ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಂತೆಯೇ ಚುನಾವಣಾ ಕಣ ರಂಗೇರಿದೆ. ಮಾತ್ರವಲ್ಲ ಈಗಾಗಲೇ ಮೂರು ಪಕ್ಷಗಳು ಜನಮನ ಗೆಲ್ಲಲು ಸರ್ಕಸ್ ಆರಂಭಿಸಿದ್ದಾರೆ. ಈ ಮಧ್ಯೆ 2023 ರ ವಿಧಾನಸಭಾ ಚುನಾವಣೆಯಲ್ಲೂ ಕಿಂಗ್ ಮೇಕರ್ ಆಗೋ ಕನಸಿನಲ್ಲಿರೋ ಜೆಡಿಎಸ್ ಈಗಾಗಲೇ ಚುನಾವಣೆಗೆ ಅಭ್ಯರ್ಥಿಗಳನ್ನು ಫೈನಲ್ ಮಾಡೋ ಲೆಕ್ಕಾಚಾರ ಆರಂಭಿಸಿದೆ. ಈ ನಡುವಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ತಮ್ಮ ಕ್ಷೇತ್ರವನ್ನೇ ಬದಲಾಯಿಸಲು ಸಜ್ಜಾಗಿದ್ದಾರೆ.
ನಿನ್ನೆಯಷ್ಟೇ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಇಬ್ಬರೂ ಮಾತ್ರ ಸ್ಪರ್ಧಿಸುತ್ತಾರೆ ಎಂದಿರೋ ಕುಮಾರಸ್ವಾಮಿ ಇಂದು ಮೈಸೂರಿನಲ್ಲಿ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ತಮ್ಮ ಕುಟುಂಬ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಿದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು. ನನಗೆ ಮಗ ನಿಖಿಲ್ ಕುಮಾರಸ್ವಾಮಿ ರಾಜಕಾರಣಕ್ಕೆ ಬರೋದು ಇಷ್ಟವಿರಲಿಲ್ಲ. ಚುನಾವಣೆಗೆ ನಿಲ್ಲಿಸೋಕು ಮನಸ್ಸಿರಿಲಿಲ್ಲ. ಆದರೆ ಆ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಲು ಯಾರು ಮುಂದೇ ಬರದೇ ಇರೋದರಿಂದ ಮಗನನ್ನು ನಿಲ್ಲಿಸಬೇಕಾಯಿತು ಎಂದು ಸಮರ್ಥಿಸಿಕೊಂಡರು.
ಅಷ್ಟೇ ಅಲ್ಲ ಈ ಭಾರಿಯೂ ವಿಧಾನಸಭಾ ಚುನಾವಣೆಗೂ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಬೇಕೆಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ನಿಖಿಲ್ ರನ್ನು ಕಣಕ್ಕಿಳಿಸುವುದು ಅನಿವಾರ್ಯವಾಗಿದೆ. ನಾನು ಈಗಾಗಲೇ ನಮ್ಮ ಕುಟುಂಬದಿಂದ ಕೇವಲ ಎರಡೇ ಜನರು ಕಣಕ್ಕಿಳಿಯೋದು ಅಂತ ಘೋಷಿಸಿದ್ದೇನೆ. ಹೀಗಾಗಿ ಅನಿತಾ ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಂದು ಕುಮಾರಸ್ವಾಮಿ ಪುನರುಚ್ಛರಿಸಿದರು. ಆದರೆ ಇದೆಲ್ಲದಕ್ಕಿಂತ ಮುಖ್ಯವಾಗಿ ಪ್ರಸ್ತುತ ಚನ್ನಪಟ್ಟಣದ ಶಾಸಕರಾಗಿರೋ ಕುಮಾರಸ್ವಾಮಿ ಮುಂದಿನ ಚುನಾವಣೆಗೆ ತಮ್ಮ ಕ್ಷೇತ್ರ ಬದಲಾಯಿಸೋ ಮುನ್ಸೂಚನೆ ನೀಡಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ನಾಯಕರಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿರೋ ಜಿ.ಟಿ.ದೇವೇಗೌಡರು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ.
ಮಗನ ಟಿಕೇಟ್ ವಿಚಾರಕ್ಕೆ ಮುನಿಸಿಕೊಂಡಿರೋ ಜಿ.ಟಿ.ಡಿ ಕಾಂಗ್ರೆಸ್ ಗೆ ಸೇರೋ ಸಿದ್ಧತೆಯಲ್ಲಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಜೆಡಿಎಸ್ ನ ಭದ್ರಕೋಟೆಯಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ನವರನ್ನೇ ಸೋಲಿಸಿದ ಜಿಟಿಡಿ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ ಎಚ್ಡಿಕೆ ತಾವೇ ನಿಲ್ಲೋದಾಗಿ ಘೋಷಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಮೂಲಗಳ ಮಾಹಿತಿ ಪ್ರಕಾರ ಅನಿತಾ ಕುಮಾರಸ್ವಾಮಿ ಮುಂದಿನ ವಿಧಾನಸಭಾ ಎಲೆಕ್ಷನ್ ಗೆ ನಿಲ್ಲೋದಿಲ್ಲ ಎಂಬ ಹೇಳಿಕೆಗೆ ಸ್ವತಃ ಅನಿತಾ ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ. ನೀವು ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರೋವಾಗಲೇ ಹೀಗೆ ಘೋಷಿಸಿದ್ರೇ ನಾನು ಅಧಿಕಾರಿಗಳ ಸಭೆ ನಡೆಸೋದು ಹೇಗೆ ಎಂದು ಅನಿತಾ ಕುಮಾರಸ್ವಾಮಿ ಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರಂತೆ.
ಇಷ್ಟೇ ಅಲ್ಲ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿಯಲೂ ಅನಿತಾ ನಿರಾಕರಿಸಿದ್ದಾರಂತೆ. ಹೀಗಾಗಿ ಕುಮಾರಸ್ವಾಮಿ ಮನೆಯೊಳಗಿನ ಕಲಹ ತಪ್ಪಿಸಿಕೊಳ್ಳಲು ಅನಿತಾ ಕುಮಾರಸ್ವಾಮಿಗೆ ರಾಮನಗರ ಹಾಗೂ ತಮ್ಮ ಕ್ಷೇತ್ರ ಚನ್ನಪಟ್ಟಣವನ್ನು ಪುತ್ರ ನಿಖಿಲ್ ಕುಮಾರಸ್ವಾಮಿ ಗೆ ಬಿಟ್ಟುಕೊಡುತ್ತಾರೆ. ಹೀಗಾಗಿ ಗೆಲ್ಲುವ ಕುದುರೆಯಾಗಿರೋ ಚಾಮುಂಡೇಶ್ವರಿ ಯಲ್ಲಿ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರಂತೆ. ಒಟ್ಟಿನಲ್ಲಿ ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.
ಇದನ್ನೂ ಓದಿ : ಮುಂದಿನ ಚುನಾವಣೆಯಲ್ಲಿ ಅನಿತಾ ಸ್ಪರ್ಧಿಸಲ್ಲ: ಎಚ್‌ಡಿ ಕುಮಾರಸ್ವಾಮಿ ಘೋಷಣೆ ಹಿಂದಿದ್ಯಾ ಪುತ್ರ ವ್ಯಾಮೋಹದ ನಂಟು
ಇದನ್ನೂ ಓದಿ : ಮಹಿಳೆಯರ ಬಟ್ಟೆಯಿಂದ್ಲೇ ಪುರುಷರು ಉದ್ರೇಕಿತರಾಗ್ತಾರೇ ! ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ
(Channapatna to Chamundeshwari, HD Kumaraswamy change constituency)