ಮಂಗಳವಾರ, ಏಪ್ರಿಲ್ 29, 2025
Homekarnatakaಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಡೀಲ್ ರಾಜ ಎಂದ ಕಾಂಗ್ರೆಸ್ ನಾಯಕರು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಡೀಲ್ ರಾಜ ಎಂದ ಕಾಂಗ್ರೆಸ್ ನಾಯಕರು

- Advertisement -

ಬೆಂಗಳೂರು : ರಾಜಕೀಯದಲ್ಲಿ ಯಾರನ್ನು ಯಾರು ಯಾವಾಗ ಹೊಗಳುತ್ತಾರೋ, ತೆಗಳುತ್ತಾರೋ ಗೊತ್ತೇ ಆಗೋದಿಲ್ಲ. ಇಷ್ಟು ದಿನ ತೆರೆ ಮರೆಯಲ್ಲಿ ನಡೆಯುತ್ತಿದ್ದ ಭಿನ್ನಮತ ಸ್ಪೋಟಗೊಂಡಿದೆ. ಅದ್ರಲ್ಲೂ ಕಾಂಗ್ರೆಸ್‌ ಒಡೆದ ಮನೆ ಅನ್ನೋದು ಇದೀಗ ಜಗಜಾಹೀರಾತಾಗಿದೆ. ಜೊತೆಗೆ ಇದೀಗ ಕಾಂಗ್ರೆಸ್‌ ನಾಯಕರೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಡೀಲ್‌ ರಾಜ ಎಂದು ಕರೆದಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಡಿಕೆ ಶಿವಕುಮಾರ್ ಕೋಟಿ ಕೋಟಿ ಡೀಲ್ ನಡೆಸಿದ್ದಾರೆ ಎಂದು ಆರೋಪ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಈ ನಡುವಲ್ಲೇ ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿಯ ಸಲೀಂ ಹಾಗೂ ವಿಎಸ್ ಉಗ್ರಪ್ಪನವರು ಸುದ್ದಿಗೋಷ್ಠಿಗೂ ಮೊದಲು ಗುಸುಗುಸು ರೀತಿಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಮಾತನಾಡೋದು ಬಹಿರಂಗವಾಗಿದೆ.

ಇದನ್ನೂ ಓದಿ: ಆಧುನಿಕ ಮಹಿಳೆಯರು ಮಕ್ಕಳಿಗೆ ಜನ್ಮ ನೀಡಲ್ಲ, ಒಬ್ಬಂಟಿಯಾಗಿರಲು ಬಯಸುತ್ತಾರೆ : ಸಚಿವ ಸುಧಾಕರ್‌

ಸಲೀಂ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಿದ್ದಾರೆ. ಡಿಕೆಶಿ ಕೋಟಿ ಕೋಟಿ ಡೀಲ್ ಮಾಡಿದ್ದಾರೆ. ಅವರ ಬಳಿಯೇ ಹಾಗೆ ಆದ್ರೇ.. ಅವರ ಹುಡುಗರ ಬಳಿಯಲ್ಲಿ 50 ರಿಂದ 100 ಕೋಟಿವರೆಗೆ ಇದೆ ಎಂದು ಮಾತನಾಡಿಕೊಂಡಿದ್ದಾರೆ.

ಈ ವೇಳೆ ವಿಎಸ್ ಉಗ್ರಪ್ಪನವರು ನಾನೇ ಪಟ್ಟು ಹಿಡಿದು ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದು, ಈಗ ಅವರದ್ದು ನಡೆಯುತ್ತಾ ಇಲ್ಲ ಎನ್ನತ್ತಲೂ ಹೇಳಿರೋದು ಬಹಿರಂಗವಾಗಿದೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೋಟಿ ಡೀಲ್.? ಮಾಡಿದ್ದಾರಾ ಎನ್ನುವ ಅನುಮಾನ ಹುಟ್ಟು ಹಾಕಿದೆ.

ಇದನ್ನೂ ಓದಿ: ಸುಳ್ಯ ಕೋರ್ಟ್‌ಗೆ ಡಿ.ಕೆ.ಶಿವಕುಮಾರ್‌ ಹಾಜರ್‌ : ಕಲಾಪದ ವೇಳೆ ಹೊಯ್ತು ಕರೆಂಟ್‌ !

ಅಲ್ಲದೇ ಡಿಕೆಶಿ ಬಗ್ಗೆ ತೆಗಳಿಕೆಯ ಮಾತು, ಮಾಜಿ ಸಿ ಎಮ್‌ ಸಿದ್ದರಾಮಯ್ಯ ಬಗ್ಗೆ ಹೊಗಳಿಕೆ ಕೇಳಿ ಬಂದಿದೆ. ವೇದಿಕೆಯಲ್ಲೇ ಕಾಂಗ್ರೆಸ್ ನ ತೆರೆಮರೆಯ ಅಸಮಾಧಾನ ಈಗ ರಾಜ್ಯದ ಜನತೆಯ ಎದುರು ಸ್ಪೋಟಗೊಂಡಿದೆ.

(Congress leaders say KPC president D K Sivakumar is a deal king)

RELATED ARTICLES

Most Popular