MUDA SCAM; ಮೈಸೂರು : ಮುಡಾ ಹಗರಣ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದು ಕೂತಿವೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಮೊನ್ನೆ ಸಿಎಂ ಸಿದ್ದರಾಮಯ್ಯ ಅರ ಪತ್ನಿ ಪಾರ್ವತಿ ಸಿದ್ದರಾಮಯ್ಯ( Parvathi Siddaramaiah) ಅವರು ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರವೊಂದನ್ನು ಬರೆದು ಎಲ್ಲಾ 14 ಸೈಟುಗಳನ್ನು ನಾನು ವಾಪಾಸ್ ನೀಡುತ್ತೇನೆ ಎಂದು ತಿಳಿಸಿದ್ದರು. ಇನ್ನು ಎರಡು ಪುಟಗಳ ಆ ಪತ್ರವನ್ನು ತೀರಾ ಭಾವುಕರಾಗಿ ಪಾರ್ವತಿ ಸಿದ್ದರಾಮಯ್ಯಅ ಅವರು ಬರೆದಿದ್ದರು.

ಈ ಸೈಟುಗಳನ್ನು ನನಗೆ ನನ್ನ ಸಹೋದರ ಅರಿಶಿನ ಕುಂಕುಮದ ಭಾಗವಾಗಿ ಕೊಟ್ಟಿದ್ದರು. ಆದರೆ ಇದೇ ಸೈಟು ನನ್ನ ಪತಿ ರಾಜಕೀಯ ಜೀವನಕ್ಕೆ ಮುಳುವಾಗುತ್ತೆ ಅನ್ನೋದಾದ್ರೆ ನನಗೆ ಅದು ಬೇಡ. ನನಗೆ ಅವರ ಘನತೆ, ಗೌರವಕ್ಕಿಂತ ಯಾವುದೂ ಕೂಡ ಹೆಚ್ಚಲ್ಲ. ಆದ್ದರಿಂದ ಈ ಸೈಟುಗಳನ್ನು ವಾಪಾಸ್ ನೀಡುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಇದನ್ನು ವಿಪಕ್ಷಗಳು ಕಳ್ಳ ಕದ್ದ ಮಾಲನ್ನು ವಾಪಾಸ್ ನೀಡಿದರೆ ಆತ ಕದ್ದಿಲ್ಲ ಅನ್ನೋದು ಸುಳ್ಳಾಗುತ್ತಾ ಎಂದು ಟೀಕಿಸಿದ್ದವು.
ಇದರ ಬೆನ್ನಲ್ಲೇ ನಿನ್ನೆ ಮೈಸೂರು ನಗರ ಪ್ರಾಧಿಕಾರ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ನೀಡಿದ ಸೈಟನ್ನು ವಾಪಾಸ್ ಪಡೆಯಲು ಒಪ್ಪಿಗೆ ನೀಡಿದೆ. ಇನ್ನು ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರೇ ಸಬ್ ರಿಜಿಸ್ಟರ್ ಕಚೇರಿಗೆ ಬಂದು 14 ನಿವೇಶನಗಳ ಖಾತೆಯನ್ನು ರದ್ದು ಪಡಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ಮುಂದುವರಿದ ಕೇಂದ್ರ ಸಚಿವ ಮತ್ತು ಐಪಿಎಸ್ ಅಧಿಕಾರಿ ವಾರ್; ಎಡಿಜಿಪಿ ವಿರುದ್ಧ ಡಿಜಿಪಿ ದೂರು ಸಲ್ಲಿಸಿದ ಜೆಡಿಎಸ್

ಇನ್ನು ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿರುವ ಮೈಸೂರು ಮುಡಾ ಆಯುಕ್ತ ರಘುನಂದನ್ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಖುದ್ದು ಅವರೇ ಬಂದು ತಮಗೆ ನೀಡಿದ 14 ಸೈಟ್ ಗಳನ್ನು ಮುಡಾಗೆ ಮರಳಿ ನೀಡಿದ್ದಾರೆ. ಈ ಎಲ್ಲಾ 14 ಸೈಟ್ ಗಳ ಕ್ರಯಪತ್ರವನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ. ಇನ್ನು ಪಾರ್ವತಿ ಸಿದ್ದರಾಮಯ್ಯ ಅವರು ಸ್ವ ಇಚ್ಛೆಯಿಂದ 14 ಸೈಟ್ ಗಳ ಕ್ರಯಪತ್ರವನ್ನು ರದ್ದುಗೊಳಿಸಿದ್ದಾರೆ ಎಂದು ಮುಡಾ ಆಯುಕ್ತ ರಘುನಂದನ್ ಸ್ಪಷ್ಟಪಡಿಸಿದ್ದಾರೆ.ಇದ ಮಧ್ಯೆ ನಾನೇನು ತಪ್ಪು ಮಾಡಿಲ್ಲ ಹಾಗಾಗಿ ರಾಜೀನಾಮೆ ನೀಜುವ ಪ್ರಶ್ನೆಯೇ ಬರಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ ಹನ್ನೊಂದನೇ ಸೀಸನ್ ಗ್ರ್ಯಾಂಡ್ ಓಪನಿಂಗ್ ದಿನವೇ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಸೀಸನ್ ಐದರ ಸ್ಪರ್ಧಿ!
Muda agreed to take back 14 sites from Parvathi Siddaramaiah