ಬೆಂಗಳೂರು : ರಾಜ್ಯದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ( MLC Election 2021) ಬಿಜೆಪಿ ಭರ್ಜರಿ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಇದೀಗ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಬೆಳಗಾವಿ, ವಿಜಯಪುರ, ಧಾರವಾಡ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ದ್ವಿಸದಸ್ಯ ಸ್ಥಾನವಿದ್ದರೂ ಬಿಜೆಪಿ ಒಂದೇ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಿದೆ.
ಅಭ್ಯರ್ಥಿಗಳ ಹೆಸರು:
ದಕ್ಷಿಣ ಕನ್ನಡ : ಕೋಟ ಶ್ರೀನಿವಾಸ ಪೂಜಾರಿ
ಕೊಡಗು : ಸುಜಾ ಕುಶಾಲಪ್ಪ
ಚಿಕ್ಕಮಗಳೂರು : ಎಂಕೆ ಪ್ರಾಣೇಶ್
ಶಿವಮೊಗ್ಗ: ಡಿಎಸ್ ಅರುಣ್
ಧಾರವಾಡ: ಪ್ರದೀಪ್ ಶೆಟ್ಟರ್
ಬೆಳಗಾವಿ: ಮಹಾಂತೇಶ್ ಕವಟಗಿಮಠ
ಕಲಬುರಗಿ: ಬಿಜಿ ಪಾಟೀಲ್
ಚಿತ್ರದುರ್ಗ: ಕೆ.ಎಸ್.ನವೀನ್
ಮೈಸೂರು: ರಘು ಕೌಟಿಲ್ಯ
ಹಾಸನ: ವಿಶ್ವನಾಥ್
ಉತ್ತರ ಕನ್ನಡ: ಗಣಪತಿ ಉಳ್ವೇಕರ್
ಬೀದರ್: ಪ್ರಕಾಶ್ ಖಂಡ್ರೆ
ಬೆಂಗಳೂರು: ಹೆಚ್ ಎಸ್ ಗೋಪಿನಾಥ ರೆಡ್ಡಿ
ಮಂಡ್ಯ: ಮಂಜು ಕೆ ಆರ್ ಪೇಟೆ
ಕೋಲಾರ: ಕೆ.ಎನ್. ವೇಣುಗೋಪಾಲ್,
ರಾಯಚೂರು: ವಿಶ್ವನಾಥ್ ಬನಹಟ್ಟಿ
ಬೆಂಗಳೂರು ಗ್ರಾಮಾಂತರ: ಬಿ.ಎಂ. ನಾರಾಯಣಸ್ವಾಮಿ
ಬಳ್ಳಾರಿ: ವೈಎಂ ಸತೀಶ್
ತುಮಕೂರು: ಎಂ ಲೋಕೇಶ್
ವಿಜಯಪುರ: ಪಿ.ಎಚ್. ಪೂಜಾರ್
ವಿಧಾನ ಪರಿಷತ್‌ನಲ್ಲಿ ಸಂಖ್ಯಾಬಲವನ್ನು ವೃದ್ದಿಸುವ ಸಲುವಾಗಿ ಬಿಜೆಪಿ ಸಕಲ ರೀತಿಯಲ್ಲಿಯೂ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಬಿಜೆಪಿ ರಾಜ್ಯದಾದ್ಯಂತ ಯಾತ್ರೆಯನ್ನೂ ಹಮ್ಮಿಕೊಂಡಿದೆ.
ಇದನ್ನೂ ಓದಿ : ಮತ್ತೊಮ್ಮೆ ಬಿಜೆಪಿ ಕುಟುಕಿದ ಪದ್ಮಾವತಿ : ಸೋಷಿಯಲ್ ಮೀಡಿಯಾದಲ್ಲಿ ಹಿಂದುತ್ವದ ಪಾಠ
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆಅಭಿನಂದಿಸಿ ಪ್ರಮೋದ್ ಮಧ್ವರಾಜ್
(BJP announces list of candidates for MLC Election 2021 Karnataka)