ಬೆಂಗಳೂರು : ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂಬ ಕಾರಣ ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಉಭಯ ಸದನಗಳಲ್ಲಿ ಬಿಜೆಪಿ ವಿರುದ್ಧ ಅಹೋರಾತ್ರಿ ಹೋರಾಟ ನಡೆಸಿದೆ. ಈ ಮಧ್ಯೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ (Rahul Gandhi) ಬುಲಾವ್ ಸಿದ್ದರಾಮಯ್ಯ ಸೇರಿದಂತೆ 15 ಹಿರಿಯ ನಾಯಕರಿಗೆ ಕರೆ ಮಾಡಿ ದೆಹಲಿಗೆ ಆಗಮಿಸುವಂತೆ ಸೂಚಿಸಿದ್ದಾರಂತೆ. ರಾಹುಲ್ ಗಾಂಧಿ ಸಮ್ಮುಖದಲ್ಲಿ ಫೆ. 25 ಅಥವಾ 26ಕ್ಕೆ ದೆಹಲಿಯಲ್ಲಿ ರಾಜ್ಯ ನಾಯಕರ ಸಭೆ ನಡೆಯಲಿದ್ದು ಇದಕ್ಕಾಗಿ ರಾಜ್ಯದ 15 ಹಿರಿಯ ಕಾಂಗ್ರೆಸ್ ನಾಯಕರಿಗೆ ಆಹ್ವಾನ ನೀಡಲಾಗಿದೆಯಂತೆ. ಈ ವೇಳೆ ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆ, ನಾಯಕತ್ವ ಸೇರಿದಂತೆ ಮುಖ್ಯವಾಗಿ ಮುಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರಮುಖವಾಗಿ 2023ರ ವಿಧಾನಸಭಾ ಚುನಾವಣೆ, ಸಾಮೂಹಿಕ ನಾಯಕತ್ವದ ಅಡಿ ಚುನಾವಣೆಗೆ ಹೋಗುವ ನಿರ್ಧಾರ, ತಂಡವಾಗಿ ಚುನಾವಣಾ ಜವಾಬ್ದಾರಿ ನಿರ್ವಹಿಸುವುದು, ಅಭ್ಯರ್ಥಿಗಳ ಹೆಸರನ್ನು ಬೇಗ ಅಂತಿಮಗೊಳಿಸುವುದು, ಬಿಜೆಪಿ ವಿರುದ್ಧ ಡಿಫೆನ್ಸೀವ್ ಬದಲು ಅಟ್ಯಾಕಿಂಗ್ ತಂತ್ರ ರೂಪಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ರಾಜ್ಯದ ನಾಯಕರಿಗೆ ರಾಹುಲ್ ಗಾಂಧಿ ಪಾಠ ಮಾಡಲಿದ್ದಾರಂತೆ.
ಇದಲ್ಲದೇ ಬಿಜೆಪಿ ಸೃಷ್ಟಿಸುವ ಕೋಮು ರಾಜಕಾರಣದ ಬಗ್ಗೆ, ಹಿಜಾಬ್ ನಂತಹ ಸೂಕ್ಷ್ಮ ವಿಷಯದಲ್ಲಿ ಕಾಂಗ್ರೆಸ್ ಇಡಬೇಕಾದ ಎಚ್ಚರಿಕೆಯ ನಡೆ ಬಗ್ಗೆ, ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿಯನ್ನು ಬಹಿರಂಗಗೊಳಿಸುವುದು ಹಾಗೂ ರಾಜ್ಯ ಬಿಜೆಪಿಯ ಅನಿಶ್ಚಿತತೆ, ಭ್ರಷ್ಟಾಚಾರ ವಿಷಯಗಳನ್ನು ಜನರ ಬಳಿ ಕೊಂಡೊಯ್ಯುವ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮುಖ್ಯವಾಗಿ ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಈ ಭಾರಿ ಚುನಾವಣೆ ಗೂ ಮುನ್ನವೇ ಸಿಎಂ ಅಭ್ಯರ್ಥಿ ಯನ್ನು ಘೋಷಿಸಿದೆ. ಇದೇ ರೀತಿ ಕರ್ನಾಟಕಕ್ಕೂ ಅಭ್ಯರ್ಥಿ ಘೋಚಿಸುತ ಸಾಧ್ಯತೆ ಇದೆ.
ಇನ್ನು ರಾಹುಲ್ ಗಾಂಧಿ ಆಹ್ವಾನದ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾನು ಅಧ್ಯಕ್ಷ ಆದಾಗಾ ಎಲ್ಲರಿಗೂ ಕರೆದುಕೊಂಡು ಹೋಗಬೇಕಿತ್ತು.ಆವತ್ತು ಅಗಿರಲಿಲ್ಲ. ಹೀಗಾಗಿ ಪ್ರಮುಖ ನಾಯಕರನ್ನು ಕರೆದುಕೊಂಡು ದೆಹಲಿಗೆ ಹೋಗ್ತಿದ್ದೇವೆ. ಅಲ್ಲಿ ನಮ್ಮ ಅಭಿಪ್ರಾಯ ನೀಡಲಿದ್ದೇವೆ. ಯಾರ್ ಯಾವ್ ಕೆಲ್ಸ ಮಾಡಬೇಕು. ಯಾವ ವಿಚಾರ ಎತ್ಕೊಂಡು ಕೆಲಸ ಮಾಡಬೇಕು ಅಂತ ಅಲ್ಲಿ ಹೇಳ್ತಾರೆ. ಈ ಬಗ್ಗೆ ಶಾಸಕರಿಗೆ ಟ್ರೈನಿಂಗ್ ಕೊಡಬೇಕು.ಹೈಕಮಾಂಡ್ ನೇತೃತ್ವದಲ್ಲಿ ತರಬೇತಿ ನಡೆಯುತ್ತೆ ಎಂದಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕೈ ಪಡೆ ಯನ್ನು ಚುನಾವಣೆಗೆ ಸಜ್ಜುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲು ಮುಹೂರ್ತ ನಿಗದಿ ಪಡಿಸಿದೆ.
ಇದನ್ನೂ ಓದಿ : ಬಸವರಾಜ ಹೊರಟ್ಟಿ ಬಿಜೆಪಿ ಸೇರ್ತಾರಾ? ಓದಿ ನಿಮ್ಮ ಅಭಿಪ್ರಾಯ ತಿಳಿಸಿ
ಇದನ್ನೂ ಓದಿ : ಮತ್ತೆ ಮುಖ್ಯಮಂತ್ರಿಯಾಗ್ತಿದ್ದಾರೆ ಬಿ.ಎಸ್.ಯಡಿಯೂರಪ್ಪ : ಸ್ಯಾಂಡಲ್ ವುಡ್ ಗೆ ರಾಜಾಹುಲಿ ಎಂಟ್ರಿ
Siddaramaiah and DK Sivakumar other leaders invited Delhi Rahul Gandhi