ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಅಧಿಕಾರಕ್ಕೆ (Karnataka Cabinet 2023) ಬಂದ ಬೆನ್ನಲ್ಲೇ ಇದೀಗ ಪೂರ್ಣ ಪ್ರಮಾಣದಲ್ಲಿ ಸಚಿವ ಸಂಪುಟ ರಚನೆಯಾಗಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಜೊತೆಗೆ ಎಂಟು ಮಂದಿ ಹಿರಿಯ ಕಾಂಗ್ರೆಸ್ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದರೂ ಕೂಡ ಖಾತೆ ಹಂಚಿಕೆ ಆಗಿರಲಿಲ್ಲ. ಆದ್ರೆ ಇಂದು 24 ಮಂದಿ ಸಚಿವರು ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಎಲ್ಲಾ ಸಚಿವರಿಗೆ ಖಾತೆಯನ್ನು ಹಂಚಿಕೆ ಮಾಡಲಾಗಿದೆ.
ಯಾವ ಸಚಿವರಿಗೆ ಯಾವ ಖಾತೆ :
- ಸಿಎಂ ಸಿದ್ದರಾಮಯ್ಯ : ಹಣಕಾಸು, ಆಡಳಿತ ಸುಧಾರಣೆ , ವಾರ್ತಾ ಇಲಾಖೆ ಹಾಗೂ ಹಂಚಿಕೆ ಮಾಡದಿರುವ ಇತರೆ ಖಾತೆಗಳು
- ಡಾ.ಜಿ ಪರಮೇಶ್ವರ : ಗೃಹ ಖಾತೆ
- ಡಿಸಿಎಂ ಡಿಕೆ ಶಿವಕುಮಾರ್ : ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ (ಬಿಡಿಎ, ಬಿಬಿಎಂಪಿ.. ಇತ್ಯಾದಿ)
- ಎಂಬಿ ಪಾಟೀಲ್ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ
- ಕೆಹೆಚ್ ಮುನಿಯಪ್ಪ : ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ
- ಕೆಜೆ ಜಾರ್ಜ್ : ಇಂಧನ
- ಜಮೀರ್ ಅಹ್ಮದ್ : ವಸತಿ ಮತ್ತು ವಕ್ಫ್
- ರಾಮಲಿಂಗಾರೆಡ್ಡಿ : ಸಾರಿಗೆ
- ಸತೀಶ ಜಾರಕಿಹೊಳಿ : ಲೋಕೋಪಯೋಗಿ
- ಪ್ರಿಯಾಂಕ್ ಖರ್ಗೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗು ಐಟಿ ಬಿಟಿ
- ಹೆಚ್.ಕೆ.ಪಾಟೀಲ್ : ಕಾನೂನು ಮತ್ತು ಸಂಸದೀಯ ವ್ಯವಹಾರ
- ಕೃಷ್ಣ ಭೈರೇಗೌಡ : ಕಂದಾಯ
- ಚೆಲುವರಾಯಸ್ವಾಮಿ : ಕೃಷಿ
- ಕೆ.ವೆಂಕಟೇಶ್ : ಪಶುಸಂಗೋಪನೆ ಮತ್ತು ರೇಷ್ಮೆ
- ಡಾ. ಮಹದೇವಪ್ಪ : ಸಮಾಜ ಕಲ್ಯಾಣ
- ಈಶ್ವರ ಖಂಡ್ರೆ : ಅರಣ್ಯ
- ಕೆಎನ್ ರಾಜಣ್ಣ : ಸಹಕಾರ
- ದಿನೇಶ್ ಗುಂಡೂರಾವ್ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಶರಣ ಬಸಪ್ಪ ದರ್ಶನಾಪೂರ : ಸಣ್ಣ ಕೈಗಾರಿಕೆ
- ಶಿವಾನಂದ ಪಾಟೀಲ್ : ಜವಳಿ ಮತ್ತು ಸಕ್ಕರೆ
- ಆರ್.ಬಿ.ತಿಮ್ಮಾಪುರ : ಅಬಕಾರಿ ಮತ್ತು ಮುಜರಾಯಿ
- ಎಸ್ಎಸ್ ಮಲ್ಲಿಕಾರ್ಜುನ : ಗಣಿಗಾರಿಕೆ ಮತ್ತು ತೋಟಗಾರಿಕೆ
- ಶಿವರಾಜ ತಂಗಡಗಿ : ಹಿಂದುಳಿದ ವರ್ಗಗಳ ಕಲ್ಯಾಣ
- ಡಾ.ಶರಣ ಪ್ರಕಾಶ್ ಪಾಟೀಲ್ : ಉನ್ನತ ಶಿಕ್ಷಣ
- ಮಂಕಾಳೆ ವೈದ್ಯ : ಮೀನುಗಾರಿಕೆ
- ಲಕ್ಷ್ಮಿ ಹೆಬ್ಬಾಳ್ಕರ್ : ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ರಹೀಂ ಖಾನ್ : ಪೌರಾಡಳಿತ
- ಡಿ.ಸುಧಾಕರ್ : ಯೋಜನೆ ಮತ್ತು ಸಾಂಖಿಕ ಇಲಾಖೆ
- ಸಂತೋಷ್ ಲಾಡ್ : ಕಾರ್ಮಿಕ
- ಭೋಸರಾಜ್ : ಸಣ್ಣ ನೀರಾವರಿ
- ಭೈರತಿ ಸುರೇಶ್ : ನಗರಾಭಿವೃದ್ಧಿ
- ಮಧು ಬಂಗಾರಪ್ಪ : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ಡಾ.ಎಂಪಿ ಸುಧಾಕರ್ : ವೈದ್ಯಕೀಯ ಶಿಕ್ಷಣ
- ಬಿ ನಾಗೇಂದ್ರ : ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ
ಇದನ್ನೂ ಓದಿ : Bhavani Revanna : ಜೆಡಿಎಸ್ ರಾಜ್ಯಾಧ್ಯಕ್ಷರಾಗ್ತಾರಾ ಭವಾನಿ ರೇವಣ್ಣ? ಸಿಎಂಇಬ್ರಾಹಿಂ ಮುಂದುವರಿಕೆಗೆ ಪಟ್ಟು ಹಿಡಿದ ಕುಮಾರಣ್ಣ
ಇದನ್ನೂ ಓದಿ : Karnataka Oath Ceremony : ಕರ್ನಾಟಕ : ಸಿದ್ದರಾಮಯ್ಯ ಸಂಪುಟ ಸೇರಿದ 24 ಸಚಿವರು
Karnataka Cabinet 2023: Allotment of Accounts after Minister’s Swearing In: Whose Account?