ಶಿಗ್ಗಾವಿ : ರಾಜ್ಯದಲ್ಲಿ ಎಲ್ಲೆಡೆ ಚುನಾವಣೆ ರಂಗೇರುತ್ತಿದ್ದು, ಈಗಾಗಲೇ ಕಾಂಗ್ರೇಸ್,ಬಿಜೆಪಿ, ಜೆಡಿಎಸ್ ಪಕ್ಷದ ಪಟ್ಟಿ ಬಿಡುಗಡೆಯಾಗಿದೆ. ಪಟ್ಟಿ ಬಿಡುಗಡೆ ಬೆನ್ನಲ್ಲೇ ಹೆಚ್ಚಿನ ನಾಯಕರು ಆಯಾ ಕ್ಷೇತ್ರದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಜೋರಾಗಿ ನಡೆಯುತ್ತಿದೆ. ಇನ್ನು ಕೆಲವೆಡೆ ಚುನಾವಣೆ ಪ್ರಚಾರ ಕಾರ್ಯಕ್ರಮ ಶುರುವಾಗಿದ್ದು, ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಬೆಂಬಲವಾಗಿ ಕೂಡ ಪ್ರಚಾರ ಕಾರ್ಯಕ್ರಮವನ್ನು ಶುರು ಮಾಡಿದ್ದಾರೆ. ಇದರಲ್ಲಿ ಸಿನಿರಂಗದ ನಟ, ನಟಿಯರು ಹೊರತಾಗಿಲ್ಲ. ಈಗಾಗಲೇ (Kichcha Sudeep – CM Bommai) ನಟ ಕಿಚ್ಚ ಸುದೀಪ್ ಸಿಎಂ ಬಸವರಾಜ್ ಬೊಮ್ಮಾಯಿ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿಕೊಂಡಿದ್ದು, ಅದರಂತೆ ತಮ್ಮ ಪ್ರಚಾರ ಕಾರ್ಯಕ್ರಮವನ್ನು ಶಿಗ್ಗಾವಿಯಿಂದಲೇ ಶುರು ಮಾಡಿರುವ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ನಟ ಕಿಚ್ಚ ಸುದೀಪ್ ಟ್ವೀಟ್‌ನಲ್ಲಿ, “ಶ್ರೀ ಕನಕದಾಸರು ಮತ್ತು ಶ್ರೀ ಸಂತ ಶಿಶುನಾಳರು ಹುಟ್ಟಿದ ಶಿಗ್ಗಾವಿ ತಾಲೂಕಿನಿಂದಲೆ ಪ್ರಚಾರ ಶುರು ಮಾಡುತ್ತಿರುವುದು ನಿಜಕ್ಕೂ ಹೆಮ್ಮ ಮತ್ತು ಸಂತೋಷದ ಸಂಗತಿ. ಎಲ್ಲರಿಗೂ ಶುಭವಾಗಲಿ” ಎಂದು ಜೆಪಿ ನಡ್ಡಾರೊಂದಿಗಿನ ಹಾಗೂ ಸಿಎಂ ಬೊಮ್ಮಾಯಿ ಪೋಟೋವನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತು. ಅದರ ಮೇಲೆ ಸ್ವತಃ ಸುದೀಪ್ ಅವರೇ ನಾನು ವ್ಯಕ್ತಿಗೆ ಬೆಂಬಲವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
🙏🏼…
— Kichcha Sudeepa (@KicchaSudeep) April 19, 2023
ಶ್ರೀ ಕನಕದಾಸರು ಮತ್ತು ಶ್ರೀ ಸಂತ ಶಿಶುನಾಳರು ಹುಟ್ಟಿದ ಶಿಗ್ಗಾವಿ ತಾಲೂಕಿನಿಂದಲೆ ಪ್ರಚಾರ ಶುರು ಮಾಡುತ್ತಿರುವುದು ನಿಜಕ್ಕೂ ಹೆಮ್ಮ ಮತ್ತು ಸಂತೋಷದ ಸಂಗತಿ. ಎಲ್ಲರಿಗೂ ಶುಭವಾಗಲಿ… pic.twitter.com/FGxR5GWImj
ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ನಟ ಸುದೀಪ್ (Kiccha Sudeep) ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು. ಬಿಜೆಪಿ ಪಕ್ಷ ನನ್ನನ್ನು ಕರೆದಿಲ್ಲ, ಬೊಮ್ಮಾಯಿ ಅವರು ಬೆಂಬಲ ಕೋರಿದ್ದಾರೆ. ಹೀಗಾಗಿ ನಾನು ಅವರನ್ನು ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತೇನೆ. ನಾನು ರಾಜಕೀಯಕ್ಕೆ ಬಂದಿಲ್ಲ. ಬಸವರಾಜ್ ಬೊಮ್ಮಾಯಿ ಅವರನ್ನು ಬೆಂಬಲಿಸುತ್ತಿದ್ದೇನೆ. ಬಿಜೆಪಿ ಪಕ್ಷಕ್ಕೆ ನನ್ನ ಬೆಂಬಲವಿದೆ, ಎಲ್ಲಾ ಕಡೆ ಹೋಗಿ ಪ್ರಚಾರ ಮಾಡಲು ಸಾಧ್ಯವಿಲ್ಲ. ಆದರೆ ಯಾರಿಗೆ ನನ್ನ ಅಗತ್ಯವಿದೆಯೋ ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ. ಬೇರೆ ಪಕ್ಷದಲ್ಲಿ ಇದ್ದವರು ಯಾರಾದ್ರೂ ನನ್ನ ಕಷ್ಟಕ್ಕೆ ನೆರವಾಗಿದ್ದವರು ಯಾರಾದ್ರೂ ಇದ್ರೆ ಖಂಡಿತವಾಗಿಯೂ ನಾನು ಅವರ ಪರವಾಗಿಯೂ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ : Former MLA Neeraja Reddy : ಭೀಕರ ಕಾರು ಅಪಘಾತ ; ಮಾಜಿ ಶಾಸಕಿ, ಬಿಜೆಪಿ ನಾಯಕಿ ನೀರಜಾ ರೆಡ್ಡಿ ಸಾವು
ಯಾವುದೇ ಕಾರಣಕ್ಕೂ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಅನಿವಾರ್ಯ ಕಾರಣಗಳಿಗೆ ನಾನು ನಿಲ್ಲುವುದಿಲ್ಲ. ನಾನು ಚುನಾವಣೆಗೆ ನಿಲ್ಲ ಬೇಕಾದ್ರೆ ಖಂಡಿತವಾಗಿಯೂ ಬಹಿರಂಗವಾಗಿ ಹೇಳಿಕೆಯನ್ನು ನೀಡುತ್ತೇನೆ. ನಾನು ಸಿನಿಮಾ ಬಿಟ್ಟು ರಾಜಕೀಯ ಮಾಡುವುದಿಲ್ಲ. ಬೊಮ್ಮಾಯಿ ಅವರಿಗೆ ಶೇ.100 ರಷ್ಟು ಬೆಂಬಲ ನೀಡುತ್ತೇನೆ. ದುಡ್ಡು ಪಡೆದು ಪ್ರಚಾರ ಮಾಡುವ ಅನಿವಾರ್ಯತೆ ನನಗೆ ಇಲ್ಲ. ಬೇರೆ ಕಡೆ ಹಣ ಮಾಡುವ ಕೆಪಾಸಿಟಿ ನನಗೆ ಇಲ್ವಾ ? ಸಿನಿಮಾ ರಂಗದಿಂದಲೇ ಸಾಕಷ್ಟು ಹಣ ಬರಬೇಕಾಗಿದೆ. ಅದನ್ನು ಕೊಡಿಸಿಕೊಡಿ ಎಂದಿದ್ದಾರೆ.
Kichcha Sudeep – CM Bommai : Actor Kichcha Sudeep started campaigning from Shiggavi