ಬೆಂಗಳೂರು : ರಾಜ್ಯದಲ್ಲಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ( Basavaraj Bommai ) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು (Nalin kumar Kattel) ಅವರ ಬದಲಾವಣೆ ಸಂಗತಿ ಸದ್ದು ಮಾಡಿತ್ತು. ಆದ್ರೆ ಈ ಎಲ್ಲಾ ವಿವಾದಗಳಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ಅವರು ತೆರೆ ಎಳೆದಿದ್ದಾರೆ.

ನಾಳೆ ಬಿಜೆಪಿ ಸಂಘಟನಾ ಸಭೆ ಹಿನ್ನೆಲೆಯಲ್ಲಿ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ (Arun Singh) ನಗರಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಯಾಗಲಿದೆ ಎಂಬ ಸಂಗತಿ ಚರ್ಚೆಗೆ ಗ್ರಾಸವಾಗಿತ್ತು.ಸಭೆ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ಅರುಣ ಸಿಂಗ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದು ಎಲ್ಲ ವದಂತಿಗಳಿಗೆ ತೆರೆ ಅಂತ್ಯ ಹಾಡಿದ್ದಾರೆ.ಸದ್ಯ ನಾಯಕತ್ವ ಬದಲಾವಣೆಯಾಗಲಿ ಅಥವಾ ಸಿಎಂ ಬದಲಾವಣೆ ಪ್ರಸ್ತಾಪವಾಗಲಿ ನಮ್ಮ ಮುಂದಿಲ್ಲ. ಸಿಎಂ ಸ್ಥಾನದಲ್ಲಿ ಬೊಮ್ಮಾಯಿ (CM Basavaraj Bommai) ಹಾಗೂ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ (Nalin Kumar Kateel) ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅರುಣ ಸಿಂಗ್ ಸಮರ್ಥಿಸಿಕೊಂಡಿದ್ದಾರೆ. ಪಕ್ಷದ ಸಂಘಟನೆಗಾಗಿ ನಾನು ಬೆಂಗಳೂರಿಗೆ ಬಂದಿದ್ದೇನೆ ಎಂದಿರುವ ಅರುಣ್ ಸಿಂಗ್ ನಾಳೆ ಇಡಿ ದಿನ ಸಭೆ ನಡೆಯಲಿದೆ. ಪಕ್ಷಸಂಘಟನೆ,ಮುಂಬರುವ ಚುನಾವಣೆ ಸೇರಿದಂತೆ ಹಲವು ವಿಚಾರ ಚರ್ಚೆಗೆ ಬರಲಿದೆ ಎಂದಿದ್ದಾರೆ.

ಸಿಂಧಗಿಯಲ್ಲಿ ದೊಡ್ಡ ಅಂತರದಿಂದ ಗೆಲುವು ಸಾಧಿಸಿದ್ದೇವೆ.ಹಾನಗಲ್ ನಲ್ಲಿ ಸಣ್ಣ ಅಂತರದಲ್ಲಿ ಸೋತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ಅರುಣ ಸಿಂಗ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಇದೇ ವೇಳೆ ಬಿಜೆಪಿಯ ನಾಯಕತ್ವ ಬದಲಾವಣೆ ಸುದ್ದಿ ಕಾಂಗ್ರೆಸ್ ನವರು ಹಬ್ಬಿಸಿದ ರೂಮರ್ ಎಂದ ಅರುಣ ಸಿಂಗ್ ಕಾಂಗ್ರೆಸ್ ನವರು ದೇಶದ ಎಲ್ಲೆಡೆ ಸೋತಿದೆ ಎಂದು ಕಿಡಿಕಾರಿದ್ದಾರೆ.

ಡಿಕೆಶಿ ಹಾಗೂ ಸಿದ್ಧರಾಮಯ್ಯನವರಿಗೆ ಮಾಡಲು ಬೇರೆ ಕೆಲಸ ಇಲ್ಲ.ಹೀಗಾಗಿ ಅವರು ಬಿಜೆಪಿ ಬಗ್ಗೆ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅರುಣ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. 2023 ರ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದ ಅರುಣ್ ಸಿಂಗ್ ಪೆಟ್ರೋಲ್ ಡಿಸೇಲ್ ಬೆಲೆ ನಾವೇ ಕಡಿಮೆ ಮಾಡಿದ್ದೇವೆ.ಬಿಜೆಪಿ ಸಾಧನೆ ನಮಗೆ ಸಮಾಧಾನ ತಂದಿದೆ ಎಂದರು.
ಇದನ್ನೂ ಓದಿ : ಸರಕಾರಿ ನೌಕರರಿಗೆ ಮಹತ್ವದ ಆದೇಶ : ಅನ್ಯ ಮೂಲದ ಆದಾಯ ಘೋಷಣೆ ಕಡ್ಡಾಯ
ಇದನ್ನೂ ಓದಿ : ಅಧಿಕಾರಿಗಳು ಮಾಧ್ಯಮಗಳ ಮುಂದೆ ಬಾಯ್ಬಿಡುವಂತಿಲ್ಲ : ಸಚಿವ ಆರ್. ಅಶೋಕ್ ತಾಕೀತು
( Karnataka Chief Minister Basavaraj Bommai and President Nalin Kumar change hands in Karnataka : What Arun Singh said )