ…! ಹೆತ್ತವರು ಕೃಷಿಕೂಲಿ ಕಾರ್ಮಿಕರು…!!
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಆಪ್ತರ ಜೊತೆಗೆ ಮಾತನಾಡಿದ್ದಾರೆ ಎನ್ನಲಾಗುತ್ತಿ ರುವ ಆಡಿಯೋವೊಂದು ಬಾರೀ ಸದ್ದು ಮಾಡಿತ್ತು. ಆಡಿಯೋದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಟೀಮ್ ಅನ್ನು ತೆಗೆದು ಹೊಸ ಟೀಂ ಕಟ್ಟುತ್ತೇವೆ ಅಂತಾ ಆಡಿಯೋದಲ್ಲಿ ಹೇಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.