ಭಾನುವಾರ, ಏಪ್ರಿಲ್ 27, 2025
HomekarnatakaLok Sababha Election 2024 : ಕರಾವಳಿ - ಮಲೆನಾಡಲ್ಲಿ ಬಿಜೆಪಿ ಮೇಲುಗೈ : ಉಡುಪಿಯಲ್ಲಿ...

Lok Sababha Election 2024 : ಕರಾವಳಿ – ಮಲೆನಾಡಲ್ಲಿ ಬಿಜೆಪಿ ಮೇಲುಗೈ : ಉಡುಪಿಯಲ್ಲಿ ಕೋಟ, ಶಿವಮೊಗ್ಗದಲ್ಲಿ ಬಿವೈ ರಾಘವೇಂದ್ರ ಮುನ್ನಡೆ

- Advertisement -

Lok Sababha Election 2024 Karnataka : ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಬಿಜೆಪಿ ಭರ್ಜರಿ ಮುನ್ನೆಡೆಯನ್ನು ಕಾಯ್ದುಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೂ ಕೂಡ ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವತ್ತ ಮುಂದುವರಿದಿದೆ.

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕೋಟ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ಕ್ಷೇತ್ರದಿಂದ ಬಿವೈ ರಾಘವೇಂದ್ರ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬ್ರಿಜೆಶ್‌ ಚೌಟ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುನ್ನೆಡೆಯನ್ನು ಕಾಯ್ದುಕೊಂಡಿದ್ದಾರೆ.

Dk Shiva kumar, BY Yediyurappa HD Kumaraswami
Image Credit to Original Source

ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶೋಭಾ ಕರಂದ್ಲಾಜೆ ಅವರು ಕ್ಷೇತ್ರ ಬದಲಾವಣೆ ಮಾಡಿದ್ದು, ಬಿಜೆಪಿ ಹಿರಿಯ ಮುಖಂಡ ಕೋಟ ಶ್ರೀನಿವಾಸ ಪೂಜಾರಿ ಸ್ಪರ್ಧೆ ಮಾಡಿದ್ರು, ಆದರೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ ಆಗಿದ್ದ ಜಯಪ್ರಕಾಶ್‌ ಹೆಗ್ಡೆ ಹಿನ್ನಡೆ ಅನುಭವಿಸಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಬದಲು ಬ್ರಿಜೆಶ್‌ ಚೌಟ ಅವರು ಸ್ಪರ್ಧೆ ಮಾಡಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಅನಂತ ಕುಮಾರ್‌ ಹೆಗಡೆ ಅವರ ಬದಲು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪರ್ಧಿಸಿದ್ದರು.

ಇದನ್ನೂ ಓದಿ : Prajwal Revanna : ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ, ಮಂಡ್ಯದಲ್ಲಿ ಎಚ್‌ಡಿ ಕುಮಾರಸ್ವಾಮಿಗೆ ಮುನ್ನಡೆ

ಸದ್ಯ ಕರ್ನಾಟಕದಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ, 8 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ 3 ಕ್ಷೇತ್ರಗಳಲ್ಲಿ ಜೆಡಿಎಸ್‌ ಸದ್ಯ ಮುನ್ನಡೆಯನ್ನು ಕಾಯ್ದುಕೊಂಡಿದೆ. ಕರ್ನಾಟಕದಲ್ಲಿ ಕಳೆದ ಬಾರಿಗೆ ಹೋಲಿಕೆ ಮಾಡಿದ್ರೆ ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.  ಇನ್ನು ರಾಜ್ಯದ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಗೆಲುವಿನ ಸನಿಹದಲ್ಲಿದ್ರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್‌ ಅವರ ವಿರುದ್ದ ಸಿಎನ್‌ ಮಂಜುನಾಥ್‌ ಅವರು ಭರ್ಜರಿ ಮುನ್ನೆಡೆಯನ್ನು ಕಾಯ್ದುಕೊಂಡಿದ್ದಾರೆ.

PM Narendra Modi Rahul Gandhi
Image Credit to Original Source

ಇದನ್ನೂ ಓದಿ : Lok Sabha Election 2024 Result Live : ಲೋಕಸಭೆ ಚುನಾವಣೆ ಫಲಿತಾಂಶ 2024 : ಎನ್‌ಡಿಎ 271, ಐಎನ್‌ಡಿಐಎ 183 ಕ್ಷೇತ್ರಗಳಲ್ಲಿ ಮುನ್ನಡೆ: ಯಾರಿಗೆ ಕ್ಷೇತ್ರ ಯಾರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಇನ್ನು ರಾಷ್ಟ್ರ ರಾಜಕಾರಣದ ಲೆಕ್ಕಾಚಾರವನ್ನು ನೋಡಿದ್ರೆ ಎನ್‌ಡಿಎ ಮೈತ್ರಿ ಕೂಟ ಸದ್ಯ 292, ಇಂಡಿಯಾ ಮೈತ್ರಿ ಕೂಟ 201 ಹಾಗೂ ಇತರರು 50ಲೋಕಸಭಾ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಎನ್‌ಡಿಎ ಮೈತ್ರಿ ಕೂಟ ಸದ್ಯ ಮ್ಯಾಜಿಕ್‌ ಸಂಖ್ಯೆಯನ್ನು ಮೀರಿ ಮುನ್ನೆಡೆದಿದೆ. ಆದರೆ ಕಾಂಗ್ರೆಸ್‌ ಮುನ್ನೆಡೆಯನ್ನು ನೋಡಿದ್ರೆ ಸಮೀಕ್ಷೆಗಳು ತಲೆಕೆಳಗಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Noni Juice : ನೋನಿ ಜ್ಯೂಸ್‌ ಕುಡಿಯೋದು ಅಪಾಯಕಾರಿ : ಮಧುಮೇಹ ನಿಯಂತ್ರಣಕ್ಕೆ ಬರೋದು ನಿಜನಾ ?

Lok Sababha Election 2024 Karnataka Udupi Dk Shivamogga UK Bjp Lead

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular