ಸೋಮವಾರ, ಏಪ್ರಿಲ್ 28, 2025
HomepoliticsYSV Datta Join Congress : ಜೆಡಿಎಸ್ ತೊರೆಯೋಕೆ ಮುಂದಾದ ಜೆಡಿಎಸ್‌ ಮಾಜಿ ಶಾಸಕ ...

YSV Datta Join Congress : ಜೆಡಿಎಸ್ ತೊರೆಯೋಕೆ ಮುಂದಾದ ಜೆಡಿಎಸ್‌ ಮಾಜಿ ಶಾಸಕ ವೈ.ಎಸ್.ವಿ. ದತ್ತಾ: ಕಾಂಗ್ರೆಸ್ ಸೇರ್ತೆನೆ ಎಂದ ಆಡಿಯೋ ವೈರಲ್

- Advertisement -

ಬೆಂಗಳೂರು : ಅಪ್ಪ ಮಕ್ಕಳ ಪಕ್ಷ ಅಂತನೇ ಗುರುತಿಸಿಕೊಳ್ಳೋ ಜೆಡಿಎಸ್ ನ ಬೆಳವಣಿಗೆಗಾಗಿ ನಿಸ್ವಾರ್ಥವಾಗಿ ದುಡಿದವರಲ್ಲಿ ಅಗ್ರಗಣ್ಯ ಎಂದರೇ ಮಾಜಿ ಶಾಸಕ ವೈ.ಎಸ್.ವಿ ದತ್ತಾ (YSV Datta Join Congress). ಸದ್ಯ ಶಾಸಕ‌ ಸ್ಥಾನವನ್ನು ಕಳೆದುಕೊಂಡು ಕೇವಲ ಜೆಡಿಎಸ್ ಮುಖಂಡರಾಗಿ ಉಳಿದಿರೋ ವೈಎಸ್ವಿದತ್ತಾ ಕೊನೆಗೂ ತಮ್ಮ ನೆಲೆಯನ್ನು ಬದಲಾಯಿಸುವ ಚಿಂತನೆಯಲ್ಲಿದ್ದು, ಕಾಂಗ್ರೆಸ್ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದಾರಂತೆ. ಈ ಬಗ್ಗೆ ವೈ.ಎಸ್.ವಿ ದತ್ತಾದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.

ಹೌದು ಚಿಕ್ಕಮಗಳೂರು ಭಾಗದ ಪ್ರಭಾವಿ ನಾಯಕ ವೈಎಸ್ ವಿ ದತ್ತಾ ಚುನಾವಣೆಯಲ್ಲಿ ಸೋತು ಮೂಲೆ ಸೇರಿದ್ದಾರೆ. ಶಾಸಕರಾಗಿದ್ದಾಗಲೂ ಅವರಿಗೆ ಸಚಿವ ಸ್ಥಾನ ಸೇರಿದಂತೆ ಯಾವುದೇ ಗೌರವ ಕೊಡುವಲ್ಲಿ ವಿಫಲವಾಗಿದ್ದ ಜೆಡಿಎಸ್ ವರಿಷ್ಠರು ಈಗಂತೂ ದತ್ತಾರನ್ನು ಮರೆತೇ ಬಿಟ್ಟಂತಿದೆ. ಈ ಮಧ್ಯೆ ಸದ್ಯ ನೆಲೆ ಬದಲಾಯಿಸುವ ಚಿಂತನೆಯಲ್ಲಿರೋ ವೈ ಎಸ್ ವಿ ದತ್ತಾ ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ ನಡೆಸಿದ್ದಾರಂತೆ. ಸ್ವತಃ ದತ್ತಾ ಅವರೇ, ಸಿದ್ರಾಮಣ್ಣ ಕಾಂಗ್ರೆಸ್ ಗೆ ಕರೆಯುತ್ತಿದ್ದಾರೆ. ಬಾ ದತ್ತು ಮಂತ್ರಿ‌ಮಾಡ್ತಿನಿ ಎಂದಿದ್ದಾರೆ ಎಂದು ಮಾತನಾಡಿರುವ ಆಡಿಯೋ ಸಖತ್ ವೈರಲ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ವಿಚಾರವನ್ನು ವೈ.ಎಸ್.ವಿ ದತ್ತಾ ಒಪ್ಪಿಕೊಂಡಿದ್ದಾರೆ. ಅದು ನಾನೇ ಮಾತನಾಡಿದ ಆಡಿಯೋ. ನಾನು ಯಾವುದೋ ವ್ಯವಹಾರಕ್ಕಾಗಿ ಒಬ್ಬರಿಗೆ ಹಣ ಕೊಡ ಬೇಕಿತ್ತು. ಆ ವೇಳೆ ಚೆಕ್ ಕೊಟ್ಟಿದ್ದೆ. ಆದರೆ ಅಕೌಂಟ್ ಹಣವಿರಲಿಲ್ಲ. ಹೀಗಾಗಿ‌ ಸ್ವಲ್ಪ ದಿನ ಬಿಟ್ಟು ಚೆಕ್ ಹಾಕ್ಕೊಳ್ಳಿ. ಮಾರ್ಚ್ ವೇಳೆಗೆ ಹಾಕಿ. ಆ ವೇಳೆಗೆ ನಾನು ಕಾಂಗ್ರೆಸ್ ಸೇರಿರುತ್ತೇನೆ.‌ ನನ್ನ ಪರಿಸ್ಥಿತಿ ಕೂಡ ಸುಧಾರಿಸಿರುತ್ತದೆ ಎಂದು ಹೇಳಿದ್ದೇ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಇದು ಫೆಬ್ರವರಿ ವೇಳೆಗೆ ಮಾತನಾಡಿದ ಆಡಿಯೋ ಎಂಬುದನ್ನು ಖಚಿತ ಪಡಿಸಿದ್ದಾರೆ.

ಆದರೆ ಸದ್ಯ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ವೈಎಸ್ ವಿ ದತ್ತಾ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ನನ್ನ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆಗೊಳ್ಳಿ ಅಣ್ಣಾ. ಅಲ್ಲಿ‌ನಿಮಗೆ ಭವಿಷ್ಯವಿದೆ.‌ ನೀವು ಮಂತ್ರಿಯಾಗಬಹುದು ಎಂದು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ನಾನು ಯೋಚನೆ ಮಾಡುತ್ತಿದ್ದೇನೆ. ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ. ಜೆಡಿಎಸ್ ಬಗ್ಗೆ ಬೇಸರದಿಂದ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವೈ.ಎಸ್.ವಿ.ದತ್ತಾ ಬೇಸರವಲ್ಲ. ಕ್ಷೇತ್ರದ ಅಭಿವೃದ್ಧಿ ಕಾರಣಕ್ಕೆ ಕಾಂಗ್ರೆಸ್ ಸೇರುವ ಒತ್ತಡವಿದೆ ಎಂದು ದತ್ತಾ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಜೆಡಿಎಸ್ ನಿಂದ ಕೋನರೆಡ್ಡಿ ಹಾಗೂ ಹೊರಟ್ಟಿ ಹೊರಬಿದ್ದಿದ್ದು, ದತ್ತಾ ಕೂಡ ಹೊರಬಿದ್ದರೇ ಜೆಡಿಎಸ್ ಕೇವಲ ಅಪ್ಪ ಮಕ್ಕಳ ಪಕ್ಷವಾಗಿ ಉಳಿಯೋದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ : Cabinet expansion : ಸಚಿವ ಸಂಪುಟ ವಿಸ್ತರಣೆಗೆ ಮುಗಿಯದ ಕಂಟಕ : ಈಗ ಬಿಬಿಎಂಪಿ ಎಲೆಕ್ಷನ್ ಅಡ್ಡಿ

ಇದನ್ನೂ ಓದಿ : Ravindra Jadeja : ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ರವೀಂದ್ರ ಜಡೇಜಾ ಐಪಿಎಲ್‌ನಿಂದ ಔಟ್‌

JDS Senior Leader YSV Datta Join Congress : Audio Viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular