ಶಿವಮೊಗ್ಗ : Former minister KS Eshwarappa : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರವಾಗಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಾಂಗ್ರೆಸ್ನವರು ತಮ್ಮ ಪಕ್ಷ ಬದುಕಿದೆ ಎಂಬುದನ್ನು ತೋರಿಸಲು ಬೇಕಾದ್ದನ್ನು ಮಾಡಲಿ. ನಾವು ವಿರೋಧ ಪಕ್ಷದಲ್ಲಿದ್ದಾಗ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದೆವು. ಆದರೆ ಇವರು ಪಾಪ ಇನ್ನೂ ಮಲಗಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಈಗಲೂ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂದು ಬಡಿದಾಡಿಕೊಳ್ತಿದ್ದಾರೆ. ಚಿತ್ರದುರ್ಗದ ಜಾತಿ ಸಭೆಯಲ್ಲಿಯೂ ಅವರಿಬ್ಬರೂ ಬಡಿದಾಡಿಕೊಂಡಿದ್ದಾರೆ. ಅವರ ಸ್ವಾಮಿಗಳು ಇವರಿಬ್ಬರು ಒಂದಾಗಲಿ ಅಂತಾರೆ. ಆದರೆ ನನ್ನ ಬಿಟ್ಟರೆ ಮುಖ್ಯಮಂತ್ರಿ ಆಗೋರು ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ ಅಂತಾರೆ. ಅಧಿಕಾರದ ಆಸೆಗೆ ಈ ದೇಶ ತುಂಡಾಗಿದೆ ಎಂದು ಗುಡುಗಿದರು.
ಸಂಪೂರ್ಣ ಹಿಂದೂಸ್ತಾನ ಒಟ್ಟಾಗಿರಲಿ ಎಂದು ಅನೇಕ ಮಹಾಪುರುಷರು ಹೋರಾಟ ಮಾಡಿದ್ದರು. ಪಾಕಿಸ್ತಾನ, ಹಿಂದೂಸ್ತಾನ ಆಗಲು ಮತ್ಯಾರೂ ಕಾರಣರಲ್ಲ. ಅಂದಿನ ಕಾಂಗ್ರೆಸ್ನ ಕೆಲವರು ನಾಯಕರು ಮಾಡಿದ ಕುತಂತ್ರದ ಫಲವಾಗಿ ದೇಶವು ಅಂದು ಇಬ್ಭಾಗವಾಗಿದೆ. ಇದೀಗ ಇದೇ ದಿಕ್ಕಿನಲ್ಲಿ ಅಧಿಕಾರದ ಆಸೆಗೆ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಗುಡುಗಿದರು.
ಇದನ್ನೂ ಓದಿ : Kichcha Sudeep next movie : ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು : ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ
Former minister KS Eshwarappa’s outrage against DK Sivakumar, Siddaramaiah