ಭಾನುವಾರ, ಏಪ್ರಿಲ್ 27, 2025
Homekarnatakaಅತಿರೇಕಕ್ಕೆ ತಿರುಗಿದ ಅಭಿಮಾನ…! ಗುಂಡ್ಲುಪೇಟೆಯಲ್ಲಿ ಬಿಎಸ್ವೈ ಅಭಿಮಾನಿ ಆತ್ಮಹತ್ಯೆ…!!

ಅತಿರೇಕಕ್ಕೆ ತಿರುಗಿದ ಅಭಿಮಾನ…! ಗುಂಡ್ಲುಪೇಟೆಯಲ್ಲಿ ಬಿಎಸ್ವೈ ಅಭಿಮಾನಿ ಆತ್ಮಹತ್ಯೆ…!!

- Advertisement -

ಚಾಮರಾಜನಗರ: ಅಭಿಮಾನದ ಹೆಸರಿನಲ್ಲಿ ಅತಿರೇಕದ ಘಟನೆಯೊಂದನ್ನು ಚಾಮರಾಜನಗರ ಜಿಲ್ಲೆ ಸಾಕ್ಷಿಯಾಗಿದೆ. ಸಿಎಂ ಬಿಎಸ್ವೈ ತಮ್ಮ ಸರ್ಕಾರದ 2 ನೇ ವರ್ಷದ ಸಾಧನಾ ಸಮಾವೇಶದಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಕಟ್ಟಾ ಅಭಿಮಾನಿಯೊಬ್ಬರು ಗುಂಡ್ಲುಪೇಟೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ರವಿ(ರಾಜಪ್ಪ) ಬಿಎಸ್ವೈ ಅಭಿಮಾನಿಯಾಗಿದ್ದು, ಬಿಎಸ್ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ರವಿ ಅಲಿಯಾಸ್ ರಾಜಪ್ಪ ಆತ್ಮಹತ್ಯೆಗೆ ಸಿಎಂ ಬಿಎಸ್ವೈ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ರಾಜಪ್ಪ ಆತ್ಮಹತ್ಯೆಗೆ ಶರಣಾದ ಸುದ್ದಿ ತೀವ್ರ ನೋವು ತಂದಿದೆ.

ರಾಜಕಾರಣದಲ್ಲಿ ಏರಿಳಿತಗಳು ಸಹಜ. ಇದಕ್ಕೆ ಪ್ರಾಣಾರ್ಪಣೆ ಮಾಡಿಕೊಳ್ಳುವುದು ಸರ್ವಥಾ ಒಪ್ಪಲಾಗದು. ಕುಟುಂಬಸ್ಥರ ನಷ್ಟ ಯಾರಿಂದಲೂ ಭರಿಸಲಾಗದು ಎಂದಿದ್ದಾರೆ.

ಅಲ್ಲದೇ ಮತ್ತೊಂದು ಟ್ವೀಟ್ ಮಾಡಿರುವ ಬಿಎಸ್ವೈ, ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಕೈಮುಗಿದು ಪ್ರಾರ್ಥಿಸುತ್ತೇನೆ. ರವಿ ಕುಟುಂಬದ ನೋವಿನೊಂದಿಗೆ ನಾನಿದ್ದೇನೆ ಎಂದಿದ್ದಾರೆ.

RELATED ARTICLES

Most Popular