ಹೊಸಪೇಟೆ : ಹಲವು ವರ್ಷಗಳಿಂದಲೂ ಸಕ್ರೀಯ ರಾಜಕಾರಣದಿಂದ ದೂರ ಉಳಿದಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy ) ಮತ್ತೆ ರಾಜಕೀಯ ಜೀವನ ಆರಂಭಿಸುವುದಾಗಿ ಘೋಷಣ ಮಾಡಿದ್ದಾರೆ. ರಾಜ್ಯದಲ್ಲಿ150 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡುವುದು ನನ್ನ ಗುರಿ. ಇದಕ್ಕೆ ಬೇಕಾದ ಕಾರ್ಯತಂತ್ರ ರೂಪಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.
ಹೊಸಪೇಟೆಯ ಹರಪನಹಳ್ಳಿಯಲ್ಲಿನ ಎಚ್.ಪಿ.ಎಸ್. ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಸೀತಾರಾಮ ಕಲ್ಯಾಣೋತ್ಸವ ಹಾಗೂ ಕರುಣಾಕರ ರೆಡ್ಡಿ ಅವರ ಷಷ್ಠ್ಯಾಬ್ಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಳ್ಳಾರಿಯನ್ನು ಮತ್ತೆ ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡುತ್ತೇವೆ. ಪ್ರತೀ ಹಳ್ಳಿಗೂ ನಾನು ಹಾಗೂ ಕರುಣಾಕರ ರೆಡ್ಡಿ ಬರುತ್ತೇವೆ ಎನ್ನುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ಕೊಟ್ಟಿದ್ದಾರೆ ಮಾಜಿ ಸಚಿವ ಜನಾರ್ಧನ ರೆಡ್ಡಿ.

ಗಣಿ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿದ ಜನಾರ್ಧನ ರೆಡ್ಡಿ ಹಲವು ವರ್ಷಗಳಿಂದಲೂ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದರು. ಬಿಜೆಪಿ ಕೂಡ ಅವರನ್ನು ದೂರ ಇಟ್ಟುಕೊಂಡೇ ರಾಜಕಾರಣವನ್ನು ನಡೆಸುತ್ತಾ ಬಂದಿತ್ತು. ಆದರೆ ಜನಾರ್ಧನ ರೆಡ್ಡಿ ಅವರು ಜಾಮೀನಿನ ಮೇಲೆ ಹೊರಬಂದು ಅವರ ಮೇಲಿರುವ ನಿರ್ಬಂಧಗಳು ಕಡಿಮೆಯಾಗುತ್ತಲೇ ಪಕ್ಷದ ಜೊತೆಗೆ ಗುರುತಿಸಿಕೊಳ್ಳಲು ಶುರು ಮಾಡಿದ್ದರು. ಜನಾರ್ಧನ ರೆಡ್ಡಿ ಸಂಘ ಪರಿವಾರದ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ದೆಹಲಿ ಮಟ್ಟದಲ್ಲಿಯೇ ಪಕ್ಷಕ್ಕೆ ಬರಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಆದರೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಹೇಳುತ್ತಿರುವ ಬಿಜೆಪಿ ಭ್ರಷ್ಟಾಚಾರದ ಆರೋಪವಿರುವ ಜನಾರ್ಧನ ರೆಡ್ಡಿ ಅವರಿಗೆ ಪಕ್ಷದ ಟಿಕೆಟ್ ನೀಡುತ್ತಾ ಅನ್ನೋದು ಸದ್ಯದ ಕುತೂಹಲ. ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಬಿಜೆಪಿಗೆ ಇರುವುದರಿಂದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅತೀ ಹೆಚ್ಚು ಸ್ಥಾನವನ್ನು ಪಡೆಯುವ ಸಲುವಾಗಿ ಮತ್ತೆ ಜನಾರ್ಧನ ರೆಡ್ಡಿ ಅವರನ್ನು ಕರೆತಂದ್ರೂ ಅಚ್ಚರಿಯಿಲ್ಲ.
ಹರಪನಹಳ್ಳಿ ಪಟ್ಟಣದ ಎಚ್.ಪಿ.ಎಸ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸೀತಾರಾಮ ಕಲ್ಯಾಣೋತ್ಸವ ಹಾಗೂ ಹರಪನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀ ಕರುಣಾಕರ ರೆಡ್ಡಿ ಅವರ ಷಷ್ಠಾಬ್ದಿ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರೊಂದಿಗೆ ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ,ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು.1/2 pic.twitter.com/kdYdFSUG3w
— B Sriramulu (@sriramulubjp) April 10, 2022
ಇದನ್ನೂ ಓದಿ : Yogi Adityanath : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಚೇರಿಯ ಟ್ವಿಟರ್ ಖಾತೆ ಹ್ಯಾಕ್
ಇದನ್ನೂ ಓದಿ : ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜನಾರ್ಧನ ಪೂಜಾರಿ ಪುತ್ರ : ದೀಪಕ್ ಪೂಜಾರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ
Gali Janardhan Reddy Entry Karnataka Politics