ಮಂಗಳವಾರ, ಏಪ್ರಿಲ್ 29, 2025
HomekarnatakaBrahmanda astrology JDS Government : ಮುಂದಿನ ಚುನಾವಣೆಯಲ್ಲಿ ಜೆಡಿ ಎಸ್ ಅಧಿಕಾರಕ್ಕೆ: ಸಂಚಲನ ಮೂಡಿಸಿದ...

Brahmanda astrology JDS Government : ಮುಂದಿನ ಚುನಾವಣೆಯಲ್ಲಿ ಜೆಡಿ ಎಸ್ ಅಧಿಕಾರಕ್ಕೆ: ಸಂಚಲನ ಮೂಡಿಸಿದ ರಾಜಕೀಯ ಭವಿಷ್ಯ

- Advertisement -

ಬೆಂಗಳೂರು : Brahmanda astrology JDS Government : ಈಗಾಗಲೇ ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಸಿದ್ಧತೆ ಜೋರಾಗಿದೆ. ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳು ಕೂಡ ಚುನಾವಣೆಯಲ್ಲಿ ಅಧಿಕಾರಕ್ಕೆರಲೂ ಸರ್ಕಸ್ ನಡೆಸಿದ್ದಾರೆ. ರಾಜಕೀಯ ಸಮೀಕ್ಷೆಗಳು ಒಂದೆಡೆ ಅಧಿಕಾರಕ್ಕೇರೋದು ಯಾರು ಎಂಬುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸೋದರಲ್ಲಿ ಬ್ಯುಸಿಯಾಗಿದ್ದರೇ, ಇನ್ನೊಂದೆಡೆ ಭವಿಷ್ಯಕಾರರು ಕೂಡ ರಾಜಕೀಯ ವಿಶ್ಲೇಷಣೆಯಲ್ಲಿ ಹಿಂದಕ್ಕೆ ಬಿದ್ದಿಲ್ಲ. ಈಗ ಜ್ಯೋತಿಷ್ಯಿಯೊಬ್ಬರು ಮುಂದಿನ ಭಾರಿ ಜೆಡಿಎಸ್ ಅಧಿಕಾರಕ್ಕೆರಲಿದೆ ಎಂದು ಭವಿಷ್ಯ ನುಡಿದು ಸಂಚಲನ ಮೂಡಿಸಿದ್ದಾರೆ.

ಹಲವಾರು ರಿಯಾಲಿಟಿ ಶೋ ಹಾಗೂ ಭವಿಷ್ಯ ಕಾರ್ಯಕ್ರಮದ ಮೂಲಕವೇ ಪ್ರಸಿದ್ಧಿಗೆ ಬಂದ ಬ್ರಹ್ಮಾಂಡ ಗುರೂಜಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಅಲ್ಲದೇ ಜೆಡಿ ಎಸ್ ಅಧಿಕಾರ‌ರಚಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಹಾಸನದ ಅಧಿಶಕ್ತಿ ಹಾಸನಾಂಬೆ ದರ್ಶನ ಪಡೆದ ಬ್ರಹ್ಮಾಂಡ ಗುರೂಜಿ , ದರ್ಶನದ ಬಳಿಕ ಮಾಧ್ಯಮದ ಜೊತೆ ಮಾತನಾಡಿ, ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೇರಲಿದೆ ಎಂದು ನನಗೆ ಅನ್ನಿಸುತ್ತಿದೇ ಎಂದಿದ್ದಾರೆ.

ಅಲ್ಲದೇ ದೇವೇಗೌಡರ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ ದೇವಿ ಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಲು ರೇವಣ್ಣನವರು ಮನವಿ ‌ಮಾಡಿದರು. ನಾನು ಪ್ರಾರ್ಥನೆ ಮಾಡಿಕೊಂಡಿದ್ದೇನೆ. ಮಾತ್ರವಲ್ಲ ರೇವಣ್ಣನವರಿಗೆ ದೇವೆಗೌಡರ ಆರೋಗ್ಯಕ್ಕಾಗಿ ಕೆಲವು ಸೂಚನೆ ನೀಡಿದ್ದೇನೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ಅಲ್ಲದೇ ನಾನು ಯಾವುದೇ ಪಕ್ಷಪಾತದ ಮಾತಾನಾಡುತ್ತಿಲ್ಲ. ನಾಳೆ ನನ್ನ ಬಳಿ ಬಿ.ಎಸ್.ಯಡಿಯೂರಪ್ಪನವರು ಬಂದು ಸಲಹೆ ಕೇಳಿದರೂ ವೃದ್ಧಾಪ್ಯದಲ್ಲಿ ಇರುವವರಿಗೆ ಆರೋಗ್ಯ ನೋಡಿಕೊಳ್ಳಿ ಎಂದೇ ಸೂಚನೆ ಕೊಡುತ್ತೇನೆ.

ಅಷ್ಟೇ ಅಲ್ಲ ಸಿದ್ಧರಾಮಯ್ಯನವರು ಬಂದ್ರೂ ನಾನು ಇದೇ ಸಲಹೆ ಕೊಡುತ್ತೇನೆ ಎಂದಿದ್ದಾರೆ. ಮಾತ್ರವಲ್ಲ ಬ್ರಹ್ಮಾಂಡ ಗುರೂಜಿ ದೇವೆಗೌಡರು ಸೇವೆಯನ್ನು ಬ್ರಹ್ಮಾಂಡ ಗುರೂಜಿ ಕೊಂಡಾಡಿದರು. ಕರ್ನಾಟಕದಿಂದ ರೈತರ ಪ್ರತಿನಿಧಿಯಾಗಿ ಎಚ್.ಡಿ.ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾರೆ. ಮಾತ್ರವಲ್ಲ ಲೋಕೋಪಯೋಗಿ ಸಚಿವರಾಗಿ ,ಪ್ರಧಾನಮಂತ್ರಿಯಾಗಿ ಎಲ್ಲಾ ಪ್ರಾಜೆಕ್ಟ್ ಗೂ ಅನುಮತಿ ನೀಡಿದವರು ದೇವೆಗೌಡರು ಮಾತ್ರ ಎಂದು ದೊಡ್ಡ ಗೌಡರ ಸಾಧನೆಯನ್ನು ಬ್ರಹ್ಮಾಂಡ ಗುರೂಜಿ ಸ್ಮರಿಸಿದ್ದಾರೆ.

ಸದ್ಯ ರಾಜಕೀಯ ವಲಯದಲ್ಲಿ ಬ್ರಹ್ಮಾಂಡ ಗುರೂಜಿ ಭವಿಷ್ಯ ತೀವ್ರ ಚರ್ಚೆಗೆ ಗುರಿಯಾಗಿದೆ. ಈಗಾಗಲೇ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಹಲವು ಕಾರ್ಯಕ್ರಮದಲ್ಲಿ ಮುಂದಿನ ಚುನಾವಣೆಯಲ್ಲಿ ನಾವೇ ಸರ್ಕಾರ ರಚನೆ ಮಾಡೋದು ಎಂದು ಘೋಷಿಸುತ್ತಲೇ ಬಂದಿದ್ದು ಈಗ ಬ್ರಹ್ಮಾಂಡ ಗುರೂಜಿ ಮಾತು ಮತ್ತಷ್ಟು ಬಲ ತುಂಬಿದೆ.

ಇದನ್ನೂ ಓದಿ : Appu Ambulance : ಪುನೀತ್ ರಾಜ್ ಕುಮಾರ್ ನೆನಪು ಅಮರವಾಗಿಸಲು ಮುಂದಾದ ನಟ ಯಶ್ : ರಾಜ್ಯದ ಪ್ರತಿ ಜಿಲ್ಲೆಗೂ ಅಪ್ಪು ಅಂಬುಲೆನ್ಸ್

ಇದನನು ಓದಿ : Flight turbulence: ಅಡ್ಡಾ ದಿಡ್ಡಿ ಹಾರಿದ ವಿಮಾನ.. ಪ್ರಯಾಣಿಕರ ಪಾಡು ಏನಾಗಿದೆ ನೋಡಿ

Next time JDS Government inn Karnataka Brahmanda guruji Narendra babu sharma astrology

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular