ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಕಾವೇರಿ ಕಾವು ಜೋರಾಗಿದ್ದರೇ, ಕಾಡ್ತಿರೋ ಕಾವೇರಿ ನದಿ ನೀರು ಹಂಚಿಕೆ ವಿವಾದದ (Cauvery Contravecy) ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನ ಆಂತರಿಕ ವೈಮನಸ್ಸು ಕೂಡ ತೀವ್ರಗೊಳ್ಳತೊಡಗಿದೆ. ಡಿಸಿಎಂ ಸ್ಥಾನದಲ್ಲಿದ್ದುಕೊಂಡು ಸೂಪರ್ ಸಿಎಂರಂತೆ ವರ್ತಿಸುತ್ತಿರುವ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಕಡಿವಾಣ ಹಾಕಲು ಸಚಿವರಾದ ಪರಮೇಶ್ವರ್ (Dr. G. Prameshwara), ಕೆ.ಎನ್.ರಾಜಣ್ಣ (KN Rajanna) ಮೂರು ಡಿಸಿಎಂ ( Karnataka 3 DCM) ಸ್ಥಾನದ ವಿಚಾರ ಪ್ರಸ್ತಾಪಿಸಿದ್ದರು.
ಇದೇ ವಿಚಾರಕ್ಕೆ ಕೆರಳಿದ ಡಿಸಿಎಂ ಡಿಕೆಶಿ ಹೈಕಮಾಂಡ್ ಗೆ (Congress High Command) ದೂರು ನೀಡಿದ್ದರು. ಈ ಆಂತರಿಕ ಕಚ್ಚಾಟವನ್ನು ಗಮನಿಸಿದ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದು, ಹಾದಿ-ಬೀದಿಯಲ್ಲಿ ಪಕ್ಷದ ವಿಚಾರ ಚರ್ಚಿಸಿದ್ರೇ ಹುಷಾರ್ ಎಂದು ಎಚ್ಚರಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಈಡೇರಿಸಿ ಜನಮನ್ನಣೆ ಗಳಿಸುತ್ತ ಮುನ್ನಡೆಯುತ್ತಿದೆ.

ಇದನ್ನೂ ಓದಿ : ಸಿಎಂ ಬ್ರಾಹಿಂ ಪಾಲಿಗೆ ಬಿಸಿತುಪ್ಪವಾದ ಮೈತ್ರಿ: ಜೆಡಿಎಸ್ ಬಿಡೋಕಾಗಲ್ಲ,ಕಾಂಗ್ರೆಸ್ ಸೇರೋಕಾಗಲ್ಲ
ಹೀಗಿರುವಾಗಲೇ ಸಿಎಂ ಹಾಗೂ ಡಿಸಿಎಂ ನಡುವೆ ಅಧಿಕಾರ ಚಲಾವಣೆಯ ಪೈಪೋಟಿ ಸದ್ದಿಲ್ಲದೇ ಜೋರಾಗಿದೆ. ಸಿಎಂ ಸಿದ್ಧರಾಮಯ್ಯನವರನ್ನು ಸದ್ದಿಲ್ಲದೇ ಓವರ್ ಟೇಕ್ ಮಾಡ್ತಿದ್ದಾರೆ ಡಿಸಿಎಂ ಡಿ.ಕೆ.ಶಿವಕುಮಾರ್. ಡಿ.ಕೆ.ಶಿವಕುಮಾರ್ ಈ ನಡವಳಿಕೆಯನ್ನು ನಿಯಂತ್ರಿಸಲು ಸಿದ್ಧು ಆಪ್ತ ಸಚಿವರು ಹಾಗೂ ಡಿಸಿಎಂ ಸ್ಥಾನದ ನೀರಿಕ್ಷೆಯಲ್ಲಿರೋ ಸಚಿವರು ಮೂರು ಡಿಸಿಎಂ ಸ್ಥಾನದ ಸಂಗತಿಯನ್ನು ಪ್ರಸ್ತಾಪಿಸಿದ್ದರು.
ಹಿರಿಯ ಸಚಿವ ಪರಮೇಶ್ವರ್ ಇನ್ನೂ ಮೂರು ಡಿಸಿಎಂ ಸ್ಥಾನವನ್ನು ಕ್ರಿಯೇಟ್ ಮಾಡಿ ಜಾತಿ ಆಧಾರದ ಮೇಲೆ ಅಥವಾ ಸಿನಿಯಾರಿಟಿ ಮೇಲೆ ಡಿಸಿಎಂ ಹುದ್ದೆ ನೀಡಬೇಕೆಂದು ವಾದಿಸಿದ್ದರು. ಬಹಿರಂಗವಾಗಿ ಮಾಧ್ಯಮಗಳ ಎದುರು ಹೇಳಿಕೊಂಡ ಈ ಮಾತು ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕು ಸಾಕ್ಷಿ ಒದಗಿಸಿತ್ತು.
ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.
ಮೂರು ಡಿಸಿಎಂ ಸ್ಥಾನಗಳ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆ ಕೆರಳಿ ಕೆಂಡಾಮಂಡಲರಾದ ಡಿಕೆಶಿ ಈ ಬಗ್ಗೆ ಹೈಕಮಾಂಡ್ ಗೆ ದೂರು ನೀಡಿದ್ದರು. ಸಚಿವರ ಹೇಳಿಕೆ ಹಾಗೂ ಡಿಸಿಎಂ ದೂರಿನ ಬಳಿಕ ಎಚ್ಚೆತ್ತುಕೊಂಡ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.
ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿ ಈಡೇರಿಸಿ ಜನಮನ್ನಣೆ ಗಳಿಸಿದೆ. ಕಾಂಗ್ರೆಸ್ ಈ ಜನಪ್ರಿಯತೆ ಸಹಿಸಲಾರದೇ ಬಿಜೆಪಿ ಪ್ರಾದೇಶಿಕ ಪಕ್ಷ, ಮಾಧ್ಯಮಗಳ ಮೂಲಕ ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಈ ಷಡ್ಯಂತ್ರಗಳಿಗೆ ಕಾಂಗ್ರೆಸ್ ನಾಯಕರೇ ಬಲಿಯಾಗಬೇಡಿ. ಪಕ್ಷ, ಅಧಿಕಾರ, ಸ್ಥಾನಮಾನ ಸೇರಿದಂತೆ ಯಾವುದೇ ಆಂತರಿಕ ವಿಚಾರವನ್ನು ಸಾರ್ವಜನಿಕ. ಸಭೆ ಸಮಾರಂಭದಲ್ಲಿ ಚರ್ಚಿಸಬೇಡಿ.

ಕೇವಲ ಪಕ್ಷದ ವೇದಿಕೆಯಲ್ಲಿ ಮಾತನಾಡಿ. ಇಲ್ಲದಿದ್ದರೇ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವಿವರವಾದ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಅಸಮಧಾನದ ಕೆಂಡ ನಿಧಾನಕ್ಕೆ ಹೊಗೆ ಆಡತೊಡಗಿದ್ದು, ಹೈಕಮಾಂಡ್ ಬೆಂಕಿ ಆರಿಸುವ ಪ್ರಯತ್ನ ಆರಂಭಿಸಿದೆ.
ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ವಾರ್ನಿಂಗ್ !
- ಸಿಎಂ ಮತ್ತು ಹೆಚ್ಚುವರಿ ಡಿಸಿಎಂ ವಿಚಾರ ಹಾದಿ ಬೀದಿಯಲ್ಲಿ ಚರ್ಚೆ ಬೇಡಾ
- ಯಾವುದೇ ಊಹಾಪೋಹಗಳಿಗೆ ಅವಕಾಶ ಮಾಡಿಕೊಟ್ರೆ ಸೂಕ್ತ ಕ್ರಮ
- ಸರಕಾರ ಗ್ಯಾರಂಟಿ ಯೋಜನೆಗಳು (congress guarantee scheme) ಯಶಸ್ವಿಯಾಗಿ ಕಾರ್ಯಗತಗೊಳಿಸಬೇಕು.
- ದೇಶದಾದ್ಯಂತ ಕರ್ನಾಟಕ ಮಾಡೆಲ್ ಚರ್ಚೆ ನಡೆಯುತ್ತಿದೆ. ಇನ್ನಷ್ಟು ಯಶಸ್ವಿಗೊಳಿಸಿ.
- ಪಕ್ಷದ ಆಂತರಿಕ ವಿಚಾರ ಪಕ್ಷದ ಒಳಗೆ ಚರ್ಚೆ ನಡೆಯಬೇಕು.
- ಪಕ್ಷದ ವಿಚಾರವನ್ನು ಬಹಿರಂಗವಾಗಿ ಯಾರೂ ಚರ್ಚೆ ನಡೆಸುವಂತಿಲ್ಲ.
Karnataka CM and DCM Matter High Command Warning to State Congress Leaders