ಸೋಮವಾರ, ಏಪ್ರಿಲ್ 28, 2025
Homekarnatakaಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಧಾನ: ಡಾ.ಜಿ.ಪರಮೇಶ್ವರ್ ರಾಜೀನಾಮೆ

ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಧಾನ: ಡಾ.ಜಿ.ಪರಮೇಶ್ವರ್ ರಾಜೀನಾಮೆ

- Advertisement -

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗೆ ತಳಮಟ್ಟದಿಂದ ಸಿದ್ಧವಾಗ್ತಿದ್ದ ಕಾಂಗ್ರೆಸ್ ಗೆ ಆರಂಭಿಕವಾಗಿಯೇ ಭರ್ಜರಿ ಆಘಾತ ಎದುರಾಗಿದೆ. ಸಿದ್ಧರಾಮಯ್ಯ ಹಾಗೂ ಡಿಕೆಶಿ ಕಾರ್ಯಕ್ರಮಗಳಲ್ಲಿ ಒಂದೊಂದೆ ಯೋಜನೆ ಘೋಷಿಸುತ್ತಿರುವುದಕ್ಕೆ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಕಾಂಗ್ರೆಸ್‌ ಹಿರಿಯ ಮುಖಂಡ ಡಾ.ಜಿ. ಪರಮೇಶ್ವರ್‌ (Parameshwar resigns) ಕಾಂಗ್ರೆಸ್ ಪ್ರಣಾಳಿಕಾ ಸಮಿತಿಗೆ ರಾಜೀನಾಮೆ ನೀಡಿದ್ದಾರೆ. ಇದು ಕಾಂಗ್ರೆಸ್ ಪಾಳಯಕ್ಕೆ ಶಾಕ್ ನೀಡಿದೆ.

ಕಾಂಗ್ರೆಸ್ ಪ್ರಜಾ ಧ್ವನಿ ,ಬಸ್ ಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮದ ಮೂಲಕ ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೆ. ಇದರ ಮಧ್ಯೆ ಹಲವು ಯೋಜನೆಗಳನ್ನು , ಭರವಸೆಗಳನ್ನು ಘೋಷಿಸುತ್ತ ಬಂದಿದೆ. ಆದರೆ ಈಗ ಇದೇ ಕಾರಣಕ್ಕೆ ಮುನಿಸಿಕೊಂಡ ಪರಂ ಪ್ರಣಾಳಿಕೆ ತಂಡದಿಂದ ಹೊರಬರುವ ನಿರ್ಣಯ ಕೈಗೊಂಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯಲ್ಲಿ ಪರಂ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕಳೆದ ಕೆಲ ತಿಂಗಳಿನಿಂದ ಕಾಂಗ್ರೆಸ್ ನವರು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಡಿಕೆಶಿ ಹಾಗೂ ಸಿದ್ಧರಾಮಯ್ಯನವರು ಒಂದೊಂದೆ ಯೋಜನೆ ಹಾಗೂ ಭರವಸೆಗಳನ್ನು ನೀಡುತ್ತ ಬಂದಿದ್ದರು. ಮಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ, ಗೃಹಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ರೂಪಾಯಿ, ಉಚಿತ ವಿದ್ಯುತ್ ಯೋಜನೆ ಸೇರಿದಂತೆ ಹಲವು ಯೋಜನೆ ಘೋಷಿಸಿದ್ದರು. ಮಾತ್ರವಲ್ಲ ಸ್ವಸಹಾಯ ಸಂಘದಲ್ಲಿನ ಮಹಿಳೆಯರ ಸಾಲ ಮನ್ನಾ ಮಾಡುವುದಾಗಿಯೂ ಸಿದ್ಧರಾಮಯ್ಯನವರು ಘೋಷಿಸಿದ್ದರು.

ಕೆಪಿಸಿಸಿ ಅಧ್ಯಕ್ಷರಾಗಿ, ಕಾಂಗ್ರೆಸ್ ನ ಹಿರಿಯ ನಾಯಕರಾಗಿ. ಡಿಸಿಎಂ ಆಗಿ ಕಾರ್ಯ ನಿರ್ವಹಿಸಿದ ಅನುಭವ ಉಳ್ಳ ಪರಮೇಶ್ವರ್ ಅವರನ್ನು ಹೈಕಮಾಂಡ್ ಪ್ರಣಾಳಿಕೆ ಸಮಿತಿಗೆ ನೇಮಿಸಿದ್ದರು ಅವರನ್ನು ಕಡೆಗಣಿಸಿ ಈ ಎಲ್ಲ ಘೋಷಣೆಗಳನ್ನು ಮಾಡಲಾಗಿತ್ತು. ಇದೇ ಕಾರಣಕ್ಕೆ ಪರಮೇಶ್ವರ್ ಈಗ ಪ್ರಣಾಳಿಕೆ ಸಮಿತಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈಗಾಗಲೇ ಪರಮೇಶ್ವರ ರಾಜೀನಾಮೆ ಸಲ್ಲಿಸಿದ್ದಾರೆ. .ಇನ್ನೂ ಪರಂ ಪ್ರಣಾಳಿಕೆ ಸಮಿತಿ ರಾಜೀನಾಮೆ ನೀಡಿದ್ದು ಈಗ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಮಧ್ಯೆ ಪರಮೇಶ್ವರ್‌ ರಾಜೀನಾಮೆ ನೀಡಿರೋದರಿಂದ ಕಾಂಗ್ರೆಸ್ ನಾಯಕರು ಕಂಗಲಾಗಿದ್ದು, ಇದರಿಂದ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗಲಿದೆ ಎಂಬ ಆತಂಕದಲ್ಲಿದ್ದಾರೆ. ಇದೇ ಕಾರಣಕ್ಕೆ ಸುರ್ಜೇವಾಲಾ ಪರಂ ನಿವಾಸಕ್ಕೆ ಧಾವಿಸಿದ್ದು ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸಿದ್ದಾರಂತೆ. ಅಲ್ಲದೇ ನಾಳೆ ನಡೆಯೋ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆಯೂ ಮನವೊಲಿಸಿದ್ದಾರಂತೆ. ಆದರೆ ಪರಂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜಿಯಾಗಿದ್ದು, ರಾಜೀನಾಮೆ ಮಾತ್ರ ಹಿಂಪಡೆಯಲು ಸಿದ್ಧವಾಗಿಲ್ಲ. ಒಟ್ಟಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಾಳಯಕ್ಕೆ ದಲಿತ ವಿರೋಧಿ ಸಂಕಷ್ಟ ಮತ್ತೊಮ್ಮೆ ಎದುರಾದಂತಿದೆ.

ಇದನ್ನೂ ಓದಿ : Former President of KPCC : ಕಾಂಗ್ರೆಸ್ ನಲ್ಲಿ ಮತ್ತೊಂದು ಅಪಸ್ವರ: ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಅಸಮಧಾನಗೊಂಡ ಪರಮೇಶ್ವರ್

ಇದನ್ನೂ ಓದಿ : DK Shivakumar vs Ramesh Jarakiholi : ಡಿಕೆ ಶಿವಕುಮಾರ್ ವಿರುದ್ಧ ಮತ್ತೆ ಸಿಬಿಐ ಅಸ್ತ್ರ : ಬಿಜೆಪಿ ಹೈಕಮಾಂಡ್ ಮೊರೆ ಹೋದ ರಮೇಶ ಜಾರಕಿಹೊಳಿ

G Parameshwar resigns from congress Election manifesto committee

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular