ಸೋಮವಾರ, ಏಪ್ರಿಲ್ 28, 2025
HomekarnatakaHDK vs BJP : ಲಕ್ಕಿಡಿಪ್ ಸಿಎಂ ಕುಮಾರಸ್ವಾಮಿ : ಎಚ್.ಡಿಕೆ. ಗೆ ಬಿಜೆಪಿ ಟ್ವೀಟ್...

HDK vs BJP : ಲಕ್ಕಿಡಿಪ್ ಸಿಎಂ ಕುಮಾರಸ್ವಾಮಿ : ಎಚ್.ಡಿಕೆ. ಗೆ ಬಿಜೆಪಿ ಟ್ವೀಟ್ ಟಾಂಗ್

- Advertisement -

ಬೆಂಗಳೂರು : ಸದ್ಯ‌ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ನಡೆದಿದ್ದ ಟ್ವೀಟ್ ವಾರ್ ಈಗ ಎಚ್.ಡಿ.ಕುಮಾರಸ್ವಾಮಿಗೂ ವಿಸ್ತರಿಸಿದ್ದು, ಸಿಎಂ ವಿರುದ್ಧ ಗಂಡಸ್ತನ ಶಬ್ದ ಪ್ರಯೋಗ ಮಾಡಿದ್ದ ಎಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ (HDK vs BJP) ಟ್ವೀಟ್ ತಿರುಗೇಟು ನೀಡಿದೆ. ಮೊನ್ನೇ ಸಿಎಂ ಬೊಮ್ಮಾಯಿ ಟೀಕಿಸುವ ಭರದಲ್ಲಿ ಮಾಜಿಸಿಎಂ ಕುಮಾರಸ್ವಾಮಿ ಗಂಡಸ್ತನ ಎಂಬ ಶಬ್ದ ಪ್ರಯೋಗ ಮಾಡಿದ್ದರು. ಈ ಶಬ್ದ ಬಳಕೆಗೆ ಬಿಜೆಪಿ ಸೇರಿದಂತೆ ಎಲ್ಲ ಪಕ್ಷದವರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಗಂಡಸ್ತನದ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ತೀವ್ರ ಟೀಕೆಗೆ ಗುರಿಯಾದ ಕುಮಾರಸ್ವಾಮಿ ತಾನು ಅತಿಯಾದ ಆಕ್ರೋಶದ ನಡುವೇ ಈ ಪದ ಪ್ರಯೋಗ ಮಾಡಿದ್ದೇನೆ. ಅದಕ್ಕಾಗಿ ವಿಷಾದಿಸುತ್ತೇನೆ ಎಂದಿದ್ದರು. ಆದರೆ ಮಾಜಿ ಸಿಎಂ ಎಚ್ಡಿಕೆ ಹೇಳಿಕೆಗೆ ಈಗ ಬಿಜೆಪಿ ಖಡಕ್ ತಿರುಗೇಟು ನೀಡಿದ್ದು, ಬಾಯಿಗೆ ಬಂದಂತೆ ಮಾತನಾಡುವುದು ಆ ಬಳಿಕ ವಿಷಾದ ವ್ಯಕ್ತಪಡಿಸುವುದು ಸಾಂದರ್ಭಿಕ ಸಿಎಂ @hd_kumaraswamy ಅವರ ರಾಜಕೀಯ ವರಸೆ ಎಂದು ಕುಟುಕಿದೆ.

ಯಾವ ವಿಚಾರದಲ್ಲಿ ತನ್ನ ಮತಬ್ಯಾಂಕ್‌ ಗಟ್ಟಿಯಾಗುತ್ತದೋ ಆ ವಿಚಾರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಇವರ ಜಾಯಮಾನ. ಕುಮಾರಸ್ವಾಮಿ ಅವರೇ, ಗಂಡಸ್ತನದ ಬಗ್ಗೆ ಮಾತನಾಡುವುದರಲ್ಲಿ “ಪುರುಷಾರ್ಥ” ಅಡಗಿದೆಯೇ..? ಮಾನ್ಯ #LuckyDipCM ಕುಮಾರಸ್ವಾಮಿ ಅವರೇ, ಓತಿಕ್ಯಾತಕ್ಕೆ ಬೇಲಿಯ ಗೂಟ ಸಾಕ್ಷಿ ಎಂಬ ಗಾದೆ ಮಾತು ನೆನಪಿಸಿಕೊಳ್ಳಿ. ನಿಮ್ಮ ಜಾತ್ಯತೀತ ನಡೆ ಎಂಬುದು ಅವಕಾಶವಾದದ ಪರಿಷ್ಕೃತ ರೂಪ. ಅಧಿಕಾರ ಅನುಭವಿಸಲು ಏನೂ ಬೇಕಾದರೂ ಮಾಡಲು ಸಿದ್ದವಾಗಿರುವವರು ನೀವು ಎಂದು ಟೀಕಿಸಿದೆ.

ನಿಮ್ಮಿಂದ ಯಾವ ವ್ಯಕ್ತಿಯೂ, ಯಾವ ಸಂಘಟನೆಯೂ ಪಾಠ ಕಲಿಯಬೇಕಾಗಿಲ್ಲ ಎಂದಿರುವ ಬಿಜೆಪಿ, ಸಾಂದರ್ಭಿಕ ಕೂಸೊಂದು ಹಿಂದುತ್ವದ ಬಗ್ಗೆ ಹಿಂದೂ ಸಂಘಟನೆಗಳಿಗೆ ಪಾಠ ಮಾಡುತ್ತಿದೆ. ಹಿಂದೂ ಸಂಘಟನೆಗಳು ಅವರಂತೆ ಕೇವಲ ತನ್ನ ಕುಟುಂಬದ ಉನ್ನತಿಗಾಗಿ ಕೆಲಸ ಮಾಡುತ್ತಿಲ್ಲ. ಅವರು ಅಧಿಕಾರಕ್ಕಾಗಿ ಕಣ್ಣೀರು ಹಾಕುತ್ತಾರೆ. ಆದರೆ ಹಿಂದೂ ಸಂಘಟನೆಗಳು ಹಿಂದೂ ಸಮಾಜದ ಕಣ್ಣೀರು ಒರೆಸುವ ಕೆಲಸ ಮಾಡುತ್ತಿವೆ ಎಂದು ಬಿಜೆಪಿ ಹಿಂದೂಪರ ಸಂಘಟನೆಗಳ ಕಾರ್ಯವನ್ನು ಸಮರ್ಥಿಸಿಕೊಂಡಿದೆ. ಉಪಸಭಾಪತಿಯ ಕುರ್ಚಿಗೆ ಗಂಟುಬಿದ್ದು ಅದು ಸಿಗದಿದ್ದಾಗ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರಿರುವ ವ್ಯಕ್ತಿಯ ಸಮುದಾಯವನ್ನು ಮೆಚ್ಚಿಸಲು ಎಚ್‌ಡಿಕೆ ಸರ್ಕಸ್‌ ಮಾಡುತ್ತಿದ್ದಾರೆ ಎಂದು ಸಿ.ಎ.ಇಬ್ರಾಹಿಂ ಅವರನ್ನು ಜೆಡಿಎಸ್ ಗೆ ಸೇರಿಸಿಕೊಳ್ಳುವ ನಿರ್ಧಾರಕ್ಕೂ ಬಿಜೆಪಿ ಚಾಟಿ ಬೀಸಿದೆ.

ಅಲ್ಲದೇ ಕುಮಾರಸ್ವಾಮಿ ಕುಟುಂಬವನ್ನು ಡ್ರಾಮಾ ಕಂಪನಿ ಎಂದು ಟೀಕಿಸಿರುವ ಬಿಜೆಪಿ, ಇಂತಹ ಸದಾರಮೆ ನಾಟಕ ಕುಮಾರಸ್ವಾಮಿಗೆ ಹೊಸತಲ್ಲ. ಕುಮಾರ ಸ್ವಾಮಿಯ ರಾಜಕೀಯ ಜೀವನವೇ ಒಂದು ಡ್ರಾಮಾ. ಇವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ ಕುರ್ಚಿಗಾಗಿ ಮಾತುಮುರಿದು #ವಚನಭ್ರಷ್ಟ ಎನಿಸಿಕೊಂಡಿದ್ದು ನೆನಪಿದೆಯೇ ? ಎಂದು ಪ್ರಶ್ನಿಸಿದೆ‌. ಒಟ್ಟಿನಲ್ಲಿ ಗಂಡಸ್ತನದ ಬಗ್ಗೆ ಮಾತನಾಡಲು ಹೋಗಿ ಮುಜುಗರಕ್ಕಿಡಾದ ಕುಮಾರಸ್ವಾಮಿ ಗೆ ಈಗ ಬಿಜೆಪಿ ಟ್ವೀಟ್ ಮೂಲಕ ಸಖತ್ ಟಾಂಗ್ ನೀಡಿದೆ.

ಇದನ್ನೂ ಓದಿ : ಐಪಿಎಸ್ ಗೆ ಗುಡ್ ಬೈ ಎಂದ ಭಾಸ್ಕರ್ ರಾವ್ : ಸದ್ಯದಲ್ಲೇ ಬಿಜೆಪಿ ಸೇರ್ತಾರಾ ಖಡಕ್ ಖಾಕಿ

ಇದನ್ನು ಓದಿ :  ಮುಗಿಯದ ಸಂಪುಟ ಸಂಕಟ : ಸಚಿವ ಸ್ಥಾನಾಕಾಂಕ್ಷಿಗಳಿಗೆ ಕಹಿಯಾದ ಯುಗಾದಿ

Lucky Draw CM HD Kumaraswamy HDK vs BJP Tweet War

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular