ಬೆಂಗಳೂರು : ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಏಕವಚನದಲ್ಲಿ ಮಾತನಾಡಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕರ್ನಾಟಕ ಬಿಜೆಪಿ ಟ್ವಿಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದೆ. ಸಿದ್ದರಾಮಯ್ಯನವರೇ, ಸಂವಿಧಾನಿಕ ಹುದ್ದೆಯಲ್ಲಿರುವ ಪ್ರಧಾನಿಯ ಕುರಿತು ಏಕವಚನದಲ್ಲಿ ಮಾತನಾಡುವ ಮುನ್ನ ಎಚ್ಚರವಹಿಸಿ ಎಂದು ಬಿಜೆಪಿ ಟ್ವಿಟ್ ಮಾಡಿದೆ.
ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಕರ್ನಾಟಕ ಬಿಜೆಪಿ, ಜನರಿಂದ ನಿರಂತರ ಎರಡನೇ ಅವಧಿಗೆ ಆಯ್ಕೆಯಾದ ಪ್ರಧಾನ ಸೇವಕ ಅಲಂಕರಿಸಿರುವ ಪ್ರಧಾನಿ ಹುದ್ದೆಯ ಕುರಿತು ಕೀಳು ಮಟ್ಟದಲ್ಲಿ ಮಾತನಾಡಿ ನಿಮ್ಮಕೀಳು ಸಂಸ್ಕಾರ ಅನಾವರಣ ಮಾಡಿಕೊಂಡಿದ್ದೀರಿ.
ಇದನ್ನೂ ಓದಿ: ಕರ್ನಾಟಕ ಬಿಟ್ಟು ದೆಹಲಿಗೆ ಬರಲಾರೆ : ಸೋನಿಯಾ ಆಹ್ವಾನ ತಿರಸ್ಕರಿಸಿದ ಸಿದ್ದರಾಮಯ್ಯ
ಸರ್ಕಾರಿ ಬಂಗಲೆಯಲ್ಲೇ ಉಳಿಯಬೇಕೆಂಬ ಹಟಕ್ಕೆ ಪ್ರತಿಪಕ್ಷ ಸ್ಥಾನ ಪಟ್ಟು ಹಿಡಿದು ಉಳಿಸಿಕೊಂಡ ನಿಮ್ಮಂತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದೆ. ನಿಮ್ಮ ದುರಹಂಕಾರ ಮಿತಿ ಮೀರುತ್ತಿದೆ. ಮಾಜಿ ಮುಖ್ಯಮಂತ್ರಿಯೊಬ್ಬರಿಂದ ಸಾಂವಿಧಾನಿಕ ಹುದ್ದೆಯಾದ ಪ್ರಧಾನ ಮಂತ್ರಿ ಮೇಲೆ ಪ್ರಯೋಗವಾದ ಪದವನ್ನು ಹೇಗೆ ಅರಗಿಸಿಕೊಂಡಿರಿ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ( BJP ) ಕಿಡಿ ಕಾರಿದೆ.
ಸಿದ್ದರಾಮಯ್ಯನವರೇ ಮಾತೆತ್ತಿದರೆ ನಾನು ಹಳ್ಳಿಯವನು, ನಾನು ಮಾತನಾಡುವ ಶೈಲಿ ಹೀಗೆ ಎನ್ನುವ ನಿಮಗೆ ಗ್ರಾಮೀಣ ಸಂಸ್ಕೃತಿಯ ಅರಿವೇ ಇಲ್ಲ. ಅನ್ಯರನ್ನು ಪ್ರೀತಿ, ಬಹುವಚನ, ಆದರದಿಂದ ಮಾತನಾಡುವುದು ಗ್ರಾಮೀಣ ಸಂಸ್ಕೃತಿ. ಆದರೆ ನಿಮ್ಮಂಥ ‘ಮನೆಮುರುಕರು’ ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಎಂದುಕೊಂಡಿದ್ದಾರೆ ಎಂಬುದಾಗಿ ವಾಗ್ದಾಳಿ ನಡೆಸಿದೆ.
(Siddaramaiah abuses Prime Minister Narendra Modi in a singular manner: BJP warns)