ಬೆಳಗಾವಿ : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬದಲಾವಣೆಯ ಮಾತು ಕೇಳಿಬಂದಿತ್ತು. ಇದಕ್ಕೆ ಕಾರಣವಾಗಿರೋದು ಬೊಮ್ಮಾಯಿ ಅವರನ್ನು ಕಾಡುತ್ತಿರುವ ಮಂಡಿ ನೋವು. ಸಿಎಂ ಮಂಡಿ ನೋವಿನ ( Karnataka Chief Minister Basavaraj Bommai Knee Pain) ಚಿಕಿತ್ಸೆಗೆ ವಿದೇಶಕ್ಕೆ ಹಾರುತ್ತಾರೆ ಅನ್ನೋ ಸುದ್ದಿಯೂ ಹರಿದಾಡಿತ್ತು. ಆದ್ರೀಗ ಬಸವರಾಜ್ ಬೊಮ್ಮಾಯಿ ಅವರು ನಾಟಿ ವೈದ್ಯರಿಂದ ಮಂಡಿ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಭಾಗಿಯಾಗಿಯಾಗಿರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಳಗಾವಿಯಲ್ಲಿ ಪ್ರಖ್ಯಾತ ರಾಜ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮೈಸೂರು ಮೂಲದ ನಾಟಿ ವೈದ್ಯರಾಗಿರು ಲೋಕೇಶ್ ಟೆಕಲ್ ಎಂಬವರು ಮುಖ್ಯಮಂತ್ರಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಚರ್ಮ ರೋಗಕ್ಕೆ ಲೋಕೇಶ್ ಟೆಕಲ್ ಅವರೇ ಚಿಕಿತ್ಸೆಯನ್ನು ನೀಡಿದ್ದರು. ಹೀಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಆರಂಭಿಸಿದ್ದಾರೆ.
ಕಳೆದ ಹಲವು ಸಮಯಗಳಿಂದಲೂ ಬಸವರಾಜ್ ಬೊಮ್ಮಾಯಿ ಅವರು ಮಂಡಿನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದಾಗಿ ಸದ್ಯದಲ್ಲಿಯೇ ನೋವಿನ ಚಿಕಿತ್ಸೆಗಾಗಿ ಅವರು ಅಮೇರಿಕಾಕ್ಕೆ ತೆರಳಲಿದ್ದಾರೆ. ಈ ವೇಳೆಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದ್ರೀಗ ಸಿಎಂ ರಾಜ್ಯದಲ್ಲಿಯೇ ಚಿಕಿತ್ಸೆ ಪಡೆಯುವ ಮೂಲಕ ಮಂಡಿ ನೋವಿನಿಂದ ಗುಣಮುಖರಾಗುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಮೈಸೂರು ರಾಜಮನೆತನದ ನಾಟಿ ವೈದ್ಯರಾಗಿರುವ ಲೋಕೇಶ್ ಟೆಕಲ್ ಅವರು ಈಗಾಗಲೇ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ವೈದ್ಯಲೋಕಕ್ಕೆ ಸವಾಲಾಗಿದ್ದ ಬ್ಲ್ಯಾಕ್ ಫಂಗಸ್‌ಗೆ ಒಳಗಾಗಿದ್ದ ಆನಂದ ಕುಲಾಲಿ ಎಂಬ ವ್ಯಕ್ತಿಗೆ ಚಿಕಿತ್ಸೆಯನ್ನ ನೀಡಿ ಗುಣಮುಖರಾಗಿಸಿದ ಕೀರ್ತಿ ಲೋಕೇಶ್ ಅವರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೇ ಕ್ಯಾನ್ಸರ್, ಬ್ಲಾಕ್ ಫಂಗಸ, ಕೊರೋನಾ ಸೇರಿದಂತೆ ವಿವಿಧ ಖಾಯಿಲೆಗಳಿಗೆ ವನಸ್ಪತಿ ಔಷಧ ನೀಡಿ ಯಶಸ್ವಿಯಾಗಿದ್ದಾರೆ.
ಸದ್ಯ ಮುಖ್ಯಮಂತ್ರಿಗಳು ಮಂಡಿ ನೋವಿನಿಂದ ಗುಣಮುಖರಾಗುತ್ತಿದ್ದು, ಅವರಿಗೆ ದಿನಕ್ಕೆ ಎರಡು ಬಾರಿ ಔಷಧದ ಜೊತೆಗೆ ಮೇಕೆ ಹಾಲು ಕುಡಿಯುವಂತೆ ಬೊಮ್ಮಯಿಯವರಿಗೆ ನಾಟಿ ವೈದ್ಯ ಸಲಹೆ ನೀಡಿದ್ದಾರೆ. ಮೇಕೆ ಹಾಲಿನಲ್ಲಿ ವಿಟಮಿನ್ ಡಿ ಕೂಡಾ ಇರುವುದರಿಂದ ಅದು ಮೂಳೆಗಳು ಕ್ಯಾಲ್ಶಿಯಂ ಸೆಳೆದುಕೊಳ್ಳಲು ಸಹಾಯ ಮಾಡುತ್ತದೆ. ಆರ್ತ್ರೈಟಿಸ್ ಹೊಂದಿರುವ ರೋಗಿಗಳಲ್ಲಿ ಆಸ್ಟಿಯೋಪೋರೋಸಿಸ್ ತಡೆಯುವಲ್ಲಿ ಮೇಕೆ ಹಾಲು ಸಶಕ್ತವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ : MLC Shantaram Siddi : ಕೆಎಸ್‌ಆರ್‌ಟಿಸಿ ಬಸ್ಸಿಗಾಗಿ ಒಬ್ಬಂಟಿಯಾಗಿ ಕಾಯುತ್ತಿರುವ ಶಾಂತಾರಾಮ ಸಿದ್ದಿ : ಜನನಾಯಕನ ಸರಳತೆ ಭಾರೀ ಮೆಚ್ಚುಗೆ
ಇದನ್ನೂ ಓದಿ : Jarakiholi Master Plan : ಲಖನ್ ಬಿಜೆಪಿ ಸೇರ್ಪಡೆಗೆ ಸಿದ್ಧವಾಯ್ತು ಮಾಸ್ಟರ್ ಪ್ಲ್ಯಾನ್ : ಹೈಕಮಾಂಡ್ ಮುಂದೇ ಷರತ್ತು ಇಟ್ಟ ರಮೇಶ್
ಇದನ್ನೂ ಓದಿ : Omicron Cases India Surge: ಭಾರತದಲ್ಲಿ ಓಮಿಕ್ರಾನ್ ಸ್ಪೋಟ : 578 ಪ್ರಕರಣ
(Karnataka Chief Minister Basavaraj Bommai treated by knee pain graft doctor)