ಸೋಮವಾರ, ಏಪ್ರಿಲ್ 28, 2025
HomepoliticsCM Ibrahim :ವಿಧಾನ ಪರಿಷತ್ ವಿಪಕ್ಷ ಸ್ಥಾನ ನೀಡದ್ದಕ್ಕೆ ಸಿ.ಎಂ.ಇ್ರಬಾಹಿಂ ಮುನಿಸು : ಕಾಂಗ್ರೆಸ್‌...

CM Ibrahim :ವಿಧಾನ ಪರಿಷತ್ ವಿಪಕ್ಷ ಸ್ಥಾನ ನೀಡದ್ದಕ್ಕೆ ಸಿ.ಎಂ.ಇ್ರಬಾಹಿಂ ಮುನಿಸು : ಕಾಂಗ್ರೆಸ್‌ ಮೊದಲ ವಿಕೆಟ್‌ ಪತನ

- Advertisement -

ಬೆಂಗಳೂರು : ಕೇವಲ ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಉಳಿದುಕೊಂಡಿದ್ದ ಕಾಂಗ್ರೆಸ್ ನ ಹಿರಿಯ ಅಲ್ಪಸಂಖ್ಯಾತ ನಾಯಕ ಸಿ.ಎಂ.ಇಬ್ರಾಹಿಂ (CM Ibrahim ) ಕಾಂಗ್ರೆಸ್ ತೊರೆಯುವ ಮಾತನ್ನಾಡಿದ್ದು, ನಮ್ಮ ಹಾಗೂ ಕಾಂಗ್ರೆಸ್ ಸಂಬಂಧ ಇನ್ಮುಂದೆ ಮುಗಿದ ಅಧ್ಯಾಯ ಎಂದಿದ್ದಾರೆ. ವಿಧಾನಪರಿಷತ್ ವಿಪಕ್ಷ ನಾಯಕ‌ಸ್ಥಾನದ ತೀವ್ರ ಆಕಾಂಕ್ಷಿಯಾಗಿದ್ದ ಇಬ್ರಾಹಿಂ ಕಾಂಗ್ರೆಸ್ ಅಧಿಕಾರ ತನಗೆ ನೀಡುತ್ತದೇ ಎಂಬ ಬಲವಾದ ನಂಬಿಕೆಯಲ್ಲಿದ್ದರು. ಆದರೆ ಕೈಪಾಳಯದಲ್ಲಿ ಲೆಕ್ಕಾಚಾರ ಬೇರೆ ಇದ್ದಂತಿದ್ದು ಅಧಿಕಾರ ಮತ್ತೊಬ್ಬ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಪಾಲಾಗಿದೆ. ಇದೇ ಕಾರಣಕ್ಕೆ ಇಬ್ರಾಹಿಂ ಕೈಪಾಳಯದಿಂದ ಹೊರಬರುವ ತೀರ್ಮಾನ ಕೈಗೊಂಡಿದ್ದಾರೆ.

ವಿಪಕ್ಷ ನಾಯಕ ಸ್ಥಾನ ಕೈತಪ್ಪುತ್ತಿದ್ದಂತೆ ಸಿದ್ಧರಾಮಯ್ಯ ವಿರುದ್ಧ ಮುನಿಸಿಕೊಂಡಿರುವ ಇಬ್ರಾಹಿಂ ಚಾಮುಂಡೇಶ್ವರಿಯಲ್ಲಿ ಸಿದ್ಧು ಸೋಲುವ ಭೀತಿ ಇದ್ದಿದ್ದರಿಂದ‌ನಾನೇ ಮುಂದೇ ನಿಂತು ಬಾದಾಮಿಯಲ್ಲಿ ನಾಯಕರನ್ನು ಒಪ್ಪಿಸಿ ನಾಮಪತ್ರ ಹಾಕಿಸಿದ್ದೇ, ಗೆಲ್ಲಿಸಿ ರಾಜಕೀಯವಾಗಿ ಸಿದ್ಧರಾಮಯ್ಯನವರಿಗೆ ಮರುಜೀವನ ನೀಡಿದೆ. ಆದರೆ ಸಿದ್ಧರಾಮಯ್ಯನವರು ಮಾತ್ರ ನನಗೆ ಒಳ್ಳೆಯ ಗಿಫ್ಟ್ ಕೊಟ್ಟರು ಎಂದು ಇಬ್ರಾಹಿಂ ಅಸಮಧಾನ ತೋಡಿಕೊಂಡಿದ್ದಾರೆ.

ಸಿದ್ಧರಾಮಯ್ಯನವರಿಗಾಗಿ ನಾನು ಜೆಡಿಎಸ್ ಪಕ್ಷವನ್ನು ಬಿಟ್ಟು ಬಂದೆ. ಜೈಲಿನಲ್ಲಿದ್ದು ಕಟ್ಟಿದ ಪಕ್ಷವನ್ನು ನಾವು ಬಿಟ್ಟು ಸಿದ್ಧು ಜೊತೆ ನಡೆದಿದ್ದಕ್ಕೆ ಸಿದ್ಧರಾಮಯ್ಯ ಎಂಥಹ ಕೊಡುಗೆ ಕೊಟ್ಟರು. ನಾನು ಈಗಲೇ ಎಲ್ಲವನ್ನು ಮಾತನಾಡುವುದಿಲ್ಲ. ಹಂತ ಹಂತವಾಗಿ ಎಲ್ಲವನ್ನು ಹೇಳುತ್ತೇನೆ.‌ಸದ್ಯದಲ್ಲೇ ನನ್ನ ಎಂಎಲ್ ಸಿ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರಿಗೆ ಅಧಿಕಾರವಿಲ್ಲ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಅದು ಮತ್ತೊಮ್ಮೆ ಸತ್ಯವಾಗಿದೆ. ಡಿಕೆಶಿ ದೊಡ್ಡವರು ಅವರ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಎಂದು ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ಸೋನಿಯಾಗಾಂಧಿಯವರು ನನ್ನ ಭಾರ ಕಡಿಮೆ ಮಾಡಿದ್ದಾರೆ.‌ಮುಂದಿನ‌ಹಾದಿ ಏನೆಂಬುದನ್ನು ನಾನು ಇನ್ನು ನಿರ್ಧರಿಸಿಲ್ಲ. ನಿನ್ನೆಯಿಂದ ಸಾವಿರಾರು ಪೋನ್ ಕರೆಗಳು ಬಂದಿವೆ. ನಾನು ಯಾವುದಕ್ಕೂ ಉತ್ತರಿಸಿಲ್ಲ. ಕಾಂಗ್ರೆಸ್ 2023 ರಲ್ಲಿ ಅಧಿಕಾರಕ್ಕೆ ಬರುವ ಕನಸಿನಲ್ಲಿದೆ. ಅದೇ ಕನಸಿನಲ್ಲಿಯೇ ಇರಲಿ. ಎಚ್ಚೆತ್ತುಕೊಳ್ಳುವುದು ಬೇಡ ಎಂದು ಇಬ್ರಾಹಿಂ ಟೀಕಿಸಿದ್ದಾರೆ.

ಇನ್ನು ಇಬ್ರಾಹಿಂ ಅಸಮಧಾನ ಹಾಗೂ ವಾಗ್ದಾಳಿ ಬಗ್ಗೆ ಸಿದ್ಧು ಪ್ರತಿಕ್ರಿಯೆ ನೀಡಿದ್ದು ಅವರು ನನ್ನ ಸ್ನೇಹಿತರು ನಾನು ಕರೆದು ಮಾತನಾಡುತ್ತೇನೆ ಎಂದಿದ್ದಾರೆ. ಅಲ್ಲದೇ ಡಿಕೆಶಿ ಕೂಡ ಇಬ್ರಾಹಿಂ ಅಸಮಧಾನ ಕ್ಕೆ ಪ್ರತಿಕ್ರಿಯೆ ನೀಡಿದ್ದು ಇಬ್ರಾಹಿಂ ನಮ್ಮ ಹಿರಿಯ ನಾಯಕರು ಅವರು ತಬ್ಬಿಯಲ್ಲ. ಎಲ್ಲವನ್ನು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಇನ್ನೊಂದೆಡೆ ಸಿ.ಎ.ಇಬ್ರಾಹಿಂ ಕಾಂಗ್ರೆಸ್ ತೊರೆಯುವ ಮಾತನಾಡುತ್ತಿದ್ದಂತೆ ಮಾಜಿ ಸಿಎಂ ಕುಮಾರಸ್ವಾಮಿ ಇಬ್ರಾಹಿಂ ರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಪರಿಷತ್ ವಿಪಕ್ಷ ಸ್ಥಾನ ಈಗ ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಗಿದೆ. ಡಿಕೆಶಿ ಹಾಗೂ ಸಿದ್ಧು ನಡುವೆ ಸಮನ್ವಯ ಮೂಡಿಸುವ ನಿಟ್ಟಿನಲ್ಲಿ ಬಿ.ಕೆ.ಹರಿಪ್ರಸಾದ್ ಗೆ ಪಟ್ಟ ಕಟ್ಟಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಸುಪ್ರೀಂ ಅಂಗಳದಲ್ಲಿ ಬಿಬಿಎಂಪಿ ಚುನಾವಣೆ ಭವಿಷ್ಯ: ಸರ್ಕಾರದ ವಿರುದ್ಧ ಮಾಜಿ ಕಾರ್ಪೋರೇಟರ್ ಶಿವರಾಜ್ ದೂರು

ಇದನ್ನೂ ಓದಿ : ಸಿದ್ಧರಾಮಯ್ಯರನ್ನು ವಲಸಿಗರಾಮಯ್ಯ ಎಂದ ಬಿಜೆಪಿ : ಮತ್ತೆ ಶುರುವಾಯ್ತು ಟ್ವೀಟ್ ವಾರ್

(Karnataka Legislative Assembly Congress member Muslim leader cm Ibrahim will resign to congress)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular